ಯುವ ರಾಜ್‌ಕುಮಾರ್ ನಟನೆಯ ‘ಎಕ್ಕ’ ಚಿತ್ರಕ್ಕೆ ಸಂಜನಾ ಆನಂದ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರೋಹಿತ್ ಪದಕಿ ನಿರ್ದೇಶನದ ಈ ಚಿತ್ರಕ್ಕೆ ಇಬ್ಬರು ನಾಯಕಿಯರು ಇರಲಿದ್ದಾರೆ.
ಮೊದಲ ನಾಯಕಿಯಾಗಿ ಸಂಪದಾ ಆಯ್ಕೆ ಆಗಿದ್ದರು. ಈಗ ಸಂಜನಾ ಆನಂದ್ ಚಿತ್ರತಂಡಕ್ಕೆ ಜತೆಯಾಗಿದ್ದಾರೆ. ಬೆಂಗಳೂರಿನ ಭೂಗತ ಜಗತ್ತಿನಲ್ಲಿರುವ ವ್ಯಕ್ತಿಯೊಬ್ಬನ ಪ್ರಯಾಣದ ಕತೆಯನ್ನು ಒಳಗೊಂಡ ಈ ಚಿತ್ರದಲ್ಲಿ ಅತುಲ್ ಕುಲಕರ್ಣಿ, ಶ್ರುತಿ, ರಾಹುಲ್ ದೇವ್‌ಶೆಟ್ಟಿ ನಟಿಸುತ್ತಿದ್ದಾರೆ.
ಜಾಕಿ ಚಿತ್ರಕ್ಕೆ ಮೊದಲು ಇಟ್ಟಿದ್ದ ಹೆಸರೇ ಎಕ್ಕ: ಹೈ ಡ್ರಾಮಾ ಇರುವ ಆ್ಯಕ್ಷನ್ ಸಿನಿಮಾ. ಸಖತ್ ರಿಯಾಲಿಸ್ಟಿಕ್ ಕತೆ ಇದೆ. ಪ್ರತಿಯೊಬ್ಬನ ಜೀವನಕ್ಕೂ ಕನೆಕ್ಟ್ ಆಗುವ ಕತೆ ಇಲ್ಲಿದೆ. ವೈಯಕ್ತಿಕವಾಗಿಯೂ ಕಾಡುತ್ತದೆ.
ನನ್ನ ಕ್ಯಾರೆಕ್ಟರ್ ಹೆಸರು ಎಕ್ಕ. ಬೇರೆ ಹೆಸರೂ ಇರುತ್ತದೆ. ಆ ಹೆಸರು ಯಾವುದು, ಎಕ್ಕ ಅಂತ ಯಾಕೆ ಕರೆಯುತ್ತಾರೆ ಎಂಬುದು ಕೂಡ ಚಿತ್ರದ ಕತೆಯ ಭಾಗ. ಏರಿಳಿತಗಳು ಇರುವ ಎಮೋಷನ್ ಪಾತ್ರ ಮಾಡುತ್ತಿದ್ದೇನೆ.
ಚಿಕ್ಕಪ್ಪ ಮಾಡಿದ ‘ಜಾಕಿ’ ಸಿನಿಮಾ ನೆನಪಾಯಿತು. ಯಾಕೆಂದರೆ ಆ ಚಿತ್ರದಲ್ಲಿ ಬರುವ ಹಾಡಿನಲ್ಲಿ ಎಕ್ಕ ಎಂಬುದು ಸಿಕ್ಕಾಪಟ್ಟೆ ಜನಪ್ರಿಯವಾಗಿದೆ. ಹಾಗೆ ನೋಡಿದರೆ ‘ಜಾಕಿ’ ಚಿತ್ರಕ್ಕೆ ಮೊದಲ ಇದ್ದ ಹೆಸರು ‘ಎಕ್ಕ’ ಅಂತಲೇ.
ಆದರೆ, ಚಿಕ್ಕಪ್ಪನ ಪಾತ್ರದ ಹೆಸರು ಜಾಕಿ ಇದಿದ್ದರಿಂದ ‘ಜಾಕಿ’ ಆಯಿತು. ಚಿಕ್ಕಪ್ಪ ಮಾಡಬೇಕಿದ್ದ ಹೆಸರಿನ ಚಿತ್ರದಲ್ಲಿ ನಾನು ನಟಿಸುತ್ತಿದ್ದೇನೆಂಬ ಖುಷಿ ಇದೆ. ಈಗಾಗಲೇ ಎರಡು ಫೋಟೋ ಬಿಡುಗಡೆ ಮಾಡಿದ್ದೇವೆ.
ನೀವು ನೋಡಿದ್ದೀರಿ. ಇಡೀ ಸಿನಿಮಾ ಇದೇ ರೀತಿ ಓಪನ್ ಸ್ಟ್ರೀಟ್‌ನಲ್ಲಿ ನಡೆಯುತ್ತದೆ. ರಿಯಾಲಿಸ್ಟಿಕ್ ಸಿನಿಮಾ. ‘ಕಡ್ಡಿಪುಡಿ’ ಪ್ಲೇವರ್ ಇರುತ್ತದೆ. ಅಂದರೆ ಆ ರೀತಿಯ ಪಕ್ಕಾ ಲೋಕಲ್ ಕಲ್ಟ್ ಸಿನಿಮಾ ಇದಾಗಿರುತ್ತದೆ ಎಂದರು ಯುವ ರಾಜ್‌ಕುಮಾರ್.