ಸಂಜು ವೆಡ್ಸ್‌ ಗೀತಾ 2 ರಿಲೀಸ್‌ ಮದುವೆ ಮಾಡಿದ್ದಕ್ಕಿಂತ ಕಷ್ಟ ಆಯ್ತು: ನಿರ್ದೇಶಕ ನಾಗಶೇಖರ್‌ ಹೀಗಂದಿದ್ಯಾಕೆ

First Published | Jan 15, 2025, 5:08 PM IST

ಈ ಸಿನಿಮಾ ಬಹುತೇಕ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಚಿತ್ರೀಕರಣಗೊಂಡಿದೆ. ರೇಷ್ಮೆ ಜೊತೆ ಅಲ್ಲಿನ ರಾಣಿಯ ಬದುಕು ಕೂಡ ಕನೆಕ್ಟ್‌ ಆಗಿರುವುದರಿಂದ ಆ ರಾಣಿಯ ಕತೆಯೂ ಸಿನಿಮಾದ ಭಾಗವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

‘ಸಂಜು ವೆಡ್ಸ್‌ ಗೀತಾ 2 ಸಿನಿಮಾ ರಿಲೀಸ್‌ ಕಥೆ ಮದುವೆ ಮಾಡಿದ್ದಕ್ಕಿಂತ ಕಷ್ಟ ಆಗೋಯ್ತು. ಆದರೂ ಲೇಟಾಗಿ ತೆರೆಗೆ ಬರುತ್ತಿರುವುದು ಒಳ್ಳೆಯದೇ ಆಯಿತು. ಏಕೆಂದರೆ ಕಳೆದ ವಾರ ರಿಲೀಸ್‌ ಆದ ಸಿನಿಮಾಗಳು ಹೆಚ್ಚು ಓಡದೇ ನಮ್ಮ ಸಿನಿಮಾಕ್ಕೆ ಹೆಚ್ಚು ಥೇಟರ್‌ ಸಿಕ್ಕಿವೆ. ಹೀಗಂದಿದ್ದು ನಿರ್ದೇಶಕ ನಾಗಶೇಖರ್‌.

ನಾಗಶೇಖರ್‌ ಅವರ ನಿರ್ದೇಶನದ ‘ಸಂಜು ವೆಡ್ಸ್‌ ಗೀತಾ 2’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಜ.17ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ‘ಶ್ರೇಯಾ ಘೋಶಾಲ್ ನಮ್ಮ ಸಿನಿಮಾಕ್ಕೆ ಹಾಡಬೇಕಿತ್ತು. ಆದರೆ ಆಕೆ ಕಾಯಿಸಿ ಕಾಯಿಸಿ ಕೈಕೊಟ್ಟರು.

Tap to resize

ಅವರು ಕನ್ನಡ ಸಿನಿಮಾಗಳಿಗೆ ಹಾಡೋದನ್ನು ಅವಾಯ್ಡ್‌ ಮಾಡುತ್ತಿರುವುದೂ ತಿಳಿಯಿತು. ಆದರೆ ಅವರು ಹೀಗೆ ಮಾಡಿದ್ದರಿಂದ ಸಂಗೀತಾ ಎಂಬ ಕನ್ನಡದ ಹುಡುಗಿ ಸಿನಿಮಾ ಗಾಯನ ಕ್ಷೇತ್ರಕ್ಕೆ ಹೊಸ ಸೇರ್ಪಡೆಯಾದರು’ ಎಂದು ನಾಗಶೇಖರ್‌ ಹೇಳಿದರು.

ನಾಯಕಿ ರಚಿತಾ ರಾಮ್‌ ಎಂದಿನಂತೆ ಈ ಸುದ್ದಿಗೋಷ್ಠಿಯಲ್ಲೂ ಗೈರಾಗಿದ್ದರು. ನಾಯಕ ಶ್ರೀನಗರ ಕಿಟ್ಟಿ, ನಿರ್ಮಾಪಕ ಛಲವಾದಿ ಕುಮಾರ್‌, ವಿತರಕ ಗೋಕುಲ್‌ ರಾಜ್‌ ಹಾಜರಿದ್ದರು.

ಸಂಗೀತಮಯ ಪ್ರೇಮ ಕಥಾನಕ: ‘ಸಂಜು ವೆಡ್ಸ್‌ ಗೀತಾ’ ಸಿನಿಮಾ ಬಿಡುಗಡೆಯಾದ 13 ವರ್ಷದ ಬಳಿಕ ‘ಸಂಜು ವೆಡ್ಸ್ ಗೀತಾ 2’ ಬಿಡುಗಡೆಯಾಗುತ್ತಿದೆ. ಇದೊಂದು ಪ್ರೇಮಕಥಾನಕವಾಗಿದ್ದು, ಪ್ರೇಮಕತೆಯ ಜೊತೆ ರೇಷ್ಮೆ ಬೆಳೆಗಾರರ ಸಂಕಷ್ಟದ ಕತೆಯೂ ಮಿಳಿತಗೊಂಡಿದೆ.

ಈ ಸಿನಿಮಾ ಬಹುತೇಕ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಚಿತ್ರೀಕರಣಗೊಂಡಿದೆ. ರೇಷ್ಮೆ ಜೊತೆ ಅಲ್ಲಿನ ರಾಣಿಯ ಬದುಕು ಕೂಡ ಕನೆಕ್ಟ್‌ ಆಗಿರುವುದರಿಂದ ಆ ರಾಣಿಯ ಕತೆಯೂ ಸಿನಿಮಾದ ಭಾಗವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ನಾಗಶೇಖರ್‌ ಸಿದ್ಧಪಡಿಸಿಕೊಂಡಿದ್ದ ಪ್ರೇಮಕಥೆಗೆ ಚಕ್ರವರ್ತಿ ಚಂದ್ರಚೂಡ್‌ ಅವರು ಶಿಡ್ಲಘಟ್ಟದ ರೇಷ್ಮೆ ಬೆಳೆಗಾರರ ಸಂಕಷ್ಟದ ಕಥನವನ್ನು ಸೇರಿಸಿ ಚಿತ್ರವನ್ನು ವಿಭಿನ್ನವಾಗಿ ಮೂಡಿಬರುವಂತೆ ಮಾಡಿದ್ದಾರೆ. ಶ್ರೀನಗರ ಕಿಟ್ಟಿಯವರು ಭಾವಪೂರ್ಣವಾಗಿ ನಟಿಸಿದ್ದು, ಈ ಸಿನಿಮಾ ಅವರ ಕರಿಯರ್‌ನ ಮತ್ತೊಂದು ಬಹಳ ದೊಡ್ಡ ಸಿನಿಮಾ ಆಗುವ ನಿರೀಕ್ಷೆ ಹೊಂದಿದ್ದಾರೆ.

Latest Videos

click me!