‘ವೃತ್ತ’ ಹೊಸಬರೇ ಸೇರಿಕೊಂಡು ನಿರ್ಮಿಸುತ್ತಿರುವ ಸಿನಿಮಾ. ಆಗಸ್ಟ್ 1ರಂದು ಬಿಡುಗಡೆಯಾಗಲಿದೆ. ಮಿಸ್ಟ್ರಿ ಥ್ರಿಲ್ಲರ್ ಕಥಾಹಂದರದ ಈ ಚಿತ್ರದಲ್ಲಿ ನಾಯಕ ಸಿದ್ಧಾರ್ಥ ಒಂದು ಫೋನ್ ಕರೆಯಿಂದ ದಾರಿ ತಪ್ಪುತ್ತಾನೆ.
25
ಆತನ ಮನಸ್ಥಿತಿಯ ಮೇಲೆ ಸಿನಿಮಾದ ಕಥೆ ಕೇಂದ್ರೀಕೃತವಾಗಿದೆ. ಚೈತ್ರಾ ಆಚಾರ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸತೀಶ್ ನೀನಾಸಂ ಈ ಸಿನಿಮಾವನ್ನು ಪ್ರಸ್ತುತ ಪಡಿಸುತ್ತಿದ್ದಾರೆ.
35
ಲಿಖಿತ್ ಕುಮಾರ್ ನಿರ್ದೇಶನದ ಈ ಸಿನಿಮಾವನ್ನು ಟಿ ಶಿವಕುಮಾರ್ ನಿರ್ಮಾಣ ಮಾಡಿದ್ದಾರೆ. ಮಾಹಿರ್ ಮೊಯ್ಯುದ್ದೀನ್ ನಾಯಕ. ಹರಿಣಿ ಸುಂದರರಾಜನ್ ನಾಯಕಿ.
ಈ ಬಗ್ಗೆ ವಿವರ ನೀಡಿದ ಕತೆಗಾರ ಯೋಗಿ, ಈ ಸಿನಿಮಾ ಒಂದು ರಾತ್ರಿ ನಡೆಯುವ ಘಟನೆ. ಸಿನಿಮಾದ ಶೇ.90ರಷ್ಟು ಭಾಗ ನಾಯಕನೊಬ್ಬನೇ ಇರುತ್ತಾನೆ. ದಟ್ಟ ಕಾಡಿನಲ್ಲಿ ಮುಖ್ಯ ಕಥಾಹಂದರ ನಡೆಯುತ್ತದೆ.
55
ನೀವು ನಿಜಕ್ಕೂ ಭಯ ಪಡುವುದು ಬಯಲಿನ ಕತ್ತಲಿಗಾ ಅಥವಾ ನಿಮ್ಮೊಳಗಿನ ಅಸಹನೀಯ ಮೌನಕ್ಕಾ ಅನ್ನೋದನ್ನು ಈ ಸಿನಿಮಾ ಹೇಳುತ್ತದೆ ಎಂದು ಹೇಳಿದ್ದಾರೆ.