ಸ್ಯಾಂಡಲ್ವುಡ್ ನಟಿ ಶ್ರುತಿ ಮತ್ತು ಕನ್ನಡದ ಖ್ಯಾತ ನಿರ್ದೇಶಕರ ಎಸ್.ಮಹೇಂದರ್ ಅವರ ಪುತ್ರಿ ಗೌರಿ ಶ್ರುತಿ (Gowri Shruthi) ಬೆಳ್ಳಿತೆರೆಗೆ ಯಾವಾಗ ಎಂಟ್ರಿ ಕೊಡುತ್ತಾರೆ ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ಸದಾ ಪ್ರಶ್ನೆ ಇದ್ದೇ ಇದೆ. ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿರುವ ಗೌರಿ ಅವರು ಗಣೇಶ ಹಬ್ಬದ ನಿಮಿತ್ತ ಕ್ಯೂಟ್ ವಿಡಿಯೋಶೂಟ್ ಶೇರ್ ಮಾಡುವ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುವ ಬಗ್ಗೆ ಸೂಚನೆ ಕೊಟ್ಟಿದ್ದಾರೆ.
27
ಸಿಂಪ್ಲಿಸಿಟಿಗೆ ಹೆಸರು
ಗೌರಿ ಅವರು ಸದಾ ತಮ್ಮ ಸಿಂಪ್ಲಿಸಿಟಿಗೆ ಫೇಮಸ್. ಅದರಲ್ಲಿಯೂ ಸೀರೆಯಲ್ಲೇ ಕಾಣಿಸಿಕೊಳ್ಳುವ ಕಾರಣ ಸಹಜವಾಗಿ ಅವರ ಮೇಲಿನ ಅಭಿಮಾನ ಹೆಚ್ಚಾಗಿದೆ. ಈ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.
37
ಶ್ರುತಿ ಪುತ್ರಿಯ ಪಯಣ...
ಕೆಲ ದಿನಗಳ ಹಿಂದೆ ಗೌರಿ ಶ್ರುತಿ ಅವರು ನಟ ಶರಣ್ ಪುತ್ರ ಅಂದ್ರೆ ಶ್ರುತಿ ಅವರ ಅಣ್ಣನ ಮಗ ಅರ್ಥಾತ್ ಗೌರಿಯವರ ಮಾವನ ಮಗ ಹೃದಯ್ ಶರಣ್ (Hruday Sharan) ಜೊತೆ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಇದಕ್ಕೆ ಥಹರೇವಾರಿ ಕಮೆಂಟ್ಸ್ ಕೂಡ ಬಂದಿದ್ದವು.
ಅಷ್ಟಕ್ಕೂ, ಶ್ರುತಿ ಅವರ ಕುಟುಂಬವೇ ಕಲಾವಿದರದ್ದು. ಗೌರಿ ಕೂಡ ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಅವರು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಫೋಟೋ, ವಿಡಿಯೋಶೂಟ್ ಮಾಡಿಸಿಕೊಳ್ಳುತ್ತಲೇ ಇರುತ್ತಾರೆ. ಸಿಂಪಲ್ ಗೆಟಪ್ನಲ್ಲಿ ಅವರು ಗಮನ ಸೆಳೆಯುತ್ತಾರೆ.
57
ಅದ್ಭುತ ಗಾಯಕಿ ಕೂಡ
ಜೊತೆಗೆ ಅದ್ಭುತವಾದ ಕಂಠಸಿರಿಯನ್ನು ಹೊಂದಿರುವ ಗೌರಿ ಗಾಯಕಿಯೂ ಹೌದು. ಅಪರೂಪಕ್ಕೊಮ್ಮೆ ತಾವು ಹಾಡಿರುವ ಹಾಡನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡುವ ಗೌರಿ ಆ ಮೂಲಕ ನೆಟ್ಟಿಗರನ್ನು ರಂಜಿಸುತ್ತಾರೆ.
67
ಗೌರಿ-ಗಣೇಶಕ್ಕೆ ವಿಶೇಷ ವಿಡಿಯೋಶೂಟ್
ಈಗ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಗೌರಿ ಅವರು ಸೀರೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯದಲ್ಲೇ ಇವರು ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ ಎನ್ನಲಾಗಿದೆ. ಸದ್ಯ ಗೌರಿ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ 1,58,000 ಫಾಲೋವರ್ಸ್ ಇದ್ದಾಗೆ. ಈಗಾಗಲೇ ನೂರಾರು ಪೋಸ್ಟ್ಗಳನ್ನು ಶೇರ್ ಮಾಡಿದ್ದಾರೆ.
77
ಟ್ರೆಡಿಷನಲ್ ಡ್ರೆಸ್ ಮೂಲಕ ಮಿಂಚಿಂಗ್
ಮೊದಲೇ ಹೇಳಿದಂತೆ ಇವರ ಗಮನ ಸೆಳೆದಿದ್ದು ಸೀರೆ ಮತ್ತು ಟ್ರೆಡಿಷನಲ್ ಡ್ರೆಸ್ ಮೂಲಕ. ಇದಕ್ಕೂ ಮುನ್ನ ಜನ್ಮಾಷ್ಟಮಿಯಂದು ಅವರು, ಶ್ರೀಕೃಷ್ಣ ಹಾಗೂ ಕೃಷ್ಣನ ರಾಸಲೀಲೆಗಳ ಚಿತ್ರಗಳನ್ನೊಳಗೊಂಡಿರುವ ಸೀರೆಯನ್ನು ಉಟ್ಟು ಗಮನ ಸೆಳೆದಿದ್ದರು.