ಇನ್‌ಸ್ಟಾಗ್ರಾಂನಲ್ಲಿ 14 ಮಿಲಿಯನ್ ಫಾಲೋವರ್ಸ್ ಪಡೆದ ಮೊದಲ ಕನ್ನಡದ ನಟ ಯಶ್; ಫಸ್ಟ್‌ ಪೋಸ್ಟ್‌ ಯಾವ್ದು ನೋಡಿ

First Published | Jan 16, 2025, 3:17 PM IST

ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ ಯಶ್. ಇಷ್ಟು ಮಿಲಿಯನ್ ಫಾಲೋವರ್ಸ್ ಯಾರಿಗೂ ಇಲ್ಲ.....

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಈಗ ವಿಶ್ವಾದ್ಯಂತ ರಾಖಿ ಭಾಯ್, ಕೆಜಿಎಫ್ ಕಿಂಗ್, ಟಾಕ್ಸಿಕ್ ಸಿನಿಮಾ ಮಾಸ್ಟರ್, ಹೃದಯವಂತ ಅನ್ನೋ ಪಟ್ಟಗಳನ್ನು ಪಡೆದಿದ್ದಾರೆ. 

ರಂಗಭೂಮಿ ಮತ್ತು ಸೀರಿಯಲ್‌ಯಿಂದ ಜರ್ನಿ ಆರಂಭಿಸಿದ ಯಶ್ ಈಗ ದೇಶ ವಿದೇಶದವರು ಕನ್ನಡ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿದ್ದಾರೆ. ಪ್ಯಾನ್ಸ್ ಇಂಡಿಯಾ ಸ್ಟಾರ್ ಎನ್ನಬಹುದು.

Tap to resize

ಇದೀಗ ಯಶ್‌ ಇನ್‌ಸ್ಟಾಗ್ರಾಂನಲ್ಲಿ 14 ಮಿಲಿಯನ್ ಫಾಲೋವರ್ಸ್ ಪಡೆದುಕೊಂಡಿದ್ದಾರೆ ಅಂದರೆ 140 ಲಕ್ಷ. ಈ ಅಕೌಂಟ್‌ನಲ್ಲಿ ಸುಮಾರು 195 ಫೋಸ್ಟ್‌ಗಳನ್ನು ಅಪ್ಲೋಡ್ ಮಾಡಿದ್ದಾರೆ. 
 

ಅದೆಷ್ಟೋ ಕೋಟಿ ಜನರು ಯಶ್‌ರನ್ನು ಫಾಲೋ ಮಾಡುತ್ತಿದ್ದಾರೆ. ಆದರೆ ಯಶ್ ವಾಪಸ್ ಫಾಲೋ ಮಾಡುತ್ತಿರುವುದು ಪತ್ನಿ ನಟಿ ರಾಧಿಕಾ ಪಂಡಿತ್‌ನ ಮಾತ್ರ.

ಯಶ್ ಮೊದಲು ಅಪ್ಲೋಡ್ ಮಾಡಿರುವ ಫೋಟೋ ಪತ್ನಿ ರಾಧಿಕಾ ಪಂಡಿತ್ ಜೊತೆ. ಡಿಸೆಂಬರ್ 9,2018ರಂದು ತಮ್ಮ ಎರಡನೇ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿರುವ ಫೋಟೋ ಇದು.

ಅದಾದ ಮೇಲೆ 2019, ಮೇ 7ರಂದು ಮಗಳ ಫೋಟೋವನ್ನು ರಿವೀಲ್ ಮಾಡುತ್ತಾರೆ. ಆಗ ಇನ್ನೂ ನಾಮರಣ ಮಾಡಿರಲಿಲ್ಲ. 9 ತಿಂಗಳು ತುಂಬುತ್ತಿದ್ದಂತೆ ಐರಾ ಎಂದು ಹೆಸರಿಟ್ಟರು.

 2019 ಜೂನ್‌ 26ರಂದು ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇರುವ ಪೋಸ್ಟ್ ಹಾಕಿದ್ದರು. ಆಗ ಯಶ್ ಇನ್‌ಸ್ಟಾಗ್ರಾಂ ಅಕೌಂಟ್‌ಗೆ ಫಾಲೋವರ್ಸ್‌ ಸುರಿಮಳೆನೇ ಆಯ್ತು. ಇನ್ನು ಹೆಚ್ಚುನ ಫಾಲೋ ಮಾಡಲು ಶುರು ಮಾಡಿದ್ದರು.

2019 ಅಕ್ಟೋರ್ 30ರಂದು ಮಗನನ್ನು ಬರ ಮಾಡಿಕೊಂಡ ಸುದ್ದಿಯನ್ನು ಹಂಚಿಕೊಂಡಿದ್ದರು. ಯಶ್ ಪ್ರತಿಯೊಂದು ವಿಚಾರವನ್ನು ಸ್ಪೆಷಲ್ ಆಗಿ ಅನೌನ್ಸ್ ಮಾಡುತ್ತಾರೆ.

ಕೊಂಚ ಫ್ಯಾಮಿಲಿ ಅಪ್ಡೇಟ್‌ಗಳ ಜೊತೆ ಸಿನಿಮಾ ಮತ್ತು ಸ್ನೇಹಿತರ ಫೋಟೋಗಳನ್ನು ಯಶ್ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ  ದಿನದಲ್ಲಿ ಸಾವಿರಾರೂ ಮಂದಿ ಮೆಸೇಜ್ ಕಳುಹಿಸುತ್ತಾರೆ.

Latest Videos

click me!