ಕನ್ನಡಿಗರನ್ನು ರಂಜಿಸಿದ ಸಿನಿಮಾ ಹಿಂದಿ, ಮರಾಠಿ, ತೆಲಗು ಭಾಷೆಗೂ ಆಯ್ತು ರಿಮೇಕ್; ಎದೆ ಝೆಲ್ಲೆನ್ನುವ ಕ್ಲೈಮ್ಯಾಕ್ಸ್

Published : Mar 25, 2025, 03:19 PM ISTUpdated : Mar 25, 2025, 04:04 PM IST

ಕೋವಿಡ್ ಲಾಕ್‌ಡೌನ್‌ನಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡ ಕನ್ನಡದ ಸಿನಿಮಾವು ತ್ರಿಕೋನ ಪ್ರೇಮಕಥೆಯನ್ನು ಹೊಂದಿದೆ. ಕ್ಲೈಮ್ಯಾಕ್ಸ್ ನೋಡುಗರನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತದೆ.

PREV
17
ಕನ್ನಡಿಗರನ್ನು ರಂಜಿಸಿದ ಸಿನಿಮಾ ಹಿಂದಿ, ಮರಾಠಿ, ತೆಲಗು ಭಾಷೆಗೂ ಆಯ್ತು ರಿಮೇಕ್; ಎದೆ ಝೆಲ್ಲೆನ್ನುವ ಕ್ಲೈಮ್ಯಾಕ್ಸ್

ಕೋವಿಡ್ ಕಾಲಘಟ್ಟದ ಮೊದಲ ಲಾಕ್‌ಡೌನ್  ವೇಳೆ ಕನ್ನಡದ ಈ ಸಿನಿಮಾ ಕನ್ನಡಿಗರನ್ನು ರಂಜಿಸಿತ್ತು. ಸಿನಿಮಾ ಬಿಡುಗಡೆಯಾಗಿ ಜನಮನ್ನಣೆ ಗಳಿಸಿ ಥಿಯೇಟರ್‌ಗೆ ಜನರು ಬರುವಷ್ಟರಲ್ಲಿ ಲಾಕ್‌ ಡೌನ್ ಆಗಿತ್ತು. ಓಟಿಟಿಯಲ್ಲಿ ಬಿಡುಗಡೆಯಾದ ನಂತರ ಜನರು ಪದೇ ಪದೇ ಈ ಸಿನಿಮಾ ನೋಡಿದ್ದರು.

27

7ನೇ ಫೆಬ್ರವರಿ 2020ರಂದು ಬಿಡುಗಡೆಯಾದ ಸಿನಿಮಾ, ಪ್ರೇಕ್ಷಕರ ಒತ್ತಾಯದ ಮೇರೆಗೆ 2021ರಲ್ಲಿ ಮರು ಬಿಡುಗಡೆಯಾಗಿತ್ತು. ಹೊಸ ಕಲಾವಿದರ ಈ ಚಿತ್ರ ತೆಲಗು, ಹಿಂದಿ ಮತ್ತು ಮರಾಠಿ ಭಾಷೆಗೂ ರಿಮೇಕ್ ಆಗಿತ್ತು.  ತ್ರಿಕೋನ ಪ್ರೇಮಕಥೆಯುಳ್ಳ ಸಿನಿಮಾದ ಕ್ಲೈಮ್ಯಾಕ್ಸ್ ಮಾತ್ರ ನೋಡುಗರ ಎದೆ ಝಲ್ಲೆನ್ನುವಂತೆ ಮಾಡುತ್ತದೆ. 

37

ಖುಷಿ ರವಿ, ಪೃಥ್ವಿ ಅಂಬರ್ ಮತ್ತು ದೀಕ್ಷಿತ್ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ನಟಿಸಿದ 'ದಿಯಾ' ಸಿನಿಮಾ ಕನ್ನಡದ ಯಶಸ್ವಿ ಸಿನಿಮಾಗಳ ಪಟ್ಟಿಗೆ ಸೇರುತ್ತದೆ. ಕಥೆ ಚೆನ್ನಾಗಿದ್ರೆ ಕನ್ನಡಿಗರು ಎಂದಿಗೂ ಕೈ ಬಿಡಲ್ಲ ಅನ್ನೋದಕ್ಕೆ ಸಿನಿಮಾವೇ ಸಾಕ್ಷಿಯಾಗಿತ್ತು.

47

ಎರಡು ಭಾಗವಾಗಿ ಈ ಸಿನಿಮಾ ನೋಡಬಹುದು. ಕಾಲೇಜಿನಲ್ಲಿ ನಾಯಕಿ ದಿಯಾ ಸ್ವರೂಪ್‌ಗೆ ತನ್ನ ಸೀನಿಯರ್ ರೋಹಿತ್ ಮೇಲೆ ಲವ್ ಆಗುತ್ತದೆ. ಇನ್ನೇನು ಪ್ರೀತಿ ಹೇಳಿಕೊಳ್ಳುವ ವೇಳೆಗೆ ರೋಹಿತ್ ವಿದೇಶಕ್ಕೆ ತೆರಳುತ್ತಾನೆ. ಕೆಲ ವರ್ಷಗಳ ನಂತರ ದಿಯಾ ವಾಸಿಸುವ  ಮುಂದಿನ ಫ್ಲ್ಯಾಟ್‌ಗೆ ರೋಹಿತ್ ಬರುತ್ತಾನೆ.

57

ಮತ್ತೆ ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ.  ಈ ಸಂದರ್ಭದಲ್ಲಿ ರೋಹಿತ್ ಅಪಘಾತದಲ್ಲಿ ಸಾಯುತ್ತಾನೆ. ಇದರಿಂದ ನೊಂದ ದಿಯಾಳನ್ನು ಆಕೆಯ ತಂದೆ ಮುಂಬೈನಿಂದ ಬೆಂಗಳೂರಿಗೆ ಕಳುಹಿಸುತ್ತಾನೆ. ಇಲ್ಲಿ ನಾಯಕಿಯ ಜೀವನಕ್ಕೆ ಆದಿ ಬರುತ್ತಾನೆ. ಸ್ವಲ್ಪ ಸಮಯದ ಬಳಿಕ ಆದಿ ಮತ್ತು ದಿಯಾ ನಡುವೆ ಪ್ರೇಮಾಂಕುರವಾಗುತ್ತದೆ. ಈ ವೇಳೆ ಸತ್ತಿದ್ದಾನೆ ಎಂದು ತಿಳಿದಿದ್ದ ರೋಹೀತ್ ಬರುತ್ತಾನೆ. ಈಗ ದಿಯಾ ಯಾರನ್ನು ಮದುವೆ ಆಗ್ತಾಳೆ ಅನ್ನೋದು ಚಿತ್ರದ ಸಸ್ಪೆನ್ಸ್.

67

ಇದೇ ಚಿತ್ರದಲ್ಲಿ ತಾಯಿ-ಮಗನ ಬಾಂಧವ್ಯವನ್ನು ಅದ್ಭುತವಾಗಿ ತೋರಿಸಲಾಗಿದೆ. ಆದಿಯ ತಾಯಿಯಾಗಿ ಪವಿತ್ರಾ ಲೋಕೇಶ್ ನಟಿಸಿದ್ದು, ಇಬ್ಬರ ನಡುವಿನ ಸಂಭಾಷಣೆಯ ದೃಶ್ಯಗಳು ಹೃದಯಕ್ಕೆ ಹತ್ತಿರವಾಗುತ್ತದೆ. ಮಗ ಇಷ್ಟಪಟ್ಟ ಬೈಕ್‌ನ್ನು ತಾಯಿ ಕೊಡಿಸುವ ದೃಶ್ಯ ಸ್ಮೃತಿಪಟಲದಲ್ಲಿ ಅಚ್ಚಳಿಯದಂತೆ ಉಳಿಯುತ್ತದೆ. ಅಮ್ಮಂದಿರ ದಿನದಂದು ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತದೆ. 

77

ಪಾತ್ರಗಳು ಹೀಗಿವೆ
ದಿಯಾ ಸ್ವರೂಪ್ ಪಾತ್ರದಲ್ಲಿ ಖುಷಿ ರವಿ, ರೋಹಿತ್‌ನಾಗಿ ದೀಕ್ಷಿತ್ ಶೆಟ್ಟಿ , ಆದಿಯಾಗಿ ಪೃಥ್ವಿರಾಜ್ ಅಂಬರ್ ಮತ್ತು ಡಾಕ್ಟರ್ ಲಕ್ಕಿಯಾಗಿ ಪವಿತ್ರಾ ಲೋಕೇಶ್ ನಟಿಸಿದ್ದಾರೆ. 

Read more Photos on
click me!

Recommended Stories