Highest Paid Actress: ಕನ್ನಡ ಚಲಚಿತ್ರದಲ್ಲಿ ಯಾವ ನಟಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಈ ಬಗ್ಗೆ ನಿಮಗೆ ಏನಾದರೂ ಐಡಿಯಾ ಇದೆಯೇ? ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕ ಮಾಹಿತಿ ಪ್ರಕಾರ ಇಲ್ಲಿದೆ ನೋಡಿ ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಟಾಪ್ 5 ನಟಿಯರ ಕುರಿತು ಮಾಹಿತಿ.
Highest paid acಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು tress
ಕನ್ನಡ ಸಿನಿಮಾ ನಟಿಯರು ಇದೀಗ ಬೇರೆ ಭಾಷೆಗಳಲ್ಲೂ ಸದ್ದು ಮಾಡುತ್ತಿರುತ್ತಾರೆ. ತಮ್ಮ ಸೌಂದರ್ಯ, ನಟನೆಯ ಮೂಲಕ ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಈ ನಟಿಯರ ಪೈಕಿ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ಯಾರು ಅನ್ನೋದು ನಿಮಗೆ ಗೊತ್ತಾ? ಇಲ್ಲಿದೆ ಹೆಚ್ಚು ಸಂಭಾವನೆ ಪಡೆಯುವ ಟಾಪ್ 5 ನಟಿಯರ ಕುರಿತು ಮಾಹಿತಿ.
26
ರಶ್ಮಿಕಾ ಮಂದಣ್ಣ (5-6 ಕೋಟಿ)
ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ, ಸದ್ಯ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲೂ ಸದ್ದು ಮಾಡುತ್ತಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಕನ್ನಡದ ನಟಿ ಎಂದರೆ ಅದು ರಶ್ಮಿಕಾ ಮಂದಣ್ಣ. ಇವರು ಸಿನಿಮಾಗೆ 5-6 ಕೋಟಿ ಸಂಭಾವನೆ ಪಡೆಯುತ್ತಾರೆ.
36
ಶ್ರೀನಿಧಿ ಶೆಟ್ಟಿ (4-5 ಕೋಟಿ)
ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಅತಿ ಹೆಚ್ಚು ಸಂಭಾವನೆ ಪಡೆಯುವ ಇನ್ನೊಬ್ಬ ನಟಿ. ಇವರು ಪ್ರತಿ ಸಿನಿಮಾಕ್ಕೆ 4-5 ಕೋಟಿ ಸಂಭಾವನೆ ಪಡೆಯುತ್ತಾರೆ. ಶ್ರೀನಿಧಿ ಈಗಾಗಲೇ ತಮಿಳು, ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಮುಂದಿನ ಕನ್ನಡ ಸಿನಿಮಾಗೆ ಕಾಯುತ್ತಿದ್ದಾರೆ.
ಡಿಂಪಲ್ ಕ್ವೀನ್ ರಚಿತಾ ರಾಮ್ ಪಡೆಯುವ ಸಂಭಾವನೆ 3 ಕೋಟಿ ರೂಪಾಯಿ. ಸದ್ಯ ಕನ್ನಡದಲ್ಲಿ ಅತಿ ಹೆಚ್ಚು ಸಿನಿಮಾಗಳನ್ನು ಹೊಂದಿರುವ ನಟಿ. ಇವರು ಇತ್ತೀಚೆಗೆ ರಜನಿಕಾಂತ್ ಜೊತೆಗೆ ಕೂಲಿ ಸಿನಿಮಾದಲ್ಲಿ ನಟಿಸಿದ್ದರು.
56
ಆಶಿಕಾ ರಂಗನಾಥ್ (3 ಕೋಟಿ)
ತಮ್ಮ ಅಂದ ಚೆಂದ ಹಾಗೂ ನಟನೆಯಿಂದ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಸದ್ದು ಮಾಡುತ್ತಿರುವ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಸುಮಾರು 3 ಕೋಟಿ ಸಂಭಾವನೆ ಪಡೆಯುತ್ತಾರೆ. ಸದ್ಯ ನಟಿ ವಿಶ್ವಂಭರ ಹಾಗೂ ಗತವೈಭವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
66
ಶಾನ್ವಿ ಶ್ರೀವಾತ್ಸವ್ (2-3 ಕೋಟಿ)
ಅವನೇ ಶ್ರೀಮನ್ನಾರಾಯಣ, ಮಾಸ್ಟರ್ ಪೀಸ್, ತಾರಕ್, ಮುಫ್ತಿ ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದ ನಟಿ ಶಾನ್ವಿ ಶ್ರೀವಾತ್ಸವ್ ಒಂದು ಸಿನಿಮಾಗೆ 2-3 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನುವ ಮಾಹಿತಿ ಇದೆ.