ನಟಿ ಪ್ರಣೀತಾ ಮಗನ ನಾಮಕರಣದಲ್ಲಿ ಸ್ಯಾಂಡಲ್’ವುಡ್ ತಾರೆಯರ ದಂಡು… ಮಿಂಚಿದ ಕ್ವೀನ್ ರಮ್ಯಾ!

Published : Apr 21, 2025, 11:59 AM ISTUpdated : Apr 21, 2025, 12:45 PM IST

ಕನ್ನಡದ ಖ್ಯಾತ ನಟಿ ಪ್ರಣೀತಾ ಸುಭಾಷ್ ಅವರ ಮಗನ ನಾಮಕರಣ ಸಮಾರಂಭ ನಿನ್ನೆ ಅದ್ಧೂರಿಯಾಗಿ ನಡೆದಿದ್ದು, ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು ಭಾಗಿಯಾಗಿ ಶುಭ ಕೋರಿದ್ದಾರೆ.   

PREV
110
ನಟಿ ಪ್ರಣೀತಾ ಮಗನ ನಾಮಕರಣದಲ್ಲಿ ಸ್ಯಾಂಡಲ್’ವುಡ್ ತಾರೆಯರ ದಂಡು… ಮಿಂಚಿದ ಕ್ವೀನ್ ರಮ್ಯಾ!

ಬಹುಭಾಷಾ ನಟಿ ಪ್ರಣೀತಾ ಸುಭಾಷ್ (Pranitha Subhash) ಮಗನ ನಾಮಕರಣ ಶಾಸ್ತ್ರ ಅದ್ಧೂರಿಯಾಗಿ ನಡೆದಿದ್ದು, ಸ್ಯಾಂಡಲ್ ವುಡ್ ತಾರೆಯರ ದಂಡೆ ನಟಿಯ ಮಗನ ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. 
 

210

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಾಮಕರಣ ಸಮಾರಂಭ (naming ceremony)  ಅದ್ಧೂರಿಯಾಗಿ ನಡೆದಿದ್ದು , ಈ ಕಾರ್ಯಕ್ರಮಕ್ಕೆ ಸಿನಿಮಾ ರಂಗದ ಹಲವು ತಾರೆಯರು ಭಾಗಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ವೈರಲ್ ಆಗುತ್ತಿವೆ. 
 

310

ಕಾರ್ಯಕ್ರಮದಲ್ಲಿ ಮೋಹಕತಾರೆ ರಮ್ಯಾ ಬ್ಲೂ ಜೀನ್ಸ್ ಶರ್ಟ್ ಧರಿಸಿ ಮಿಂಚಿದ್ದು, ಎಲ್ಲರ ಕಣ್ಣು ಕೂಡ ರಮ್ಯಾ ಸೌಂದರ್ಯದ ಮೇಲೆ ನಿಂತಿದೆ. ಇನ್ನು ನಟ ಡಾಲಿ ಧನಂಜಯ್ (Dali Dhananjay) ಕೂಡ ಆಗಮಿಸಿ ಶುಭ ಕೋರಿದ್ದರು. .’
 

410

ಅಷ್ಟೇ ಅಲ್ಲದೇ  ನಟಿ ಶ್ರುತಿ, ಅವರ ಮಗಳು ಗೌರಿ, ನಟಿ ಮಾಳವಿಕ, ಜಯಮಾಲ, ನಿರ್ದೇಶಕ ಯೋಗರಾಜ್ ಭಟ್ (Yograj Bhat), ಡಾ. ರಾಜ್​ಕುಮಾರ್ ಮೊಮ್ಮಗಳು ನಟಿ ಧನ್ಯಾ ರಾಮ್ ಕುಮಾರ್ ಕೂಡ ಆಗಮಿಸಿದ್ದರು.
 

510

ಇವರಲ್ಲದೇ ನಟಿ ಕಾವ್ಯಾ ಶಾ, ಮಾನ್ವಿತ ಕಾಮತ್, ಸಂಯುಕ್ತಾ ಹೊರನಾಡು, ಜೊತೆಗೆ ಪ್ರಣೀತಾ ಸ್ನೇಹಿತರು ಆಗಮಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದಾರೆ. 
 

610

ಇನ್ನೂ, ನಟಿ ಪ್ರಣೀತಾ ತಮ್ಮ ಮಗನಿಗೆ ಜಯ್ ಕೃಷ್ಣ ನಿತಿನ್ ರಾಜ್ (Jay Krishna Nitin Raj)  ಅನ್ನೋ ಹೆಸರಿಟ್ಟಿದ್ದಾರೆ. ಪ್ರಣೀತಾ ಮನೆಯಲ್ಲಿ ತಂದೆಯ ಹೆಸರು, ಮಾವನ ಹೆಸರು ಎಲ್ಲರ ಹೆಸರು ಕೃಷ್ಣನಿಗೆ ಸಂಬಂಧಿಸಿದ್ದು ಆಗಿದ್ದರಿಂದ, ಮಗನಿಗೂ ಅದೇ ಹೆಸರನ್ನಿಟ್ಟಿದ್ದಾರೆ ನಟಿ. 
 

710

ನಟಿ ಪ್ರಣೀತಾ ಅವರಿಗೆ ಇಬ್ಬರು ಮಕ್ಕಳು. ಮೊದಲ ಮಗಳ ಹೆಸರು ಆರ್ನಾ. ಆಕೆಗೆ 2 ವರ್ಷ.  ಮಗಳ ಫೋಟೊಗಳನ್ನು ಪ್ರಣೀತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಮಗನ ಫೋಟೊವನ್ನು ಇದೀಗ ಮೊದಲ ಬಾರಿ ನಾಮಕರಣದಂದು ಶೇರ್ ಮಾಡಿದ್ದಾರೆ. 
 

810

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಪ್ರಣೀತಾ ಸುಭಾಷ್, ಸದ್ಯ ಫ್ಯಾಷನ್ ಶೋ ಗಳಲ್ಲಿ, ಬ್ರ್ಯಾಂಡ್ ಗಳಿಗೆ ಮಾಡೆಲ್ ಆಗಿ ತಮ್ಮ ಆದಾ ತೋರಿಸುತ್ತಿದ್ದರು. 
 

910

ಮಕ್ಕಳಾದ ಬಳಿಕ ನಟನೆಯಿಂದ ದೂರ ಉಳಿದು, ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿದ್ದರು. ಆದರೆ ಎರಡನೆ ಮಗು ಹುಟ್ಟಿದ ಮೂರೇ ತಿಂಗಳಿಗೆ ನಟಿ ಮತ್ತೆ ಅಲರ್ಟ್ ಆಗಿದ್ದರು. 
 

1010

ಸೋಶಿಯಲ್ ಮೀಡಿಯಾದಲ್ಲಿ ನಟಿಯ ಫೋಟೊ ವಿಡಿಯೋಗಳನ್ನು ನೋಡಿ, ಅಭಿಮಾನಿಗಳು ಶಾಕ್ ಆಗಿದ್ದರು. ಎರಡು ಮಕ್ಕಳ ಅಮ್ಮ ಆಗಿದ್ರು ನಟಿ ಇಷ್ಟೊಂದು ಯಂಗ್, ಫಿಟ್ ಜೊತೆಗೆ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿರುವುದನ್ನು ನೋಡಿ ವಾವ್ ಎಂದಿದ್ದರು. 
 

Read more Photos on
click me!

Recommended Stories