ಕನ್ನಡ ಚಿತ್ರರಂಗ ರಾಕಿಂಗ್ ಸ್ಟಾರ್, ಪ್ಯಾನ್ ಇಂಡಿಯಾ ರಾಖಿ ಭಾಯ್ ಯಶ್ 39ನೇ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಈ ವರ್ಷ ಗೋವಾದಲ್ಲಿ ಇದ್ದಾರೆ.
ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದೆ. ಹೀಗಾಗಿ ರಾಧಿಕಾ ಪಂಡಿತ್ ಮತ್ತು ಮಕ್ಕಳು ಗೋವಾಗೆ ತೆರಳಿ ಕೇಕ್ ಕಟ್ ಮಾಡಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ.
ಟಾಕ್ಸಿಕ್ ಚಿತ್ರದ ಫಸ್ಟ್ ಲುಕ್ ಹಾಗೂ ಸಣ್ಣ ಟೀಸರ್ ಇಂದು ರಿಲೀಸ್ ಮಾಡಲಾಗಿದೆ. ಕಾರಿನಿಂದ ಇಳಿದು ಬರುವ ಯಶ್ ಪ್ಯಾರಡೈನ್ಸ್ ಎಂಬ ಡ್ಯಾನ್ಸ್ ಪಬ್‌ಗೆ ಭೇಟಿ ನೀಡುತ್ತಾರೆ.
ಹಸಿರು ಬಣ್ಣ ಮ್ಯಾಕ್ಸಿಯಲ್ಲಿ ರಾಧಿಕಾ ಪಂಡಿತ್ ಕಾಣಿಸಿಕೊಂಡಿದ್ದಾರೆ. ವೈಟ್ ಪ್ಯಾಂಟ್ ಮತ್ತು ಗ್ರೀನ್ ಬಣ್ಣದ ಟೀ-ಶರ್ಟ್‌ನಲ್ಲಿ ಸಖತ್ ಸಿಂಪಲ್ ಆಗಿ ಮಿಂಚಿದ್ದಾರೆ.
ಬರ್ತಡೇ ಪಾರ್ಟಿಯಲ್ಲಿ ಕೆವಿಎನ್ ಸಂಸ್ಥೆಯ ನಿರ್ಮಾಪಕ, ಪರ್ಸನಲ್ ಟ್ರೈನರ್ ಕಿಟ್ಟಿ ಹಾಗೂ ಟಾಕ್ಸಿಕ್ ಚಿತ್ರತಂಡ ಪ್ರತಿಯೊಬ್ಬರು ಭಾಗಿಯಾಗಿದ್ದರು. ಚಾಕೋಲೇಟ್ ಕೇಕ್ ಕಟ್ ಮಾಡಿದ್ದಾರೆ.
ಈ ನಡುವೆ ಯಶ್ ಕೆಜಿಎಫ್ ಚಿತ್ರದ ಮತ್ತೊಂದು ಅಪ್ಡೇಟ್ ಸಿಗಲಿದೆ ಎಂದು ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಬೇಸರ ಆಗಿದೆ. ಕೆಜಿಎಫ್ ಚಾಪ್ಟರ್ 3 ಯಾವಾಗ ಶುರು ಎಂದು ಪ್ರಶ್ನಿಸುತ್ತಿದ್ದಾರೆ.