ಉಪೇಂದ್ರ ಹುಟ್ಟುಹಬ್ಬಕ್ಕೆ 45 ಸಿನಿಮಾದ ಬೈಕ್‌ ಅನಾವರಣ: ಮತ್ತೆ ನಿರ್ದೇಶನದ ಆಸೆ ವ್ಯಕ್ತಪಡಿಸಿದ ರಿಯಲ್‌ ಸ್ಟಾರ್‌

Published : Sep 19, 2025, 12:57 PM IST

ರಿಯಲ್‌ ಸ್ಟಾರ್‌ ಉಪೇಂದ್ರ ಅವರ 57ನೇ ಜನ್ಮದಿನಾಚರಣೆ ಅದ್ದೂರಿಯಾಗಿ ನಡೆದಿದೆ. ಈ ವೇಳೆ ‘45’ ಸಿನಿಮಾ ತಂಡದವರು ವಿಶೇಷ ಬೈಕ್‌ ಅನಾವರಣಗೊಳಿಸಿದ್ದಾರೆ. ಪ್ರಚಾರದ ಭಾಗವಾಗಿ ದೇಶಾದ್ಯಂತ ಇದರಲ್ಲಿ ಸಂಚರಿಸುವ ಉದ್ದೇಶ ಚಿತ್ರತಂಡಕ್ಕಿದೆ.

PREV
15
ಉಪೇಂದ್ರ 57ನೇ ಜನ್ಮದಿನಾಚರಣೆ

ಕಿಕ್ಕಿರಿದು ನೆರೆದ ಸಾವಿರಾರು ಅಭಿಮಾನಿಗಳ ನಡುವೆ ರಿಯಲ್‌ ಸ್ಟಾರ್‌ ಉಪೇಂದ್ರ ಅವರ 57ನೇ ಜನ್ಮದಿನಾಚರಣೆ ಅದ್ದೂರಿಯಾಗಿ ನಡೆದಿದೆ. ಈ ವೇಳೆ ‘45’ ಸಿನಿಮಾ ತಂಡದವರು ವಿಶೇಷ ಬೈಕ್‌ ಅನಾವರಣಗೊಳಿಸಿದ್ದಾರೆ.

25
ವಿಶೇಷ ವಿನ್ಯಾಸದ ಬೈಕ್‌

ಇದು ‘45’ ಸಿನಿಮಾದಲ್ಲಿ ಉಪೇಂದ್ರ ಬಳಸುವ ವಿಶೇಷ ವಿನ್ಯಾಸದ ಬೈಕ್‌ ಆಗಿದ್ದು, ಪ್ರಚಾರದ ಭಾಗವಾಗಿ ದೇಶಾದ್ಯಂತ ಇದರಲ್ಲಿ ಸಂಚರಿಸುವ ಉದ್ದೇಶ ಚಿತ್ರತಂಡಕ್ಕಿದೆ.

35
ಮತ್ತೆ ನಿರ್ದೇಶನ ಮಾಡುವ ಆಸೆ

ಈ ವೇಳೆ ಮಾತನಾಡಿದ ಉಪೇಂದ್ರ, ‘ಹೊಸ ಹೊಸ ಸಿನಿಮಾಗಳು ಬರುತ್ತಿವೆ. ಭಾರ್ಗವ, 45, ನೆಕ್ಸ್ಟ್‌ ಲೆವೆಲ್‌ ಮೊದಲಾದ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದೇನೆ. ಇದರ ನಡುವೆ ಮತ್ತೆ ನಿರ್ದೇಶನ ಮಾಡುವ ಆಸೆಯೂ ಇದೆ

45
ಒಳಗಿನ ಯೋಚನೆ ಬದಲಾಗಲ್ಲ

ನಾನು ಬದುಕಲ್ಲಿ ಕನಸು ಕಾಣುವುದಕ್ಕಿಂತ ಹೆಚ್ಚಾಗಿ ಕೆಲಸ ಮಾಡುತ್ತಾ ಹೋದವನು. ಆ ಪ್ರೊಸೆಸ್‌ನಲ್ಲಿ ಮನೆ, ಕಾರು ಎಲ್ಲಾ ಬಂದವು. ಉಳಿದಂತೆ ಕಾಲ ಕಾಲಕ್ಕೆ ನನ್ನ ಹೇರ್‌ ಸ್ಟೈಲ್‌ ಚೇಂಜ್‌ ಆಗ್ತಿರುತ್ತೆ. ಒಳಗಿನ ಯೋಚನೆ ಬದಲಾಗಲ್ಲ ಎಂದಿದ್ದಾರೆ.

55
ಅಭಿಮಾನಿಗಳ ಸಂಭ್ರಮ

ಈ ವೇಳೆ ಉಪೇಂದ್ರ ಅಭಿಮಾನಿಗಳು ಸುಮಾರು 57 ಕೆಜಿ ತೂಕದ ಕೇಕ್‌, ಬೃಹತ್‌ ಹೂವಿನ ಹಾರವನ್ನು ಹಾಕಿ ನೆಚ್ಚಿನ ನಟನ ಜನ್ಮದಿನವನ್ನು ಸಂಭ್ರಮಿಸಿದರು.

Read more Photos on
click me!

Recommended Stories