ಪುನೀತ್ ರಾಜಕುಮಾರ್ ಮಗಳ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ ದೊಡ್ಡಪ್ಪ

Published : Apr 22, 2025, 02:26 PM ISTUpdated : Apr 22, 2025, 02:32 PM IST

ಪುನೀತ್ ರಾಜಕುಮಾರ್ ಹಿರಿಯ ಪುತ್ರಿ ಧೃತಿ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು , ಈ ಹಿನ್ನೆಲೆಯಲ್ಲಿ ದೊಡ್ಡಪ್ಪ ರಾಘವೇಂದ್ರ ರಾಜಕುಮಾರ್ ಶುಭ ಕೋರಿದ್ದಾರೆ.   

PREV
17
ಪುನೀತ್ ರಾಜಕುಮಾರ್ ಮಗಳ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ ದೊಡ್ಡಪ್ಪ

ಪವರ್ ಸ್ಟಾರ್ ಪುನೀತ್ ರಾಜಕುಮಾರ್  (Powerstar Puneeth Rajkumar) ಅವರ ಹಿರಿಯ ಮಗಳು ಧೃತಿ ಇಂದು ಅಂದ್ರೆ ಏಪ್ರಿಲ್ 22 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ದೊಡ್ಡಪ್ಪ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ. 
 

27

ನಟ ರಾಘವೇಂದ್ರ ರಾಜಕುಮಾರ್ (Raghavendra Rajkumar) ಸೋಶಿಯಲ್ ಮೀಡಿಯಾದಲ್ಲಿ ಧೃತಿ ಜೊತೆಗಿನ ಫೋಟೊ ಒಂದನ್ನು ಶೇರ್ ಮಾಡಿದ್ದು, ಹುಟ್ಟುಹಬ್ಬದ ಶುಭಾಶಯಗಳು ಧೃತಿ ಮಗಳೇ ಎಂದು ಬರೆದುಕೊಂಡಿದ್ದಾರೆ. 
 

37

ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ದಂಪತಿಗಳಿಗೆ, ಇಬ್ಬರು ಹೆಣ್ಣುಮಕ್ಕಳಿದ್ದು. ಹಿರಿಯ ಮಗಳು ಧೃತಿ ಹಾಗೂ ಕಿರಿಯ ಮಗಳು ವಂದಿತಾ. ಧೃತಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಭಾರತಕ್ಕೆ ಹೆಚ್ಚಾಗಿ ಬಂದು ಹೋಗುತ್ತಿರುತ್ತಾರೆ. 
 

47

ಬೆಂಗಳೂರಿನ ಪ್ರತಿಷ್ಟಿತ ಸೋಫಿಯಾ ಸೈ ಸ್ಕೂಲ್ ನಲ್ಲಿ ಶಾಲಾ ಶಿಕ್ಷಣ ಪಡೆದಿರುವ ಧೃತಿ (Drithi Puneeth Rajkumar), ಸದ್ಯ ವಿದೇಶದಲ್ಲಿ ಪ್ರತಿಷ್ಟಿತ ಕಾಲೇಜಿನಲ್ಲಿ ಓದುತ್ತಿದ್ದು, ಅಲ್ಲಿನ ಫೀಸ್ ತುಂಬಾನೆ ದುಬಾರಿಯಾಗಿದೆ. ವಾರ್ಷಿಕ ಶುಲ್ಕವೇ 30 ಲಕ್ಷಕ್ಕಿಂತ ಹೆಚ್ಚಿದೆ ಎನ್ನಲಾಗುತ್ತಿದೆ. 
 

57

ಇಲ್ಲಸ್ಟ್ರೇಟರ್ ಮತ್ತು ಡಿಸೈನರ್ ಆಗುವ ಕನಸು ಹೊತ್ತಿರುವ 22 ವರ್ಷದ ಧೃತಿ ನ್ಯೂಯಾರ್ಕ್ ನಗರದ ಗ್ರೀನ್‌ವಿಚ್ ವಿಲೇಜ್ ಬಳಿಯಿರುವ ಪಾರ್ಸನ್ಸ್‌ ಸ್ಕೂಲ್‌ ಆಫ್ ಆರ್ಟ್ ಆಂಡ್ ಡಿಸೈನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಧೃತಿ ನ್ಯೂಯಾರ್ಕ್ ನಲ್ಲಿ ಕಲಿಯುತ್ತಿದ್ದಾರೆ. 
 

67

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಧೃತಿ, ಹೆಚ್ಚಾಗಿ ನ್ಯೂಯಾರ್ಕ್ ನ ಚಳಿಗಾಲದ, ಸುಂದರವಾದ ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಪುನೀತ್ ಅಭಿಮಾನಿಗಳು ನಮ್ ದೇವ್ರು ಮಗಳು ಎಂದು ಧೃತಿಗೆ ಪ್ರೀತಿ ತೋರಿಸುತ್ತಲೇ ಇರುತ್ತಾರೆ. 
 

77

ಧೃತಿ ರಾಜಕುಮಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಶುಭ ಕೋರಿದ್ದು, ಅಪ್ಪು ಆಶೀರ್ವಾದದಿಂದ, ದೇವರ ಆಶೀರ್ವಾದದಿಂದ ನಿನ್ನ ಎಲ್ಲಾ ಕನಸುಗಳು ನನಸಾಗಲಿ, ಜೀವನ ಸುಖಮಯವಾಗಿರಲಿ ಎಂದು ಹಾರೈಸಿದ್ದಾರೆ. 
 

Read more Photos on
click me!

Recommended Stories