ಶಿವರಾಜ್‌ಕುಮಾರ್ ನಟನೆಯಲ್ಲಿ ‘ಭೈರತಿ ರಣಗಲ್’ ಚಿತ್ರವನ್ನು ನಿರ್ದೇಶಿಸಿದ್ದ ನರ್ತನ್, ಸದ್ಯಕ್ಕೆ ಯಾವ ಚಿತ್ರವನ್ನು ಒಪ್ಪಿಕೊಂಡಿಲ್ಲ. ಈ ನಡುವೆ ತೆಲುಗಿನ ರಾಮ್ ಚರಣ್ ತೇಜ ಅವರೊಂದಿಗೆ ಸಿನಿಮಾ ಮಾಡುತ್ತಾರೆಂಬ ಸುದ್ದಿಯೂ ಇತ್ತು.
ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ಮಫ್ತಿ ನರ್ತನ್ ಕಾಂಬಿನೇಶನ್‌ನಲ್ಲಿ ಹೊಸ ಸೆಟ್ಟೇರಲಿದೆ ಎಂಬುದು ಸದ್ಯದ ಸ್ಯಾಂಡಲ್‌ವುಡ್ ಟಾಕ್. ಇವರಿಬ್ಬರ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ಸಾರಥ್ಯ ವಹಿಸಿಕೊಳ್ಳಲಿದೆ ಎನ್ನುವ ಸುದ್ದಿಯೂ ಇದೆ.
25
ಶಿವರಾಜ್‌ಕುಮಾರ್ ನಟನೆಯಲ್ಲಿ ‘ಭೈರತಿ ರಣಗಲ್’ ಚಿತ್ರವನ್ನು ನಿರ್ದೇಶಿಸಿದ್ದ ನರ್ತನ್, ಸದ್ಯಕ್ಕೆ ಯಾವ ಚಿತ್ರವನ್ನು ಒಪ್ಪಿಕೊಂಡಿಲ್ಲ. ಈ ನಡುವೆ ತೆಲುಗಿನ ರಾಮ್ ಚರಣ್ ತೇಜ ಅವರೊಂದಿಗೆ ಸಿನಿಮಾ ಮಾಡುತ್ತಾರೆಂಬ ಸುದ್ದಿಯೂ ಇತ್ತು.
35
ಇದರ ಜತೆಗೆ ಯುವರಾಜ್‌ಕುಮಾರ್ ಅವರ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆಂಬ ಸುದ್ದಿಯೂ ಹಬ್ಬಿತ್ತು. ಈಗ ಧ್ರುವ ಸರ್ಜಾ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆಂಬ ಸುದ್ದಿ ಕೇಳಿ ಬರುತ್ತಿದೆ.
ಈ ಬಗ್ಗೆ ಪತ್ರಿಕ್ರಿಯಿಸಿರುವ ನರ್ತನ್, ನಾನು ಈಗ ಕತೆ ಬರೆಯುತ್ತಿದ್ದೇನೆ. ಧ್ರುವ ಸರ್ಜಾ ಅವರು ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗಿದ್ದಾರೆ. ಅವರು ಬಂದ ಮೇಲೆ ಅವರಿಗೆ ಕತೆ ಹೇಳಬೇಕಿದೆ.
55
ಆ ನಂತರ ಉಳಿದ ಸಂಗತಿಗಳು ಅಂತಿಮಗೊಳ್ಳಲಿವೆ. ಈಗ ಎಲ್ಲವೂ ಪ್ರಾರಂಭಿಕ ಹಂತದಲ್ಲಿದೆ. ಧ್ರುವ ಸರ್ಜಾ ಅವರಿಗೆ ಕತೆ ಹೇಳಿದ ಮೇಲೆ ಉಳಿದ ವಿವರಗಳ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.