ಏಪ್ರಿಲ್‌ 14- ದೊಡ್ಡ ಗುಡ್‌ನ್ಯೂಸ್‌ ಕೊಡಲಿರೋ ನಟ ಕಿಚ್ಚ ಸುದೀಪ್!‌ ಏನದು?

ಕಿಚ್ಚ ಸುದೀಪ್‌ ಅವರು ಫಿಟ್‌ನೆಸ್‌ ಕುರಿತ ಪೋಸ್ಟ್‌ ಹಂಚಿಕೊಂಡಿದ್ದು, ಏಪ್ರಿಲ್‌ 14ಕ್ಕೆ ಗುಡ್‌ನ್ಯೂಸ್‌ ಕೊಡುವ ರೀತಿ ಕಾಣ್ತಿದೆ.

ಹೌದು, ಕಿಚ್ಚ ಸುದೀಪ್‌ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ ಎಂದು ಕಾಣುತ್ತಿದೆ. ಹೀಗಾಗಿ ಅವರು ಕೆಲ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ನಟ ಕಿಚ್ಚ ಸುದೀಪ್‌ ಅವರು ʼಮ್ಯಾಕ್ಸ್ʼ ಸಿನಿಮಾ ಹಿಟ್‌ ಆದ ಬಳಿಕ ಕ್ರಿಕೆಟ್‌ನತ್ತ ಮುಖ ಮಾಡಿದರು. ಸೆಲೆಬ್ರೀಟ್‌ ಲೀಗ್‌ನಲ್ಲಿ ಆಡಿದ್ದರು. 


ಈಗ ಮತ್ತೆ ಅವರು ಸಿನಿಮಾದತ್ತ ಗಮನ ಕೊಡುತ್ತಿದ್ದಾರೆ. ಹೀಗಾಗಿ ಅವರು ಹೊಸ ಸಿನಿಮಾ ಬಗ್ಗೆ ಮಾಹಿತಿ ಕೊಡಬಹುದು ಎಂದು ಕಾಣುತ್ತದೆ.
 

ಕಿಚ್ಚ ಸುದೀಪ್‌ ಅವರು ಈ ಬಾರಿ ಯಾವ ರೀತಿಯ ಸಿನಿಮಾ ಮಾಡಲಿದ್ದಾರೆ? ಏನು ಕತೆ ಎಂದು ವೀಕ್ಷಕರು ಸಿಕ್ಕಾಪಟ್ಟೆ ಕುತೂಹಲದಿಂದಿದ್ದಾರೆ. 


ಕನ್ನಡ ನಟ ಕಿಚ್ಚ ಸುದೀಪ್‌ ಅವರು ʼಪೈಲ್ವಾನ್ʼ‌ ಸಿನಿಮಾ ನಂತರದಲ್ಲಿ ಫಿಟ್‌ನೆಸ್‌ ಕಡೆಗೆ ಗಮನ ಕೊಡಲು ಆರಂಭಿಸಿದರು. ʼಪೈಲ್ವಾನ್ʼ‌ ಸಿನಿಮಾಕ್ಕೋಸ್ಕರ ಕಿಚ್ಚ ಸುದೀಪ್‌ ಅವರು ಭಾರೀ ತಯಾರಿ ಮಾಡಿದ್ದರು. 
 

ಇನ್ನು ʼಬಿಗ್‌ ಬಾಸ್‌ ಕನ್ನಡʼ ಶೋ ನಿರೂಪಣೆ ಮಾಡೋದಿಲ್ಲ ಎಂದು ಕಿಚ್ಚ ಸುದೀಪ್‌ ಅವರೇ ಹೇಳಿದ್ದರು. ಆದರೂ ಕೂಡ ವಾಹಿನಿಯೇ ಈ ಬಗ್ಗೆ ಮತ್ತೆ ಒಪ್ಪಿಸಲು ಟ್ರೈ ಮಾಡುವುದಂತೆ. 

ಒಟ್ಟಿನಲ್ಲಿ ಕನ್ನಡ ನಟ ಕಿಚ್ಚ ಸುದೀಪ್‌ ಅವರು ಮುಂದಿನ ಸೀಸನ್‌ ನಿರೂಪಣೆ ಮಾಡುತ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ. 

Latest Videos

click me!