1 ಗಂಟೆ ಫೋನ್‌ನಲ್ಲಿ ಮಾತನಾಡಿದ್ದೀನಿ, ಈಗ ನೆಮ್ಮದಿಯಾಗಿ ಮಲಗಿರುತ್ತೀರಿ; ಬಾಲಿ ಸರ್ ನೆನೆದು ಭಾವುಕರಾದ ವಾಣಿ

First Published | Jan 8, 2025, 2:52 PM IST

ಸರಿಗಮಪ ಜ್ಯೂರಿಯಾಗಿದ್ದ ಬಾಲಿ ಮಾಸ್ಟರ್‌ನ ನೆನೆದು ಭಾವುಕರಾದ ವಾಣಿ ಹರಿಕೃಷ್ಣ. ನನಗೆ ಕೃಷ್ಣನ ಫೋಟೋ ಮತ್ತು ಹಾಡು ಕಳುಹಿಸುತ್ತಿದ್ದರು ಎಂದ ಗಾಯಕಿ. 
 

ಬಹುವಾದ್ಯ ಪರಿಣಿತ ಎಸ್‌. ಬಾಲಸುಬ್ರಹ್ಮಣ್ಯಂರವರು ಕೆಲವು ದಿನಗಳ ಹಿಂದೆ ನಿಧನರಾದರು. ಅವರೊಟ್ಟಿಗೆ ಆತ್ಮೀಯ ಒಡನಾಟ ಹೊಂದಿದ್ದ ಗಾಯಕಿ ವಾಣಿ ಹರಿಕೃಷ್ಣ ಭಾವುಕರಾಗಿದ್ದಾರೆ. ಬಾಲಿ ಅಂಕಲ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಮೃದಂಗ, ತಬಲಾ, ಢೋಲಕ್‌ , ಢೋಲ್ಕಿ, ಖಂಜರಿ, ಕೋಲ್‌ ಹೀಗೆ ಹತ್ತು ಹಲವು ಲಯವಾದ್ಯಗಳನ್ನು ನುಡಿಸುವಲ್ಲಿ ಪರಿಣಿತರಾಗಿದ್ದ ಅಪರೂಪದ ವಿದ್ವಾಂಸ ಎಸ್ ಬಾಲಸುಬ್ರಹ್ಮಣ್ಯಂ ಅವರಿಗೆ 71 ವರ್ಷವಾಗಿತ್ತು.

Tap to resize

'ನಾನು ಅವರನ್ನು ಬಾಲಿ ಅಂಕಲ್ ಆದರೆ ಮೊಬೈಲ್‌ನಲ್ಲಿ ಅವರ ನಂಬರ್‌ನ ಬಾಲಿ ಅಪ್ಪ ಎಂದು ಸೇವ್ ಮಾಡಿಕೊಂಡಿದ್ದೆ' ಎಂದು ವಾಣಿ ಹರಿಕೃಷ್ಣ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

'ನಮ್ಮ ಅಪ್ಪನ ಅವರಲ್ಲಿ ನೋಡುತ್ತಿದ್ದೆ....ನನಗೆ ಕಂಪೋಸಿಷನ್‌ ಬಗ್ಗೆ ಅರ್ಥ ಮಾಡಿಸುತ್ತಿದ್ದರು. ಲಿರಿಕ್ಸ್‌, ಹಾಡು, ರಿಥಮ್....ಮ್ಯೂಸಿಕ್‌ನಲ್ಲಿ ಹಲವಾರು ವಿಚಾರಗಳನ್ನು'

'ನನಗೆ ಕೃಷ್ಣನ ಫೋಟೋಗಳು ಮತ್ತು ಹಳೆ ಮೆಲೋಡಿ ಹಾಡುಗಳನ್ನು ಕಳುಹಿಸುತ್ತಿದ್ದರು. ಅವರು ಕೊನೆಯದಾಗಿ ಮೆಸೇಜ್ ಮಾಡಿದ್ದು ಶನಿವಾರ. ಅವರಿಗೆ ಕರೆ ಮಾಡಿ ಸುಮಾರು 1 ಗಂಟೆಗಳ ಕಾಲ ಮಾತನಾಡಿದ್ದೆ' 

'ಕೆಲವರು ನಮ್ಮ ಹೃದಯದಲ್ಲಿ ಹಾಗೆ ಉಳಿದು ಬಿಡುತ್ತಾರೆ. ಅಂಕಲ್. ಈಗ ನೀವು ನೆಮ್ಮದಿಯಾಗಿ ಮಲಗಿರುತ್ತೀರಿ. ಓಂ ಶಾಂತಿ.  ಭಗವಂತ ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ' ಎಂದಿದ್ದಾರೆ ವಾಣಿ. 

ಕನ್ನಡ ಚಿತ್ರರಂಗದ ಅನೇಕ ಸಂಗೀತ ಸಾಧಕರು ಬಾಲಿ ಅವರನ್ನು ರಿದಂ ಕಿಂಗ್‌ ಎಂದೇ ಕರೆಯುತ್ತಿದ್ದರು. ಸುಗಮ ಸಂಗೀತದಲ್ಲೂ ಇವರು ಮಾಸ್ಟರ್‌, ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್‌, ಆಯೋಜಕರು ಮತ್ತು ನಿರ್ದೇಶಕರು ಎಂಬ ಹೆಗ್ಗಳಿಗೆ ಇವರದು.

ಬಾಲಿ ಅವರು ಕನ್ನಡದ ಮೊಟ್ಟಮೊದಲ ಧ್ವನಿಸುರಳಿ ಕವಿ ನಿಸಾರ ಅಹಮ್‌ದರವರ ನಿತ್ಯೋತ್ಸವದಿಂದ ಮೊದಲುಗೊಂಡು ಮೈಸೂರು ಅನಂತಸ್ವಾಮಿಯವರ ಸಂಯೋಜನೆಗಳಿಗೆ ಸಹಾಯಕರಾಗಿ ವಾದ್ಯದ ನೆರವು ನೀಡಿದವರು.  ಹಲವಾರು ಧ್ವನಿಸುರುಳಿಗಳು, ಕಿರುತೆರೆ, ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. 

Latest Videos

click me!