ಮತ್ತೆ ಮುಂದೋಯ್ತು ಬಹು ನಿರೀಕ್ಷಿತ 'ಟಾಕ್ಸಿಕ್' ಬಿಡುಗಡೆ ದಿನಾಂಕ; ಯಶ್ ಮಹತ್ವದ ಅಪ್‌ಡೇಟ್‌

Published : Apr 29, 2026, 10:51 AM IST

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ 'ದಿ ಟಾಕ್ಸಿಕ್' ಸಿನಿಮಾದ ಬಿಡುಗಡೆ ದಿನಾಂಕ ಮತ್ತೊಮ್ಮೆ ಮುಂದೂಡಿಕೆಯಾಗಿದೆ. ಈ ಹಿಂದೆ ಜೂನ್ 4ಕ್ಕೆ ನಿಗದಿಯಾಗಿದ್ದ ದಿನಾಂಕವನ್ನು ಮತ್ತೆ ಮುಂದೂಡಲಾಗಿದ್ದು, ಹೊಸ ದಿನಾಂಕವನ್ನು ಚಿತ್ರತಂಡ ಇನ್ನೂ ಪ್ರಕಟಿಸಿಲ್ಲ. 

PREV
14
ಟಾಕ್ಸಿಕ್

ಭಾರತದ ಬಹು ನಿರೀಕ್ಷಿತ ರಾಕಿಂಗ್ ಸ್ಟಾರ್ ಅಭಿನಯದ ಯಶ್‌ ನಟನೆಯ 'ದಿ ಟಾಕ್ಸಿಕ್' ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿದೆ. ಈ ಹಿಂದೆ ಮಾರ್ಚ್ 19ಕ್ಕೆ ಚಿತ್ರ ಬಿಡುಗಡೆಗೆ ದಿನಾಂಕ ನಿಗಧಿಯಾಗಿತ್ತು.

24
ಜೂನ್ 4

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಕಾರಣದಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಜೂನ್ 4ಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಮತ್ತೆ ಚಿತ್ರದ ದಿನಾಂಕ ಮುಂದೂಡಿಕೆಯಾಗಿರುವ ಮಾಹಿತಿಯನ್ನು ನಟ ಯಶ್ ಶೇರ್ ಮಾಡಿಕೊಂಡಿದ್ದಾರೆ. ಆದರೆ ಯಾವಾಗ ಚಿತ್ರ ಥಿಯೇಟರ್‌ಗೆ ಬರಲಿದೆ ಎಂಬುದರ ಮಾಹಿತಿಯನ್ನು ಚಿತ್ರತಂಡ ತಿಳಿಸಿಲ್ಲ. ಶೀಘ್ರದಲ್ಲಿಯೇ ಬರಲಿದೆ ಎಂಬ ಮಾಹಿತಿಯನ್ನು ತಿಳಿಸಿದೆ.

34
ಅಭಿಮಾನಿಗಳು ಹೇಳಿದ್ದೇನು?

ಈಗಾಗಲೇ ಟೀಸರ್, ಟ್ರೈಲರ್ ಮತ್ತು ಕಲಾವಿದರ ಲುಕ್ ರಿವೀಲ್ ಆಗಿದ್ದು, ಸಿನಿಮಾದ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಮೂಂದೂಡಿಕೆ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.  ಇನ್ನು ಕೆಲವರು ನಾವು ಕಾಯುತ್ತೇವೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

44
ನಿರ್ದೇಶಕಿ ಗೀತು ಮೋಹನ್‌ ದಾಸ್‌

ಇತ್ತೀಚೆಗೆ ಸಂದರ್ಶನದಲ್ಲಿ ಟಾಕ್ಸಿಕ್ ನಿರ್ದೇಶಕಿ ಗೀತು ಮೋಹನ್‌ ದಾಸ್‌ ಅವರ ಬಗ್ಗೆ ನಟ ಯಶ್ ಮಾತನಾಡಿದ್ದರು.ಗ್ಯಾಂಗ್‌ಸ್ಟರ್ ಕತೆಯಲ್ಲಿ ಮಹಿಳಾ ನಿರ್ದೇಶಕಿಯೊಬ್ಬರು ಶೃಂಗಾರ, ಬಯಕೆ ಮತ್ತು ಬೋಲ್ಡ್ ದೃಶ್ಯಗಳನ್ನು ಕಟ್ಟಿಕೊಡುವ ರೀತಿ ವಿಭಿನ್ನವಾಗಿದ್ದು, ತಮಗೆ ಅಚ್ಚರಿ ತಂದಿದೆ ಎಂದು ಮೆಚ್ಚುಗೆ ಸೂಚಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories