ಈ ವರ್ಷದ ಬಹು ನಿರೀಕ್ಷಿತ ಕನ್ನಡ ಸಿನಿಮಾಗಳು… ಯಾವ ಸಿನಿಮಾಗೆ ನೀವು ಕಾಯುತ್ತಿದ್ದೀರಿ?

Published : May 26, 2026, 09:35 PM IST

Most expected sandalwood movies: ಚಂದನವನದಲ್ಲಿ ಈ ವರ್ಷ ಹಲವಾರು ಸಿನಿಮಾಗಳು ತೆರೆ ಕಾಣಲು ಸಜ್ಜಾಗಿವೆ. ಅವುಗಳಲ್ಲಿ ಕೆಲವು ಸಿನಿಮಾ ಬಿಡುಗಡೆಗೆ ಜನ ತುದಿ ಕಾಲಲ್ಲಿ ಕಾಯುತ್ತಿದ್ದಾರೆ. ಅಂತಹ ಸಿನಿಮಾಗಳು ಯಾವುವು ನೋಡೋಣ? ಅಂದ ಹಾಗೇ ನೀವು ಯಾವ ಸಿನಿಮಾಕ್ಕಾಗಿ ಕಾಯುತ್ತಿದ್ದೀರಿ? 

PREV
19
ಈ ವರ್ಷದ ಬಹು ನಿರೀಕ್ಷಿತ ಕನ್ನಡ ಸಿನಿಮಾಗಳು

ಈ ವರ್ಷ ತೆರೆಕಾಣಲಿರುವ ಬಹು ನಿರೀಕ್ಷಿತ ಕನ್ನಡ ಸಿನಿಮಾಗಳು ಯಾವುವು ನೋಡೋಣ.

29
ಟಾಕ್ಸಿಕ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್. ಮಾರ್ಚ್ ನಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾ ಇನ್ನು ಯಾವಾಗ ಬಿಡುಗಡೆಯಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಗೀತೂ ಮೋಹನ್ ದಾಸ್ ನಿರ್ದೇಶನದ ಈ ಸಿನಿಮಾ ಟ್ರೈಲರ್ ಮೂಲಕವೇ ಸದ್ದು ಮಾಡಿತ್ತು.

39
666 ಆಪರೇಶನ್ ಡ್ರೀಮ್ ಥಿಯೇಟರ್

'666 ಆಪರೇಷನ್ ಡ್ರೀಮ್ ಥಿಯೇಟರ್' ಹೇಮಂತ್ ಎಂ. ರಾವ್ ನಿರ್ದೇಶನದ ಬಹುನಿರೀಕ್ಷಿತ ಕನ್ನಡ ಆಕ್ಷನ್-ಥ್ರಿಲ್ಲರ್ ಸಿನಿಮಾ. 1970ರ ದಶಕದ ಸ್ಪೈ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಮತ್ತು ಡಾಲಿ ಧನಂಜಯ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮಾಳವಿಕಾ ಮೋಹನ್ ನಾಯಕಿಯಾಗಿದ್ದಾರೆ.

49
ಅಣ್ಣ ಫ್ರಮ್ ಮೆಕ್ಸಿಕೊ

ಅಣ್ಣ ಫ್ರಮ್ ಮೆಕ್ಸಿಕೋ' ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾಗಿದ್ದು, 'ಡಾಲಿ' ಧನಂಜಯ್ ಮತ್ತು ರೀಷ್ಮಾ ನಾಣಯ್ಯ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಬಡವ ರಾಸ್ಕಲ್' ಖ್ಯಾತಿಯ ಶಂಕರ್ ಗುರು ಈ ಚಿತ್ರ ನಿರ್ದೇಶನ ಮಾಡಿದ್ದು, ಅಜ್ಜಿ ಮತ್ತು ಮೊಮ್ಮಗನ ಬಾಂಧವ್ಯದ ಸುಂದರ ಕಥೆಯನ್ನು ಒಳಗೊಂಡಿದೆ

59
ಯುವರ್ಸ್ ಸಿನ್ಸಿಯರ್ಲಿ ರಾಮ್

ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಯುವರ್ಸ್ ಸಿನ್ಸಿಯರ್ಲಿ ರಾಮ್. ಈ ಸಿನಿಮಾವನ್ನು ಎ.ಆರ್ ವಿಖ್ಯಾತ್ ನಿರ್ದೇಶನ ಮಾಡುತ್ತಿದ್ದಾರೆ. ಭಾವನಾತ್ಮಕ ಎಳೆಯನ್ನು ಹೊಂದಿರುವ ಕಥೆ ಇದಾಗಿದೆ.

69
ಬಿಆರ್‌ಬಿ' (BRB)

'ಬಿಆರ್‌ಬಿ' (BRB) ಎಂದರೆ 'ಬಿಲ್ಲ ರಂಗ ಭಾಷ' ಇದು ಕಿಚ್ಚ ಸುದೀಪ್ ನಟಿಸುತ್ತಿರುವ ಬಹುನಿರೀಕ್ಷಿತ, ಸಿನಿಮಾವಾಗಿದೆ.ಈ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶಿಸುತ್ತಿದ್ದಾರೆ. ಇದು 2209ನೇ ಇಸವಿಯ ಭವಿಷ್ಯದ ಜಗತ್ತಿನಲ್ಲಿ ನಡೆಯುವ ಕಥೆಯಾಗಿದ್ದು, ಸೈನ್ಸ್-ಫಿಕ್ಷನ್ ಮತ್ತು ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ.

79
ದೈಜಿ

ದೈಜಿ ನಟ ರಮೇಶ್ ಅರವಿಂದ್ ನಟಿಸಿರುವ, ಆಕಾಶ್ ಶ್ರೀವತ್ಸ ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ಕನ್ನಡ ಪ್ಯಾರಾನಾರ್ಮಲ್ ಥ್ರಿಲ್ಲರ್ ಸಿನಿಮಾವಾಗಿದೆ. ಸಿನಿಮಾದಲ್ಲಿ ರಾಧಿಕಾ ನಾರಾಯಣ್ ಮತ್ತು ದಿಗಂತ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

89
ಮದರ್ ಪ್ರಾಮಿಸ್

ಡಾಲಿ ಧನಂಜಯ್ ಅವರ ‌ʻಡಾಲಿ ಪಿಕ್ಚರ್ಸ್ʼ ನಿರ್ಮಾಣದ ‘ಮದರ್‌ ಪ್ರಾಮಿಸ್’ ಚಿತ್ರವನ್ನು ಪೂರ್ಣ ಮೈಸೂರು ನಿರ್ದೇಶನ ಮಾಡುತ್ತಿದ್ದಾರೆ. ಮದರ್ ಪ್ರಾಮಿಸ್' ಕಾಮಿಡಿ ಹಾಗೂ ಥ್ರಿಲ್ಲಿಂಗ್ ಸಿನಿಮಾ. ಈ ಚಿತ್ರದಲ್ಲಿ ಡಾಲಿ ಧನಂಜಯ, ನಾಗಭೂಷಣ್‌ , ಹಿರಿಯ ನಟಿ ವಿನಯಪ್ರಸಾದ್‌, ಗೀತಾ, ಗುರುದತ್‌ ಸೇರಿ ಅನೇಕರು ನಟಿಸಿದ್ದಾರೆ.

99
ಮ್ಯಾಂಗೋ ಪಚ್ಚಾ

ಕಿಚ್ಚ ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ನಟಿಸಿರುವ ‘ಮ್ಯಾಂಗೋ ಪಚ್ಚಾ’ ಸಿನಿಮಾ ಟ್ರೈಲರ್ ಮೂಲಕ ಭರವಸೆ ಹುಟ್ಟಿಸಿದೆ. ಕಿಚ್ಚ ಸುದೀಪ್ ಹಿನ್ನೆಲೆ ಧ್ವನಿಯಲ್ಲಿ ಬಂದ ಟ್ರೈಲರ್ ಸಿನಿಮಾ ಮೇಲಿನ ಭರವಸೆ ಹೆಚ್ಚಿಸಿದೆ. 'ಮ್ಯಾಂಗೋ ಪಚ್ಚ' ಚಿತ್ರವು 2001-02ರ ಕಾಲಘಟ್ಟದ ಮೈಸೂರಿನ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories