PHOTOS: ಜೈಲಿನಲ್ಲಿ ಕಾಲ ಕಳೆಯುತ್ತಿರೋ ದರ್ಶನ್;‌ ಅತ್ತ ಸಮಾಜಮುಖಿ ಕೆಲಸ ಶುರು ಮಾಡಿದ ಪತ್ನಿ ವಿಜಯಲಕ್ಷ್ಮೀ

Published : Aug 29, 2025, 08:06 PM IST

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್‌ ತೂಗುದೀಪ ಅವರೀಗ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಈಗಾಗಲೇ ಜಾಮೀನಿನ ಮೇಲೆ ಒಮ್ಮೆ ಹೊರಗಡೆ ಬಂದು, ಆಮೇಲೆ ಜಾಮೀನು ರದ್ದಾಗಿದ್ದಕ್ಕೆ ಮತ್ತೆ ಈಗ ಅವರು ಜೈಲಿನೊಳಗಡೆ ಹೋಗಿದ್ದಾರೆ. 

PREV
15

ಇನ್ನುಮುಂದೆ ಕೇಸ್‌ ಟ್ರಯಲ್‌ ನಡೆದು, ಯಾವಾಗ ತೀರ್ಪು ಹೊರಬೀಳಲಿದೆಯೋ ಏನೋ! ಈ ಪ್ರಕರಣ ಕೊನೆಯ ಹಂತ ತಲುಪಲು ಒಟ್ಟಿನಲ್ಲಿ ಇನ್ನು ಆರು ತಿಂಗಳುಗಳ ಕಾಲ ಬೇಕು ಎಂದು ಹೇಳಲಾಗುತ್ತಿದೆ.

25

ದರ್ಶನ್‌ ಅನುಪಸ್ಥಿತಿಯಲ್ಲಿ ‘ದಿ ಡೆವಿಲ್’‌ ಸಿನಿಮಾ ರಿಲೀಸ್‌ ಆಗುವ ಸಾಧ್ಯತೆ ಜಾಸ್ತಿ ಇದೆ. ಹೀಗಾಗಿ ಈ ಬಗ್ಗೆ ವಿಜಯಲಕ್ಷ್ಮೀ ಅವರು ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಕೊಡುತ್ತಿರುತ್ತಾರೆ. ಹೀಗಿರುವಾಗ ‘ದಿ ಡೆವಿಲ್’‌ ಸಿನಿಮಾ ಕೆಲಸದಲ್ಲಿ ಬ್ಯುಸಿ ಇರುವ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

35

ಸಭೆ, ಸಮಾರಂಭ ಎಂದು ಅವರು ಸಾರ್ವಜನಿಕವಾಗಿ ಕಾಣಿಸೋದು ಬಹಳ ಅಪರೂಪ. ಇತ್ತೀಚೆಗೆ ಅವರು ದೇವಸ್ಥಾನಗಳಿಗೆ ಭೇಟಿ ಕೊಡುತ್ತಿರುತ್ತಾರೆ.

45

ಈ ಬಾರಿ ಅವರು ದಸರಾ ಆನೆಗಳ ಮಾವುತರಿಗೆ ಕುಕ್ಕರ್ ಗಿಫ್ಟ್ ಕೊಟ್ಟಿದ್ದಾರೆ. ದರ್ಶನ್ ಜೈಲು ಪಾಲಾದರೂ ಕೂಡ ದರ್ಶನ್ ಪತ್ನಿ ಮೈಸೂರು ನಂಟು ಮರೆತಿಲ್ಲ.

55

ಆನೆ ಮಾವುತರಿಗೆ ಊಟ ಹಾಕಿಸಿ ಕುಕ್ಕರ್ ಉಡುಗೊರೆ ನೀಡಿದ್ದಾರೆ, ಅಷ್ಟೇ ಅಲ್ಲದೆ ಮೈಸೂರಿನಲ್ಲಿ ದಸರಾ ಆನೆಯ ನೋಡಿ‌ ಸಂಭ್ರಮಿಸಿದ್ದಾರೆ. ವಿಜಯಲಕ್ಷ್ಮ ಅವರ ಸಮಾಜಮುಖಿ ಕೆಲಸದಲ್ಲಿ ಧನ್ವೀರ್ ಜೊತೆ ನಿಂತಿದ್ದಾರೆ.

Read more Photos on
click me!

Recommended Stories