2025 Surprising Movie Hits: ಸದ್ದಿಲ್ಲದೇ ರಿಲೀಸ್ ಆಗಿ, ಭರ್ಜರಿ ಮನರಂಜನೆ ನೀಡಿದ 2025ರ ಕನ್ನಡ ಸಿನಿಮಾಗಳು

Published : Dec 19, 2025, 04:07 PM IST

Surprising Packages of 2025: ಈ ವರ್ಷ ಕನ್ನಡದಲ್ಲಿ ಅದೆಷ್ಟೋ ಸಿನಿಮಾಗಳು ರಿಲೀಸ್ ಆಗಿವೆ. ಅವುಗಳಲ್ಲಿ ಬೆರಳೆಣಿಕೆಯಷ್ಟು ಹಿಟ್ ಆದರೆ, ಹಲವು ಸಿನಿಮಾಗಳು ಸೋತಲು. ಅದರಲ್ಲಿ ಕೆಲವು ಚಿತ್ರಗಳು ನಿರೀಕ್ಷೆ ಇಲ್ಲದೆ ಬಿಡುಗಡೆಯಾದ್ರೂ ಅಚ್ಚರಿಯ ಕಥೆ ಹೇಳುವ ಮೂಲಕ ಮನರಂಜನೆ ನೀಡಿದೆ. 

PREV
111
ಸರ್ಪ್ರೈಸಿಂಗ್ ಪ್ಯಾಕೇಜ್

2025 ಇನ್ನೇನು ಮುಗಿಯುತ್ತ ಬಂದಿದೆ. ಈ ವರ್ಷ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿವೆ. ಇವುಗಳಲ್ಲಿ ಸೂಪರ್ ಹಿಟ್ ಆದವು ಕೆಲವೇ ಕೆಲವು. ಅದರಲ್ಲೂ ನಿರೀಕ್ಷೆ ಇಲ್ಲದೇ ಬಿಡುಗಡೆಯಾದ ಕೆಲವು ಸಿನಿಮಾಗಳು, ಅಚ್ಚರಿಯ ಕಥೆಯನ್ನು ಹೇಳುವ ಮೂಲಕ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದೆ. ಆ ಸಿನಿಮಾಗಳ ಲಿಸ್ಟ್ ಇಲ್ಲಿದೆ.

211
ವೀರಚಂದ್ರಹಾಸ

ವೀರಚಂದ್ರಹಾಸ ಸಿನಿಮಾ ಯಕ್ಷಗಾನದ ಮೇಲೆ ಮಾಡಲಾದ ಚಿತ್ರವಾಗಿದ್ದು, ರವಿ ಬಸ್ರೂರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಶಿಥಿಲ್ ಶೆಟ್ಟಿ, ನಾಗಶ್ರೀ ಜಿ.ಎಸ್., ಪ್ರಸನ್ನ ಶೆಟ್ಟಿಗಾರ್ ಮಂದಾರತಿ, ಉದಯ ಕಲಬಾಲ್, ರವೀಂದ್ರ ದೇವಳಿಗ, ನಾಗರಾಜ್ ಸರ್ವೆಗಾರ್, ಗುಣಶ್ರೀ ಎಂ ನಟಿಸಿದ್ದು, ಅತಿಥಿ ಪಾತ್ರದಲ್ಲಿ ಶಿವರಾಜಕುಮಾರ್ ನಟಿಸಿದ್ದಾರೆ.

311
ಗತ ವೈಭವ

ಗತ ವೈಭವ ಸಿನಿಮಾ ಸಿಂಪಲ್ ಸುನಿ ನಿರ್ದೇಶನದ ಫ್ಯಾಂಟಸಿ ರೊಮ್ಯಾಂಟಿಕ್ ಡ್ರಾಮಾ, ಈ ಚಿತ್ರದಲ್ಲಿ ದುಷ್ಯಂತ್ ಮತ್ತು ಆಶಿಕಾ ರಂಗನಾಥ್, ನಾಲ್ಕು ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಕೂಡ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

411
ಬಿಳಿ ಚುಕ್ಕಿ ಹಳ್ಳಿ ಹಕ್ಕಿ

'ಬಿಳಿ ಚುಕ್ಕಿ, ಹಳ್ಳಿ ಹಕ್ಕಿ' 2025 ರ ಕನ್ನಡ ಪ್ರಣಯ ಹಾಸ್ಯ ಚಿತ್ರವಾಗಿದ್ದು, ಇದನ್ನು ಮಹೇಶ್ ಗೌಡ ಬರೆದು, ನಿರ್ದೇಶಿಸಿ, ನಟಿಸಿದ್ದಾರೆ, ಇದು ವಿಟಲಿಗೋ (ಚರ್ಮದ ಮೇಲಿನ ಬಿಳಿ ಕಲೆಗಳು) ಸುತ್ತಲು ಎಣೆದ ಕಥೆಯಾಗಿದೆ. ಇಲ್ಲಿ ಪ್ರೀತಿ, ಹೀಲಿಂಗ್ ಎಲ್ಲವನ್ನೂ ತೋರಿಸಲಾಗಿದೆ.

511
ಯುದ್ಧಕಾಂಡ ಚಾಪ್ಟರ್ 2

ಪವನ್ ಭಟ್ ನಿರ್ದೇಶನ ಮಾಡಿರುವ, ಅಜಯ್ ರಾವ್, ಅರ್ಚನಾ ಜೋಯೆಸ್ ಮತ್ತು ಪ್ರಕಾಶ್ ಬೆಳವಾಡಿ ನಟಿಸಿರುವ ಸಿನಿಮಾ ಇದಾಗಿದೆ. ಇದು ಮರ್ಡರ್ ಮತ್ತು ಕೋರ್ಟ್ ಕೇಸ್ ಕುರಿತಾದ ಕತೆಯಾಗಿದ್ದು, ಜನ ಇಷ್ಟಪಟ್ಟಿದ್ದರು.

611
ಪಪ್ಪಿ

ಪಪ್ಪಿ ಸಿನಿಮಾ ಜನರಿಗೆ ಸಿಕ್ಕಾಪಟ್ಟೆ ಹಿಡಿಸಿತ್ತು. ಇದು ಕೂಡ ನಾಯಿಯ ಕಥೆಯಾಗಿದೆ. ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ವಲಸೆ ಬಂದ ಕುಟುಂಬಕ್ಕೆ ಶ್ರೀಮಂತ ಮನೆಯ ಕಾಣೆಯಾದ ನಾಯಿ ಸಿಕ್ಕಾಗ, ಅದರ ಜೊತೆಗೆ ಹೇಗೆಲ್ಲಾ ಬಾಂಧವ್ಯ ಬೆಳೆಯುತ್ತೆ ಎಂದು ತೋರಿಸುವ ಕತೆ ಇದಾಗಿದೆ. ಆಯುಷ್ ಮಲ್ಲಿ ಚಿತ್ರ ನಿರ್ದೇಶನ ಮಾಡಿದ್ದಾರೆ.

711
ಬ್ರಾಟ್

ಬ್ರಾಟ್ ಸಿನಿಮಾ ಕೂಡ ಸರ್ಪ್ರೈಸ್ ಪ್ಯಾಕೇಜ್ ಆಗಿದ್ದು ಅಂದ್ರೆ ತಪ್ಪಾಗಲ್ಲ. ಡಾರ್ಲಿಂಗ್ ಕೃಷ್ಣ ಅಭಿನಯದ ಈ ಚಿತ್ರವನ್ನು ಶಶಾಂಕ್ ನಿರ್ದೇಶನ ಮಾಡಿದ್ದಾರೆ. ತನ್ನ ಕನಸುಗಳನ್ನು ಪೂರೈಸಲು ಬೆಟ್ಟಿಂಗ್ ಗೆ ಇಳಿಯುವ ಪೊಲೀಸ್ ಕಾನ್ಸ್ಟೇಬಲ್ ಮಗನ ಕಥೆ ಇದಾಗಿದೆ.

811
ಎಡಗೈ ಅಪಘಾತಕ್ಕೆ ಕಾರಣ

ಈ ಸಿನಿಮಾ ರಿಲೀಸ್ ಆದಾಗ ಜನರಲಿ ಹೆಚ್ಚು ನಿರೀಕ್ಷೆ ಇರಲಿಲ್ಲ. ಆದರೆ ಸಿನಿಮಾ ಚಿತ್ರ ಬಿಡುಗಡೆಯಾದ ಬಳಿಕ, ಥಿಯೇಟರ್ ಗೆ ಜನರನ್ನು ಸೆಳೆದಿತ್ತು. ಇದೊಂದು ಕ್ರೈಂ ಥ್ರಿಲ್ಲರ್ ಆಗಿದ್ದು, ಲೆಫ್ಟ್ ಹ್ಯಾಂಡಿಗಳ ವ್ಯಥೆಯ ಕಥೆಯನ್ನು ಇದು ಹೇಳುತ್ತೆ. ದಿಗಂತ್ ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.

911
ಮಾದೇವ

ನವೀನ್ ರೆಡ್ಡಿ ನಿರ್ದೇಶನದ, ವಿನೋದ್ ಪ್ರಭಾಕರ್ ಮತ್ತು ಸೋನಲ್ ಮೊಂತೆರೋ ಮುಖ್ಯ ಪಾತ್ರದಲ್ಲಿ ನಟಿಸಿರುವ, ಪ್ರೀತಿ, ದ್ವೇಷವನ್ನು ತುಂಬಿರುವ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಶ್ರುತಿ ಮತ್ತು ಮಲಾಶ್ರೀ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾವನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು.

1011
ಗ್ರೀನ್ ಗರ್ಲ್

ಸಾರ್ಥಕ್ ಹೆಗ್ಡೆ ನಿರ್ದೇಶನ ಮಾಡಿರುವ ಶಾರ್ಟ್ ರೊಮ್ಯಾಂಟಿಕ್ ಡ್ರಾಮಾ ಇದಾಗಿದೆ. ಸಿನಿಮಾ ಹೆಚ್ಚು ಸದ್ದು ಮಾಡದಿದ್ದರು. ಅಚ್ಚರಿಯ ಕಥೆಯ ಮೂಲಕ ಈ ಸಿನಿಮಾ ನೋಡುಗರ ಮನ ಗೆದ್ದಿದೆ. ಈ ಚಿತ್ರದಲ್ಲಿ ಅಶ್ವಿನ್ ರಾಘವೇಂದ್ರ, ರಕ್ಷಕ್ ಕುಲಾಲ್, ಮಯೂರ್ ಗೌಡ ಮತ್ತು ಸುಚಿತ್ರಾ ನಟಿಸಿದ್ದಾರೆ.

1111
ಫೈರ್ ಫ್ಲೈ

ವಂಶಿ ಕೃಷ್ಣ ಕಥೆ ಬರೆದು, ನಿರ್ದೇಶನ ಮಾಡಿ ನಟಿಸಿರುವ ಸಿನಿಮಾ ಫೈರ್ ಫ್ಲೈ. ಈ ಸಿನಿಮಾವನ್ನು ನಿವೇದಿತಾ ಶಿವರಾಜಕುಮಾರ್ ನಿರ್ಮಾಣ ಮಾಡಿದ್ದಾರೆ. ಕಾಮಿಡಿ ಇಮೋಷನ್ ತುಂಬಿದ ಸಿನಿಮಾ. ತಂದೆ-ತಾಯಿಯನ್ನು ಕಳೆದುಕೊಂಡು, ಡಿಪ್ರೆಶನ್ ಗೆ ಒಳಗಾದ ಹುಡುಗ ಸೆಲ್ಫ್ ಡಿಸ್ಕವರಿ ಮಾಡುವ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ರಚನ ಇಂದರ್, ಅಚ್ಯುತ್ ಕುಮಾರ್ ಮತ್ತು ಸುಧಾರಾಣಿ ನಟಿಸಿದ್ದಾರೆ.

Read more Photos on
click me!

Recommended Stories