ಬಿಗ್ ಬಾಸ್ ಕನ್ನಡದ ವೀಕೆಂಡ್ ಕಿಚ್ಚನ ಪಂಚಾಯಿತಿಗೆ ಕಾಯುವ ಜನರ ಬಳಗವೇ ತುಂಬಾನೆ ದೊಡ್ಡದಿದೆ. ಇದಕ್ಕೆ ಕಾರಣ ಕಿಚ್ಚ ಸುದೀಪ್ ಮೇಲಿರುವ ಪ್ರೀತಿ, ಅಭಿಮಾನ. ನೀವು ಕಿಚ್ಚನ ಅಭಿಮಾನಿಗಳಾಗಿದ್ದರೆ ಕಿಚ್ಚ ಸುದೀಪ್ ಸಿನಿಮಾಗೆ ಬರೋದಕ್ಕೂ ಮುನ್ನ ಅಭಿನಯಿಸಿದ ಸೀರಿಯಲ್ ಯಾವುದು ಗೊತ್ತಾ?
ಕಿಚ್ಚ ಸುದೀಪ್ ಬಹುಮುಖ ಪ್ರತಿಭೆ. ಇವರು ಕೇವಲ ಕನ್ನಡವಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕ, ಕಥೆ,ಚಿತ್ರಕಥೆಗಾರ,ವಿತರಕ,ದೂರದರ್ಶನ ನಿರೂಪಕ ಮತ್ತು ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡವರು.
27
ಬಹುಭಾಷಾ ನಟ
ಸುದೀಪ್ ಅವರು ಕನ್ನಡ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸುವ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಸೃಷ್ಟಿಸಿದರು. ಜೊತೆಗೆ ಇವರು ತೆಲುಗು, ಹಿಂದಿ ಮತ್ತು ತಮಿಳು ಭಾಷೆಯ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.ಇದಿಷ್ಟು ವಿವರಣೆ ಕೊಡುತ್ತಿರೋದು ಯಾಕಂದ್ರೆ, ಎಲ್ಲರಿಗೂ ಸುದೀಪ್ ಕೇವಲ ಸಿನಿಮಾ ನಟನಾಗಿ ಗೊತ್ತು. ಆದರೆ ಸೀರಿಯಲ್ ನಟನೆಯ ಬಗ್ಗೆ ಗೊತ್ತಿದ್ಯಾ?
37
ಕಿರುತೆರೆಯ ಮೂಲಕ ಬಣ್ಣದ ಲೋಕದ ಪ್ರಯಣ ಶುರು
ದರ್ಶನ್ ತೂಗುದೀಪ, ಗೋಲ್ಡನ್ ಸ್ಟಾರ್ ಗಣೇಶ್ ರಂತೆ ಕಿಚ್ಚ ಸುದೀಪ್ ಕೂಡ ಕಿರುತೆರೆಯಲ್ಲಿ ಅಂದರೆ ಸೀರಿಯಲ್ ಗಳಲ್ಲಿ ನಟಿಸಿಯೇ ಬಳಿಕೆ ಹಿರಿತೆರೆಗೆ ಎಂಟ್ರಿ ಕೊಟ್ಟಿದ್ದು. ಹೌದು, ಇದು ಸಾಕಷ್ಟು ಜನರಿಗೆ ತಿಳಿಯದೇ ಇರುವ ಮಾಹಿತಿ ಕನ್ನಡದ ಒಂದೇ ಒಂದು ಧಾರಾವಾಹಿಯಲ್ಲಿ ಸುದೀಪ್ ನಟಿಸಿದ್ದರು. ಆ ಸೀರಿಯಲ್ ಯಾವುದು ಗೊತ್ತಾ ?
ಕಿಚ್ಚ ಸುದೀಪ್ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ವಾರಸುದಾರ ಧಾರವಾಹಿಯನ್ನ - ನಿರ್ಮಾಣ ಮಾಡಿದ್ದರು. ಜೊತೆಗೆ ಪುಟ್ಟಗೌರಿಮದುವೆ ಧಾರವಾಹಿಯ ಆರಂಭದ ಕಥೆಯನ್ನು ನಿರೂಪಣೆ ಮಾಡಿದ್ದರು. ಆದರೆ ಈ ಎರಡೂ ಧಾರಾವಾಹಿಗಳಲ್ಲೂ ಕಿಚ್ಚ ನಟಿಸಿರಲಿಲ್ಲ.
57
ಪ್ರೇಮದ ಕಾದಂಬರಿ
ಸುದೀಪ್ ಅವರು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರೇಮದ ಕಾದಂಬರಿ ಧಾರಾವಾಹಿಯಲ್ಲಿ ನಟಿಸಿದ್ದರು. ಸುಧಾಕರ್ ಭಂಡಾರಿ ನಿರ್ದೇಶನದ 'ಪ್ರೇಮದ ಕಾದಂಬರಿ' ಧಾರಾವಾಹಿಯಲ್ಲಿ ಪುಟ್ಟ ಪಾತ್ರದಲ್ಲಿ ಕಿಚ್ಚ ನಟಿಸಿದ್ದರು. ಜೊತೆಗೆ ಕೆಲವು ಜಾಹೀರಾತುಗಳಲ್ಲೂ ನಟಿಸಿದ್ದರು. ನಂತರವಷ್ಟೇ ಸುದೀಪ್ ಬೆಳ್ಳಿ ತೆರೆಗೆ ಕಾಲಿಟ್ಟರು.
67
ಹಿರಿತೆರೆ ಎಂಟ್ರಿ ಕೊಟ್ಟಿದ್ದು ಹೀಗೆ
ಸುದೀಪ್ ಬ್ರಹ್ಮ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟರು. ಆದರೆ ಆ ಚಿತ್ರ ರಿಲೀಸ್ ಆಗಲಿಲ್ಲ. ಬಳಿಕ ತಾಯವ್ವ, ಪ್ರತ್ಯರ್ಥ ಸಿನಿಮಾದಲ್ಲಿ ನಟಿಸಿದರು. ಸುದೀಪ್ ನಾಯಕನಾಗಿ ನಟಿಸಿದ್ದು, ಸುನೀಲ್ ಕುಮಾರ್ ದೇಸಾಯಿ ಅವರ ಸ್ಪರ್ಶ ಸಿನಿಮಾದಲ್ಲಿ. ಇನ್ನು ಓಂ ಪ್ರಕಾಶ್ ರಾವ್ ನಿರ್ದೇಶನದ ಹುಚ್ಚ ಸಿನಿಮಾ ಮೂಲಕ ಸುದೀಪ್ ವೃತ್ತಿಜೀವನಕ್ಕೆ ಟರ್ನಿಂಗ್ ಪಾಯಿಂಟ್ ಸಿಕ್ಕಿತು. ಅಂದಿನಿಂದ ಇಂದಿನವರೆಗೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ ಕಿಚ್ಚ.
77
ಸೂಪರ್ ಹಿಟ್ ಸಿನಿಮಾಗಳು
ಸ್ಪರ್ಶ, ಹುಚ್ಚ, ನಂದಿ, ಕಿಚ್ಚ, ಸ್ವಾತಿ ಮುತ್ತು, ಮೈ ಆಟೋಗ್ರಾಫ್, ನಂ 73 ಶಾಂತಿ ನಿವಾಸ , ಮುಸ್ಸಂಜೆ ಮಾತು, ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ , ಕೆಂಪೇಗೌಡ , ಕೋಟಿಗೊಬ್ಬ, ಈಗ, ಫೂಂಕ್ ಮತ್ತು ದಬಾಂಗ್ 3 ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಸಿನಿಮಾಗಳು.