ಅಬ್ಬಬ್ಬಾ… ದರ್ಶನ್ ಪತ್ನಿ ಕೈಯಲ್ಲಿರೋ ಪುಟ್ಟ ಬ್ಯಾಗ್ ಬೆಲೆಗೆ ಕಾರನ್ನೇ ಖರೀದಿಸಬಹುದು!

Published : Apr 22, 2025, 09:18 PM ISTUpdated : Apr 23, 2025, 10:33 AM IST

ನಟ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮೀ ಕೈಯಲ್ಲಿರುವ ಪುಟ್ಟ ಬ್ಯಾಗ್ ಬೆಲೆಗೆ ಒಂದು ಕಾರನ್ನೇ ಖರೀದಿಸಬಹುದು. ಇದರ ಬೆಲೆ ಎಷ್ಟು ಗೊತ್ತಾ?   

PREV
16
ಅಬ್ಬಬ್ಬಾ… ದರ್ಶನ್ ಪತ್ನಿ ಕೈಯಲ್ಲಿರೋ ಪುಟ್ಟ ಬ್ಯಾಗ್ ಬೆಲೆಗೆ ಕಾರನ್ನೇ ಖರೀದಿಸಬಹುದು!

ನಟ ದರ್ಶನ್ ತೂಗುದೀಪ್ (Darshan Thoogudeepa) ಜೈಲಿಗೆ ಹೋಗಿ, ಅಲ್ಲಿಂದ ಬಿಡುಗಡೆಯಾಗಿ ಬಂದಾಗಿನಿಂದ ದರ್ಶನ್ ಗಿಂತ ಹೆಚ್ಚು ಸುದ್ದಿಯಲ್ಲಿರುವವರು ಅವರ ಪತ್ನಿ ವಿಜಯಲಕ್ಷ್ಮೀ. ದರ್ಶನ್ ಪಾಲಿಗೆ ವಿಜಯಲಕ್ಷ್ಮೀಯೇ ವಿಜಯದ ಸಂಕೇತವಾಗಿದ್ದರು. ದರ್ಶನ್ ಜೈಲಿನಿಂದ ಬಿಡುಗಡೆಯಾಗಲು ನಟಿ ಹಗಲು ರಾತ್ರಿ ಎನ್ನದೇ ತನ್ನಿಂದ ಸಾಧ್ಯವಾದ ಎಲ್ಲವನ್ನೂ ಮಾಡಿ, ಗಂಡನಿಗೆ ಬಿಡುಗಡೆ ಭಾಗ್ಯ ನೀಡುವಲ್ಲಿ ಯಶಸ್ವಿಯಾಗಿದ್ದರು. 
 

26

ಇತ್ತೀಚೆಗಂತೂ ಸೋಶಿಯಲ್ ಮೀಡಿಯಾಗಳಲ್ಲಿ ವಿಜಯಲಕ್ಷ್ಮೀ ದರ್ಶನ್  (Vijayalakshmi Darshan)ಸಖತ್ ಆಗಿ ಮಿಂಚುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ವಿಜಯಲಕ್ಷ್ಮೀಗೆ ಅಭಿಮಾನಿಗಳು ಸಹ ಸಿಕ್ಕಾಪಟ್ಟೆ ಇದ್ದಾರೆ. ಹಾಗಾಗಿ ಇವರು ತಮ್ಮ ಅದ್ಧೂರಿ ಲೈಫ್ ಸ್ಟೈಲ್ ಜಲಕ್ ಅನ್ನು ತೋರಿಸುತ್ತಲೇ ಇರುತ್ತಾರೆ. 
 

36

ಪಾರ್ಟಿ ಪ್ರಿಯೆಯಾಗಿರುವ ವಿಜಯಲಕ್ಷ್ಮೀ ಹೆಚ್ಚಾಗಿ, ದುಬಾರಿ ಹೊಟೇಲ್ ಗಳಲ್ಲೇ ಕಾಣಿಸಿಕೊಳ್ಳುತ್ತಿರುತ್ತಾರೆ. ಜೊತೆಗೆ ವಿದೇಶ ಯಾತ್ರೆ ಮಾಡುತ್ತಾ ಎಂಜಾಯ್ ಮಾಡುವ ಫೋಟೊಗಳನ್ನು ಸಹ ಶೇರ್ ಮಾಡುತ್ತಿರುತ್ತಾರೆ. ವಿಜಯಲಕ್ಷ್ಮಿಯದ್ದು ಅದ್ಧೂರಿ ಲೈಫ್ ಸ್ಟೈಲ್, ಅವರು ಧರಿಸುವ ಬಟ್ಟೆ, ಹೋಗುವ ಹೊಟೇಲ್, ಆಕ್ಸೆಸರೀಸ್ ಎಲ್ಲವೂ ದುಬಾರಿಯಾಗಿರುತ್ತೆ. 
 

46

ಬ್ಯುಸಿನೆಸ್ ವುಮನ್ ಆಗಿರುವ ವಿಜಯಲಕ್ಷ್ಮೀ ಇತ್ತಿಚೆಗೆ ಒಂದು ಫೋಟೊವನ್ನು ಶೇರ್ ಮಾಡಿದ್ದು, ಆ ಫೋಟೊದಲ್ಲಿ ವಿಜಯಲಕ್ಷ್ಮೀ ಕೆಂಪು ಬಣ್ಣದ ಗೌನ್ ಧರಿಸಿ, ಕೈಯಲ್ಲೊಂದು ಪುಟ್ಟ ಬ್ಯಾಗ್ ಹಿಡಿದು, ರೆಸ್ಟೋರೆಂಟ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪುಟ್ಟ ಬ್ಯಾಗ್ ಬೆಲೆ ಕೇಳಿದ್ರೆ ಮಾತ್ರ ನೀವು ಶಾಕ್ ಆಗೋದು ಖಂಡಿತಾ. 
 

56

ಹೌದು, ವಿಜಯಲಕ್ಷ್ಮೀ ಕೈಯಲ್ಲಿ ಸೂಟ್ ಕೇಸ್ ನಂತೆ ಇರುವ ಪುಟ್ಟದಾದ ಬ್ರೌನ್ ಬಣ್ಣದ ಬ್ಯಾಗ್ ಇದೆ. ಎಲ್ಲಾ ಫೋಟೊಗಳನ್ನು ಈ ಬ್ಯಾಗ್ ಹೈಲೈಟ್ ಆಗಿದೆ. ಇದರ ಬೆಲೆ ಎಷ್ಟಿರಬಹುದು ಎಂದು ನಿಮಗೆ ಅಂದಾಜು ಇದೆಯೇ? ಖಂಡಿತವಾಗಿಯೂ ಬೆಲೆ ಅಂದಾಜಿಸಲು ಸಾಧ್ಯವೇ ಇಲ್ಲ. ಯಾಕಂದ್ರೆ ಇದು ಸಾಮಾನ್ಯ ಮಿಡಲ್ ಕ್ಲಾಸ್ ಮನುಷ್ಯನ ಬಜೆಟ್ ನಲ್ಲಿ ಬರುವಂತಹ ಬ್ಯಾಗ್ ಅಲ್ಲವೇ ಅಲ್ಲ. 
 

66

ಇದು Louis Vuitton Monogram Canvas Petite Malle Bag ಬ್ಯಾಗ್ ಆಗಿದ್ದು, ಒಂದು ಮಾಹಿತಿಯ ಪ್ರಕಾರ ಈ ಬ್ಯಾಗ್ ಬೆಲೆ ಬರೋಬ್ಬರಿ $4466 ಅಂದ್ರೆ ಭಾರತೀಯ ರೂಪಾಯಿಗಳ ಪ್ರಕಾರ 3,80, 278 ರೂಪಾಯಿ ಆಗಿದೆ. ಮತ್ತೊಂದು ಮಾಹಿತಿ ಪ್ರಕಾರ ಈ ಬ್ಯಾಗ್ ಬೆಲೆ 284,900 ರೂಪಾಯಿ ಆಗಿದೆ. ಅಂದ್ರೆ, ಈ ಪುಟ್ಟ ಬ್ಯಾಗ್ ಬೆಲೆಯಲ್ಲಿ ಸಾಮಾನ್ಯ ಜನ ಒಂದು ಕಾರ್ ಖರೀದಿಸಬಹುದು. 
 

Read more Photos on
click me!

Recommended Stories