Anu-Raghu Anniversary: ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿಗಳಾದ ರಘು ಮುಖರ್ಜಿ ಮತ್ತು ಅನುಪ್ರಭಾಕರ್ ತಮ್ಮ 10 ವರ್ಷದ ವಿವಾಹ ವಾರ್ಷಿಕೋತ್ಸವವನ್ನು ತಮ್ಮ ಕುಟುಂಬದ ಜೊತೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಿದ್ದಾರೆ.
ಕನ್ನಡ ಚಿತ್ರರಂಗದ ತಾರಾ ಜೋಡಿಗಳಾದ ರಘು ಮುಖರ್ಜಿ ಮತ್ತು ಅನು ಪ್ರಭಾಕರ್ ಜೋಡಿ 10ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು, ತಮ್ಮ ಮಗಳು, ಪೋಷಕರು ಹಾಗೂ ಸ್ನೇಹಿತರ ಜೊತೆ ಸಿಂಪಲ್ ಆಗಿ ಸಂಭ್ರಮಿಸಿದ್ದಾರೆ.
26
ಕುಟುಂಬದ ಜೊತೆ ಆನಿವರ್ಸರಿ ಸಂಭ್ರಮ
ಅನು ಪ್ರಭಾಕಾರ್ ಹಾಗೂ ರಘು ಮುಖರ್ಜಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಬರೋಬ್ಬರಿ 10 ವರ್ಷಗಳು ಕಳೆದಿವೆ. ಏಪ್ರಿಲ್ 25, 2016 ರಲ್ಲಿ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ದಶಕ ತುಂಬಿದ ಸಂಭ್ರಮದಲ್ಲಿ ಕುಟುಂಬದ ಜೊತೆ ಆನಿವರ್ಸರಿ ಆಚರಿಸ್ಸಿದ್ದಾರೆ.
36
ಇಬ್ಬರಿಗೂ ಇದು ಎರಡನೇ ಮದುವೆ
ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಹತ್ತು ವರ್ಷಗಳ ಹಿಂದೆ ಈ ಜೋಡಿ ತಮ್ಮ ನಿವಾಸದಲ್ಲಿ ಕುಟುಂಬಸ್ಥರು ಮತ್ತು ಆತ್ಮೀಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಇಬ್ಬರ ಅಮ್ಮನವರು ಹಾಗೂ ಸ್ನೇಹಿತರ ಜೊತೆ ಆನಿವರ್ಸರಿ ಸಂಭ್ರಮಿಸಿದ್ದಾರೆ.
ರಘು ಮತ್ತು ಅನು ಪ್ರಭಾಕರ್ ಇಬ್ಬರೂ ವಿಚ್ಚೇದನ ಪಡೆದವರಾಗಿರುವುದರಿಂದ, ಇಬ್ಬರು ಇಷ್ಟಪಟ್ಟು ಲವ್ ಮಾಡಿ ಮದುವೆಯಾದದ್ದು ಅಲ್ಲವಂತೆ, ಸ್ನೇಹಿತರಾಗಿದ್ದಾಗ, ಇಬ್ಬರ ಮನೆಯವರು ಒಂದಾಗಿ ನಿರ್ಧರಿಸಿದಂತಹ ನಿರ್ಧಾರ ಇದಾಗಿದೆ ಎಂದು ಹಿಂದೊಮ್ಮೆ ಅನು ಪ್ರಭಾಕರ್ ಸಂದರ್ಶನವೊಂದರಲ್ಲಿ ತಿಳಿಸಿದ್ದರು.
56
ಕುಟುಂಬದವರು ಒಪ್ಪಿ ಮಾಡಿದ ಜೋಡಿ
'ಸೂಪರ್' ಕಾರ್ಯಕ್ರಮದಲ್ಲಿ ರಘು ಜೊತೆಗೆ ಅನು ಕೂಡ ಜಡ್ಜ್ ಆಗಿದ್ದರು. ಅದಾದ್ಮೇಲೆ ಫ್ರೆಂಡ್ಸ್ ಆಗಿದ್ದರು, ಬಳಿಕ ಕಷ್ಟದಲ್ಲಿ ಇರುವಾಗ ಸ್ನೇಹ ಗಟ್ಟಿ ಆಯ್ತು. ಮದುವೆ ಆಗುವ ಯೋಚನೆ ಖಂಡಿತವಾಗಿಯೂ ಅನುಗೆ ಇರಲಿಲ್ಲ. ವಿದ್ಯಾಭ್ಯಾಸ, ಸಿನಿಮಾ ಅಂತ ಅನು ಇದ್ರೆ, ಕುಟುಂಬದವರೇ ಮುಂದೆ ಬಂದು ಮಾತುಕತೆ ನಡೆಸಿದರಂತೆ, ತುಂಬಾ ಟೈಮ್ ತೆಗೆದುಕೊಂಡು ಇಬ್ಬರೂ ಮದುವೆಗೆ ಒಪ್ಪಿಕೊಂಡರಂತೆ. .
66
ಮತ್ತೆ ಸೀರಿಯಲ್ ಗೆ ಬಂದ ಅನು ಪ್ರಭಾಕರ್
ಇನ್ನು ರಘು ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ತುಂಬಾನೆ ಸಂತೋಷದಿಂದ ಜೀವನ ನಡೆಸುತ್ತಿರುವುದಾಗಿ ಅನು ಪ್ರಭಾಕರ್ ಹೇಳಿದ್ದಾರೆ. ಇನ್ನು ಅನು ಇತ್ತೀಚೆಗೆ ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದರು. ಇನ್ನು ಗಂಡ ಹೆಂಡತಿ ಜೋಡಿಯಾಗಿ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.