ಮೇಘನಾ ರಾಜ್ ಜೊತೆ ಜಿಮ್‌ನಲ್ಲಿ ಕಾಣಿಸಿಕೊಂಡ ಮಗ; ರಾಯನ್ ಕೈಯಲ್ಲಿ ಡಂಬಲ್ಸ್ ನೋಡಿ ಫುಲ್ ಶಾಕ್
ಸಾಮಾನ್ಯವಾಗಿ ಮೇಘನಾ ರಾಜ್ ಭಾನುವಾರ ಹೇಗಿರುತ್ತದೆ? ರಾಯನ್ ರಾಜ್ ಸರ್ಜಾ ತುಂಟಾಟ ನೋಡಿ ಎಲ್ಲರೂ ಶಾಕ್.....
ಸಾಮಾನ್ಯವಾಗಿ ಮೇಘನಾ ರಾಜ್ ಭಾನುವಾರ ಹೇಗಿರುತ್ತದೆ? ರಾಯನ್ ರಾಜ್ ಸರ್ಜಾ ತುಂಟಾಟ ನೋಡಿ ಎಲ್ಲರೂ ಶಾಕ್.....
ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ಬಿಡುವಿನ ಸಮಯದಲ್ಲಿ ಏನು ಮಾಡುತ್ತಾರೆ? ಅವರ ಭಾನುವಾರ ಹೇಗಿರುತ್ತದೆ ಎಂದು ಪ್ರಶ್ನೆ ಮಾಡುತ್ತಿರುವ ಅಭಿಮಾನಿಗಳಿಗೆ ಉತ್ತರ ಈ ಫೋಟೋಗಳು.
ಹೌದು! ಪ್ರೆಗ್ನೆನ್ಸಿ ಜರ್ನಿಯಲ್ಲಿ ಮೇಘನಾ ರಾಜ್ ಆರೋಗ್ಯದ ಮೇಲೆ ಹೆಚ್ಚಿಗೆ ಗಮನ ಕೊಟ್ಟರು. ಹೀಗಾಗಿ ರಾಯನ್ ದೊಡ್ಡವನಾಗುತ್ತಿದ್ದಂತೆ ಜಿಮ್ ವರ್ಕೌಟ್ ಮಾಡಲು ಶುರು ಮಾಡಿಬಿಟ್ಟರು.
ಭಾನುವಾರ ಕೂಡ ಮೇಘನಾ ರಾಜ್ ವರ್ಕೌಟ್ ಮಾಡುವುದನ್ನು ನಿಲ್ಲಿಸುವುದಿಲ್ಲ.ರಾಯನ್ ಸ್ಕೂಲ್ ರಜ ಇದ್ದ ಕಾರಣ ತಾಯಿ ಜೊತೆ ವರ್ಕೌಟ್ ಮಾಡಲು ಶುರು ಮಾಡಿದ್ದಾನೆ.
'ಸಾಮಾನ್ಯವಾಗಿ ನಮ್ಮ ಭಾನುವಾರ ನಾವು ಮಾಡುವ ಕೆಲಸವಿದು. ಆರೋಗ್ಯದ ದೃಷ್ಟಿಯಲ್ಲಿ ಮಾತನಾಡುವ ಮುನ್ನ ನಾನು ಹೇಳಿಬಿಡುತ್ತೀನಿ. ನಾನು ವರ್ಕೌಟ್ ಮಾಡುವುದನ್ನು ನೋಡಲು ಬರುತ್ತಾನೆ'
'ಜಿಮ್‌ಗೆ ಬರುವುದಲ್ಲದೆ ನಾನು ಮಾಡುವ ವರ್ಕೌಟ್‌ಗಳನ್ನು ನೋಡಿಕೊಂಡು ನನ್ನಂತೆ ಮಾಡಲು ಶುರು ಮಾಡಿಬಿಡುತ್ತಾನೆ' ಎಂದು ಮೇಘನಾ ಬರೆದುಕೊಂಡಿದ್ದಾರೆ.
ಇಷ್ಟು ಚಿಕ್ಕ ಹುಡುಗನ ಕೈಯಲ್ಲಿ ಡಂಬಲ್ಸ್ ಕೊಡ್ಬೇಡಿ, ಸ್ಕೂಲ್‌ಗೆ ಹೋಗ್ತಾನಾ ರಾಯನ್? ಚಿರು ರೂಪದಲ್ಲಿ ರಾಯನ್ ನಿಮ್ಮ ಜೊತೆಗಿದ್ದಾನೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.