Criminal Movie: ಹಾವೇರಿ-ಹಾನಗಲ್‌ ರಿಯಲ್‌ ಲವ್‌ಸ್ಟೋರಿ ಮೇಲೆ ಕಣ್ಣಿಟ್ಟ Dhruva Sarja, Rachita Ram

Published : Nov 19, 2025, 01:21 PM IST

ಧ್ರುವ ಸರ್ಜಾ ಹೊಸ ಸಿನಿಮಾದ ಮುಹೂರ್ತ ಶುರುವಾಗಿದೆ. ಬೆಂಗಳೂರಿನ ಬಸವನಗುಡಿಯ ಅನ್ನಪೂರ್ಣ ನವ ಮಂತ್ರಾಲಯ ಮಂದಿರದಲ್ಲಿ ಈ ಸಿನಿಮಾದ ಮುಹೂರ್ತ ನೆರವೇರಿದೆ. ಇದು ಧ್ರುವ ಸರ್ಜಾ ಅವರ ಏಳನೇ ಸಿನಿಮಾ. ಈ ಹಿಂದೆ ಕೂಡ ಧ್ರುವ, ರಚಿತಾ ರಾಮ್ ಸಿನಿಮಾ ಮಾಡಿದ್ರು. ಈಗ ಮತ್ತೆ ಹೀರೋಯಿನ್‌ ಆಗಿದ್ದಾರೆ. 

PREV
17
ಉತ್ತರ ಕರ್ನಾಟಕದ ಕಥೆ

ಉತ್ತರ ಕರ್ನಾಟಕದ ಹಿನ್ನಲೆಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ನೈಜ ಘಟನೆ ಕೂಡ ಇದೆ. ಈ ಸಿನಿಮಾಕ್ಕೆ ಕ್ರಿಮಿನಲ್ ಎಂಬ ಟೈಟಲ್ ಇಡಲಾಗಿದೆ.

27
ನಿರ್ದೇಶಕ ರಾಜ್ ಗುರು ಏನಂದ್ರು?

ನಿರ್ದೇಶಕ ರಾಜ್ ಗುರು ಮಾತನಾಡಿ, ಸಿನಿಮಾ ಕಥೆ ಹೇಳಿದ ಬಳಿಕ ಧ್ರುವ ಸರ್ಜಾ ಅವರು ಒಕೆ ಮಾಡಿದರು. ಆ ಬಳಿಕ ನಾನು ಅವರ ಜೊತೆ ಸೆಲ್ಫಿ ತಗೊಂಡೆ. ಸೆಲ್ಫಿ ನೋಡಿ ಖುಷಿ ಜೊತೆ ಭಯ ಆಯ್ತು. ಇದು ಜವಾಬ್ದಾರಿ ಎಂಬ ಭಯ. ಉತ್ತರ ಕರ್ನಾಟಕದ ಬಗ್ಗೆ ಸಿನಿಮಾ ಮಾಡುತ್ತಿದ್ದೇವೆ. ದೊಡ್ಡ ಪ್ರೊಡಕ್ಷನ್ ಕಂಪನಿ ನನಗೆ ಅವಕಾಶ ಕೊಟ್ಟಿದೆ. ಇದು ನನ್ನ ಎರಡನೇ ಸಿನಿಮಾ.‌ ಈ ಚಿತ್ರಕ್ಕೆ ನಿಮ್ಮ ಸಪೋರ್ಟ್ ಇರಲಿ” ಎಂದರು.

37
ನಿರ್ಮಾಪಕ ಮನೀಶ್ ಏನಂದ್ರು?

ನಿರ್ಮಾಪಕ ಮನೀಶ್ ಮಾತನಾಡಿ, ಧ್ರುವ ಸಿನಿಮಾವನ್ನು ಪ್ರೊಡ್ಯೂಸ್ ಮಾಡಿ ಎಂದಾಗ ನನಗೆ ಸರ್‌ಪ್ರೈಸ್ ಆಯ್ತು. ನನ್ನ ಕನಸು ನನಸಾಗಿದೆ. ನಾನು ಕನ್ನಡ ಸಿನಿಮಾ‌ ಮಾಡುತ್ತಿರುವುದು ಖುಷಿ ಆಗಿದೆ. ಇದು ಗ್ರೇಟ್ ಮೂಮೆಂಟ್” ಎಂದರು.

47
ಕಥೆ ಕೇಳದೆ ಓಕೆ ಅಂದ ರಚಿತಾ ರಾಮ್

ನಟಿ ರಚಿತಾ ರಾಮ್ ಮಾತನಾಡಿ, “ಎಂಟು ವರ್ಷಗಳ ನಂತರ ನನ್ನ ಒಳ್ಳೆ ಫ್ರೆಂಡ್ ಧ್ರುವ ಸರ್ಜಾ ಅವರ ಜೊತೆ ಸಿನಿನಾ ಮಾಡುತ್ತಿರುವುದು ಖುಷಿಯಾಗಿದೆ. ಭರ್ಜರಿ ಸಿನಿಮಾ‌ದ ಮುಹೂರ್ತ ಇಲ್ಲೇ ಆಗಿತ್ತು. ಕ್ರಿಮಿನಲ್ ಕೂಡ ಇಲ್ಲೇ ಆಗಿದೆ. ಹೊಸ ತಂಡದ ಜೊತೆ ಕೆಲಸ‌ ಮಾಡುತ್ತಿರುವುದು ಖುಷಿ ಇದೆ. ಫಸ್ಟ್ ನನಗೆ ಧ್ರುವ ಕಾಲ್ ಮಾಡಿದಾಗ, ಕಥೆ, ಪ್ರೊಡಕ್ಷನ್ ಹೌಸ್ ಏನೂ ಕೇಳಲಿಲ್ಲ. ಓಕೆ, ಈ ಸಿನಿಮಾ ಮಾಡ್ತೀನಿ‌ ಎಂದೆ. ಆಮೇಲೆ ನಿರ್ದೇಶಕರು ಮನೆಗೆ ಬಂದು ಕಥೆ ಹೇಳಿದರು. ತುಂಬ ಎಕ್ಸ್‌ಪಿರಿಮೇಂಟ್ ಪಾತ್ರವನ್ನು ಧ್ರುವ ಮಾಡುತ್ತಿದ್ದಾರೆ. ಇದು ಅವರ ಏಳನೇ ಸಿನಿಮಾ. ಇದು ಅವರ ಸಿನಿಕರಿಯರ್‌ನ ಬೆಸ್ಟ್ ಸಿನಿಮಾವಾಗಲಿದೆ” ಎಂದರು.

57
ಧ್ರುವ ಸರ್ಜಾ ಹೇಳಿದ್ದೇನು?

ಧ್ರುವ ಸರ್ಜಾ ಮಾತನಾಡಿ, ಉತ್ತರ ಕರ್ನಾಟಕ ಹಾವೇರಿಯ ಹಾನಗಲ್‌ನಲ್ಲಿ ನಡೆದ ಪ್ರೇಮ ಕಥೆಯಾಧಾರಿತ ಸಿನಿಮಾ ಮಾಡ್ತಿದ್ದೀನಿ. 99% ಸ್ಟೋರಿ ಏನಿದೆ ಅದೇ ತರ ಶೂಟ್ ಮಾಡ್ತೀವಿ. ಭರ್ಜರಿಯಲ್ಲಿ ತಾರಮ್ಮ ಅವರು ನನ್ನ ತಾಯಿ ಪಾತ್ರ ಮಾಡಿದ್ದರು. ಈಗ ಈ ಸಿನಿಮಾದಲ್ಲಿಯೂ ಅಮ್ಮನಾಗಿ ಕಾಣಿಸಿಕೊಳ್ತಿದ್ದಾರೆ. ರಚಿತಾ ಹಾಗೂ ನಾನು ಭರ್ಜರಿ ನಂತ್ರ ಟಚ್ ಅಲ್ಲಿ ಇದ್ವಿ. ಕಥೆ ಕೇಳಿದ ಮೇಲೆ ರಚಿತಾಗೆ ಹೇಳಿದಾಗ, ಅವರು ಕೂಡ ಒಪ್ಪಿಕೊಂಡರು. ತುಂಬನೇ ಯುನಿಕ್ ಸಬ್ಜೆಕ್ಟ್. ಇಡಿ ಸಿನಿಮಾ ಉತ್ತರ ಕರ್ನಾಟಕದ ಭಾಷೆಯಲ್ಲೇ ಇರುತ್ತದೆ, ಅದಕ್ಕಾಗಿ ತಯಾರಿ ಮಾಡಿಕೊಳ್ತಿದ್ದೀನಿ” ಎಂದು ಹೇಳಿದರು.

67
ಕೆರೆಬೇಟೆ ನಿರ್ದೇಶಕ

ಈ ಹಿಂದೆ 'ಕೆರೆಬೇಟೆ' ಸಿನಿಮಾ ಮಾಡಿದ್ದ ರಾಜ್‌ ಗುರು ಅವರು, ಈಗ 'ಕ್ರಿಮಿನಲ್' ಸಿನಿಮಾಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಗೋಲ್ಡ್ ಮೈನ್ಸ್ ಟೆಲಿಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಕಕಾಲಕ್ಕೆ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಚಂದನ್ ಶೆಟ್ಟಿ ಸಂಗೀತ , ವೈದಿ ಛಾಯಾಗ್ರಹಣ, ರವಿವರ್ಮಾ, ವಿಕ್ರಂ ಮೋರ್ ಸಾಹಸ ಸಂಯೋಜನೆ ಚಿತ್ರಕ್ಕಿರಲಿದೆ.

77
ಮೊದಲ ದೃಶ್ಯ ಏನು?

ಚಿತ್ರದಲ್ಲಿ ಹಳ್ಳಿಹೈದ ಶಿವನಾಗಿ ಧ್ರುವ ಸರ್ಜಾ ನಟಿಸುತ್ತಿದ್ದಾರೆ. ಪಾರ್ವತಿಯಾಗಿ ರಚಿತಾ ರಾಮ್ ಬಣ್ಣ ಹಚ್ಚಿದ್ದಾರೆ. ಮೊದಲ ದೃಶ್ಯದಲ್ಲಿ ನಾಯಕಿಯ ಜುಟ್ಟು ಹಿಡಿದು ನಾಯಕ ಮಾತನಾಡುವ ಸನ್ನಿವೇಶ ಇತ್ತು

Read more Photos on
click me!

Recommended Stories