ಯಶ್ Toxic ಟೀಸರ್​ನಲ್ಲಿ ಕಾರೊಳಗಿನ ಆ ದೃಶ್ಯ ಯಾಕೆ ಬಂತು? ನಿರ್ದೇಶಕ ತರುಣ್​ ಸುಧೀರ್​ ಹೇಳಿದ್ದೇನು?

Published : Feb 23, 2026, 01:10 PM IST

ಯಶ್ ಅವರ 'ಟಾಕ್ಸಿಕ್' ಚಿತ್ರದ ಟೀಸರ್‌ನಲ್ಲಿನ ವಿವಾದಾತ್ಮಕ ದೃಶ್ಯವು ಟೀಕೆಗೆ ಗುರಿಯಾಗಿದೆ. ಈ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಪ್ರತಿಕ್ರಿಯಿಸಿದ್ದು, ಯಶ್ ಅವರು  ಮುಜುಗರವಾಗುವ ದೃಶ್ಯಗಳನ್ನು ಮಾಡುವುದಿಲ್ಲ ಮತ್ತು ಆ ದೃಶ್ಯದ ಹಿಂದೆ ಒಂದು ಸೂಕ್ಷ್ಮ ಕಾರಣವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

PREV
16
ಟಾಕ್ಸಿಕ್​ ಟೀಸರ್​ ಗಲಾಟೆ

ಯಶ್​ ಅವರ ಬಹು ನಿರೀಕ್ಷಿತ ಟಾಕ್ಸಿಕ್​ (Yash's Toxic Movie) ಚಿತ್ರದ ಟೀಸರ್​ ಹೊರಬರುತ್ತಲೇ ಇದರ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು ಗೊತ್ತೇ ಇದೆ. ಕಾರಿನ ಒಳಗೆ ಗಂಡು-ಹೆಣ್ಣು ಲೈಂ*ಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿರುವುದು, ಆ ಕಾರು ಡಾನ್ಸ್​ ಮಾಡುತ್ತಿರುವಂತೆ ತೋರಿಸಿರುವುದು ಈ ಟೀಕೆಗೆ ಕಾರಣ, ಯಶ್​ ಅಂಥ ನಟ ಈ ರೀತಿ ಮಾಡಲು ಸಾಧ್ಯವೇ ಇಲ್ಲ, ಯಾಕೆ ಹಾಗೆ ಮಾಡಿದ್ರು ಎನ್ನುವುದು ಬಹುತೇಕ ಮಂದಿಯ ಕಳಕಳಿಯೂ ಹೌದು.

26
ತರುಣ್​ ಸುಧೀರ್​ ಹೇಳಿದ್ದೇನು?

ಅದರ ಬಗ್ಗೆ ಇದೀಗ ನಿರ್ದೇಶಕ ತರುಣ್​ ಸುಧೀರ್​ (Director Tharun Sudhir) ಕೆಲವೊಂದು ವಿಷಯಗಳನ್ನು, ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.. ಮಾಧ್ಯಮವೊಂದರ ಜೊತೆಗಿನ ಸಂದರ್ಶನದಲ್ಲಿ ಅವರು ಈ ವಿಷಯವಾಗಿ ಮಾತನಾಡಿದ್ದಾರೆ.

36
ತೀರಾ ವೈಯಕ್ತಿಕವಾಗಿ ಬಲ್ಲೆ

ನಾನು ಯಶ್​ ಅವರನ್ನು ತೀರಾ ವೈಯಕ್ತಿಕವಾಗಿ ಬಲ್ಲೆ. ಸಿನಿಮಾಗಳ ಕ್ರಿಯೇಟಿವ್​ ಡಿಸ್​ಕಷನ್​ನಲ್ಲಿ ನಾನು ಅವರ ಜೊತೆ ಇದ್ದೇನೆ. ಅವರ ಮೈಂಡ್​ಸೆಟ್​ ನನಗೆ ತುಂಬಾ ಚೆನ್ನಾಗಿ ಗೊತ್ತಿದೆ. ಅವರು ಯಾವತ್ತಿಗೂ ಕುಟುಂಬ ಸಹಿತವಾಗಿ ವೀಕ್ಷಕರು ನೋಡುವಾಗ ಅವರಿಗೆ ಮುಜುಗರ ಆಗುವಂಥ ದೃಶ್ಯಗಳನ್ನು ಮಾಡುವುದಿಲ್ಲ. ಟಾಕ್ಸಿಕ್​ ಚಿತ್ರದಲ್ಲಿಯೂ ಆ ರೀತಿ ಇರಲ್ಲ ಎಂದೇ ಹೇಳಿದ್ದಾರೆ.

46
ಯಶ್​ ತುಂಬಾ ಸೂಕ್ಷ್ಮ ಮನಸ್ಸಿನ ವ್ಯಕ್ತಿ

ಯಶ್​ ತುಂಬಾ ಸೂಕ್ಷ್ಮ ಮನಸ್ಸಿನ ವ್ಯಕ್ತಿ. ತುಂಬಾ ಸೆನ್ಸಿಬಲ್​. ಅವರು ಏನೋ ಒಂದು ದೃಶ್ಯ ತೋರಿಸಿದ್ದಾರೆ ಎಂದರೆ ಅಲ್ಲೊಂದು ಸೆನ್ಸಿಬಲ್​ ಕಾರಣ ಇದ್ದೇ ಇರುತ್ತದೆ. ಇದರ ಹಿಂದೆ ಮಾರ್ಕೆಟಿಂಗ್​ ಅಥವಾ ಪ್ರಮೋಷನ್​ಗೆ ಖಂಡಿತಾ ಇರುವುದಿಲ್ಲ. ಅಲ್ಲೊಂದು ಸ್ಟ್ರಾಂಗ್​ ರೀಸನ್​ ಇರುತ್ತದೆ ಎಂದಿದ್ದಾರೆ.

56
ಚಿಕ್ಕ ದೃಶ್ಯ ಇರಬಹುದು

ಯಶ್​ ಅವರು ಯಾವುದೇ ದೃಶ್ಯ ತೋರಿಸುವಾಗಲೂ ತುಂಬಾ ರಿಸರ್ಚ್​ ಮಾಡುತ್ತಾರೆ. ವೀಕ್ಷಕರ ಮನಸ್ಸನ್ನು ಸೆಟ್​ ಮಾಡಲು ಈ ದೃಶ್ಯ ತೋರಿಸಿರಬಹುದು. ಇದರ ಅರ್ಥ ಸಿನಿಮಾದಲ್ಲಿ ಯಾವುದೋ ಒಂದು ಚಿಕ್ಕ ಸನ್ನಿವೇಶದಲ್ಲಿ ಇದು ಕೂಡ ಇದೆ. ನೀವು ಚಿತ್ರ ನೋಡುವಾಗ ಬಂದು ಶಾಕ್​ ಆಗುವುದು ಬೇಡ ಎಂದು ಟೀಸರ್​ನಲ್ಲಿ ಅದನ್ನು ತೋರಿಸಿರಬಹುದು ಎಂದು ನನ್ನ ಭಾವನೆ ಎಂದಿದ್ದಾರೆ.

66
ಅದು ತಪ್ಪು ಗ್ರಹಿಕೆ

ಸಿನಿಮಾದಲ್ಲಿ ಇಂಥ ದೃಶ್ಯಗಳು ತುಂಬಾ ಇರಲು ಸಾಧ್ಯವೇ ಇಲ್ಲ. ಯಶ್​ ಅವರು ಹಾಗೆಲ್ಲಾ ಮಾಡುವುದಿಲ್ಲ. ಟೀಸರ್​ನಲ್ಲಿ ಅದನ್ನು ತೋರಿಸಲು ಕೂಡ ಅವರದ್ದೇ ಒಂದು ಬೇರೆಯದ್ದೇ ಕಾರಣ ಇದೆ. ಹಾಗೆಂದು ಚಿತ್ರದ ತುಂಬಾ ಅದೇ ಇರುತ್ತದೆ, ಕುಟುಂಬಕ್ಕೆ ಮುಜುಗರ ಆಗುವಂಥ ದೃಶ್ಯ ಇರುತ್ತದೆ ಎನ್ನುವುದು ತಪ್ಪು ಗ್ರಹಿಕೆ ಎಂದಿದ್ದಾರೆ ತರುಣ್​ ಸುಧೀರ್​.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories