ಕನ್ನಡದಲ್ಲಿಯೂ ಅನೇಕ ಹಾರರ್ ಸಿನಿಮಾಗಳಿವೆ. ಒಂದೊಂದು ಸಿನಿಮಾಗಳು ನಿಮ್ಮ ಹೃದಯದ ಬಡಿತವನ್ನು ಹೆಚ್ಚಿಸುತ್ತವೆ. ಅದರಲ್ಲಿಯೂ ಹೊಸಬರ ಚಿತ್ರಗಳು ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸುತ್ತವೆ. ಇಂದು ನಾವು ನಿಮಗೆ ವಿಶೇಷ ಸಿನಿಮಾ ಬಗ್ಗೆ ಹೇಳುತ್ತಿದ್ದೇವೆ.
25
2013ರಲ್ಲಿ ಬಿಡುಗಡೆ
2013ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಕೆಎಸ್ ಅಶೋಕ್ ಕಥೆ ಬರೆದು ನಿರ್ದೇಶನ ಮಾಡಿದ್ದರು. 1999ರ ವೇಳೆ ಅಮೆರಿಕದಲ್ಲಿ ನಡೆದ ಘಟನೆಯನ್ನಾಧರಿಸಿ ಈ ಸಿನಿಮಾವನ್ನು ತೆರೆ ಮೇಲೆ ತರಲಾಗಿತ್ತು. ಕನ್ನಡದ ಟೈಟಲ್‌ನಲ್ಲಿಯೇ 2014ರಲ್ಲಿ ಹಿಂದಿಗೆ ರಿಮೇಕ್ ಆಗಿತ್ತು.
35
6-5=2.
ಇಂದು ನಾವು ಹೇಳುತ್ತಿರೋದು ಕನ್ನಡದ ಮೊದಲ ಫೌಂಡ್ ಫೋಟೇಜ್ ಚಿತ್ರ 6-5=2. ಬ್ಲೇರ್ ವಿಚ್ ಪ್ರಾಜೆಕ್ಟ್ ಸ್ಪೂರ್ತಿ ಪಡೆದು ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಕೆಲವರು ಚಾರಣಕ್ಕಾಗಿ ದಟ್ಟವಾದ ಅರಣ್ಯದೊಳಗೆ ಹೋಗುತ್ತಾರೆ. ಈ ಯುವಕರಲ್ಲಿ ಒಬ್ಬರ ನಂತರ ಒಬ್ಬರು ಕಾಣೆಯಾಗುತ್ತಾರೆ. ನಂತರ ಕಾಣೆಯಾದವರು ಸಾಯುತ್ತಾರೆ.
ಅರಣ್ಯದಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು ಚಾರಣಿಗರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾರೆ. ದರ್ಶನ್ ಅಪೂರ್ವ, ಕೃಷ್ಣ ಪ್ರಕಾಶ್, ವಿಜಯ್ ಚೆಂಡೂರ್, ಪಲ್ಲವಿ, ತನುಜಾ ಮತ್ತು ಮೃತ್ಯುಂಜಯ್ 6-5=2 ಸಿನಿಮಾದಲ್ಲಿ ಸಹಜವಾಗಿಯೇ ನಟಿಸಿದ್ದಾರೆ.
55
6-5=2
ವರದಿಗಳ ಪ್ರಕಾರ 6-5=2 ಸಿನಿಮಾ ಕೇವಲ 30 ಲಕ್ಷ ರೂಪಾಯಿಗಳಲ್ಲಿ ನಿರ್ಮಾಣವಾಗಿತ್ತು. ಬಿಡುಗಡೆ ಬಳಿಕ ಚಿತ್ರ ಬರೋಬ್ಬರಿ 5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಹೊಸತನದೊಂದಿಗೆ ಬಂದ ಈ ಸಿನಿಮಾ ನೋಡುಗರಿಗೆ ಇಷ್ಟವಾಗಿತ್ತು.