ಕಸ ಸುಡುವುದರಿಂದ ಉಂಟಾಗುತ್ತಿರುವ ಹೊಗೆಯಿಂದ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ನಟಿ ಐಂದ್ರಿತಾ ರೇ, ಬಿಬಿಎಂಪಿ ಸಹಾಯವಾಣಿ ಸ್ಪಂದಿಸದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾನ್ಯರ ದೂರಿಗೆ ಕಿವಿಗೊಡದ ಅಧಿಕಾರಿಗಳು, ಸೆಲೆಬ್ರಿಟಿ ಮಾತಿಗೆ ಬೆಲೆ ಕೊಡುತ್ತಾರೆಯೇ ಎಂಬುದು ಪ್ರಶ್ನೆಯಾಗಿದೆ.
ಬೆಂಗಳೂರು ಸೇರಿದಂತೆ ಕೆಲವು ಮಹಾನಗರಗಳಲ್ಲಿ ಕಸದ ಸಮಸ್ಯೆ ಎನ್ನುವುದು ದಶಕಗಳಿಂದಲೂ ಮುಗಿಯದ ಪಾಡಾಗಿದೆ. ಕಸಕ್ಕೆಂದೇ ಮೀಸಲು ಇಟ್ಟಿರುವ ಜಾಗಗಳಲ್ಲೆಲ್ಲಾ ಈಗ ಬೃಹತ್ ಅಪಾರ್ಟ್ಮೆಂಟ್ಗಳ ನಿರ್ಮಾಣ ಆಗ್ತಿರೋ ಹಿನ್ನೆಲೆಯಲ್ಲಿ, ಕಸ ವಿಲೇವಾರಿ ಮಾಡಲು ಜಾಗವೇ ಇಲ್ಲದ ಪರಿಸ್ಥಿತಿ ಉಂಟಾಗಿದೆ.
27
ರಂಗೋಲಿ ಕೆಳಗೆ ನುಸುಳುವ ಜನ
ಅದೇ ಇನ್ನೊಂದೆಡೆ, ಎಷ್ಟೇ ದಂಡ ಹಾಕಿದರೂ, ಎಷ್ಟೇ ಎಚ್ಚರಿಕೆ ನೀಡಿದರೂ ಕದ್ದುಮುಚ್ಚಿಯಾದರೂ ಮನಸೋ ಇಚ್ಛೆ ಕಸ ಎಲ್ಲೆಂದರಲ್ಲಿ ಎಸೆಯುವುದು ಮಾಮೂಲಾಗಿಬಿಟ್ಟಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದರೆ ಅದನ್ನು ಮತ್ತೆ ಅವರ ಮನೆ ಮುಂದೆಯೇ ಸುರಿಯುವುದಲ್ಲದೆ, ದಂಡ ವಿಧಿಸಲು ಬಿಬಿಎಂಪಿ ಆರಂಭಿಸಿದರೂ, ಜನರು ರಂಗೋಲಿ ಕೆಳಗೆ ನುಸುಳುವುದನ್ನು ಬಿಡುವುದಿಲ್ಲ.
37
ದಂಡದ ಶಿಕ್ಷೆ
ಆರಂಭದಲ್ಲಿ ಕಸ ಸುರಿದವರಿಗೆ 1000ರೂ. ದಂಡ, ಮನೆ ಮುಂದೆ ಕಸ ಸುರಿದು, ತಮಟೆ ಬಾರಿಸಿ ಜಾಗೃತಿ, ಮತ್ತೆ ಅದೇ ಮನೆಯವರು ಕಸ ಸುರಿದರೆ 5000 ರೂ. ದಂಡ ಜೊತೆಗೆ ಕಸ ಹಾಕಿದವರ ಮನೆಯೊಳಗೇ ಕಸ ಸುರಿಯಲಿದ್ದಾರೆ ಜಿಬಿಎ ಅಧಿಕಾರಿಗಳು... ಹೀಗೆ ಎಲ್ಲಾ ಯೋಜನೆಗಳನ್ನೂ ಮಾಡುತ್ತಲೇ ಇರಲಾಗಿದೆ.
ಇದೀಗ ಮತ್ತೊಂದು ಸಮಸ್ಯೆಯನ್ನು ತಂದೊಡ್ಡಿದೆ. ಅದೇನೆಂದರೆ, ಕಸದ ವಿಲೇವಾರಿಗೆಂದು ಕೆಲವು ಪ್ರದೇಶಗಳನ್ನು ಮೀಸಲು ಇರಿಸಲಾಗಿದೆ. ಅಲ್ಲಿ ಕಸಗಳನ್ನು ಬೆಂಕಿ ಇಟ್ಟು ಸುಡಲಾಗುತ್ತಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳಿಗೆ ಇದು ನುಂಗುಲಾಗದ ತುತ್ತಾಗಿದೆ.
57
ನಟಿ ಐಂದ್ರಿತಾ ರೇ ಗರಂ
ಇದೀಗ ಈ ಬಗ್ಗೆ ಸ್ಯಾಂಡಲ್ವುಡ್ ನಟಿ ಐಂದ್ರಿತಾ ರೇ ಗರಂ ಆಗಿದ್ದಾರೆ. ತಮ್ಮ ಮನೆಯ ಸಮೀಪ ಕಸ ಸುಡುತ್ತಿರುವ ಹಿನ್ನೆಲೆಯಲ್ಲಿ ಉಂಟಾಗುತ್ತಿರುವ ಹೊಗೆಯಿಂದ ಉಸಿರಾಟದ ಸಮಸ್ಯೆ ಆಗುತ್ತಿರುವುದಾಗಿ ಇನ್ಸ್ಟಾಗ್ರಾಮ್ನಲ್ಲಿ ತಿಳಿಸಿದ್ದಾರೆ.
67
ಬಿಬಿಎಂಪಿ ಸಹಾಯವಾಣಿ ಗಪ್ಚುಪ್
ಆದರೆ ಅವರು ರೊಚ್ಚಿಗೆದ್ದಿದ್ದು ಇದಕ್ಕಿಂತಲೂ ಹೆಚ್ಚಾಗಿ, ಇಂಥ ಸಮಸ್ಯೆ ಬಂದಾಗ ಬಿಬಿಎಂಪಿ ಸಹಾಯವಾಣಿ ಎನ್ನುವುದು ಒಂದು ಇದೆ. ಆದರೆ ಬಹುತೇಕ ಎಲ್ಲಾ ಸಹಾಯವಾಣಿಗಳಂತೆ ಇದು ಕೂಡ ಗಪ್ಚುಪ್ ಆಗಿದೆ. ರಾಂಗ್ ನಂಬರ್ ಎಂದೋ, ನಾಟ್ ರೀಚೆಬಲ್ ಎಂದೋ, ಒಂದು ವೇಳೆ ರಿಂಗ್ ಆದರೂ ಅದನ್ನು ಅಟೆಂಡ್ ಮಾಡುವವರೇ ಇರುವುದಿಲ್ಲ. ಇವು ಸಾಮಾನ್ಯವಾಗಿ ಬಹುತೇಕ ಸಹಾಯವಾಣಿಗಳ ಗೋಳು. ಅದೇ ರೀತಿ ಬಿಬಿಎಂಪಿ ಸಹಾಯವಾಣಿಯೂ ಆಗಿರುವ ಬಗ್ಗೆ ನಟಿ ಐಂದ್ರಿತಾ ತೀವ್ರ ಅಸಮಾಧಾನ ಹೊರಹಾಕಿದ್ದಾರೆ..
77
ಸೆಲೆಬ್ರಿಟಿಗಳ ಮಾತಾದ್ರೂ ನಡೆಯತ್ತಾ?
ಸಾಮಾನ್ಯ ಜನರು ಎಷ್ಟೇ ಗೋಳಾಡಿದರೂ, ಇಂಥ ಸಮಸ್ಯೆಗಳ ವಿರುದ್ಧ ದನಿ ಎತ್ತಿದರೂ ಅಧಿಕಾರಿಗಳು ಅವರಿಗೆ ಸ್ಪಂದಿಸುವುದು ಎಷ್ಟರಮಟ್ಟಿಗೆ ಇದೆ ಎನ್ನುವುದು ಎಲ್ಲಾ ಜನಸಾಮಾನ್ಯರಿಗೂ ತಿಳಿದೇ ಇರುವ ವಿಷಯ. ವಿಐಪಿಗಳು, ಸೆಲೆಬ್ರಿಟಿಗಳು ಎಂದರೆ ಅವರಿಗೆ ನಮ್ಮ ಸಮಾಜದಲ್ಲಿ ಗೌರವ ಹೆಚ್ಚಾಗಿರುವ ಕಾರಣದಿಂದ ಈ ನಟಿಯ ಮಾತಿನಿಂದಾದರೂ ಸಮಸ್ಯೆ ಬಗೆಹರಿಯಲಿ ಎನ್ನುವುದು ಇಂಥ ನೋವು ಅನುಭವಿಸುತ್ತಿರುವ ಸಾಮಾನ್ಯ ಜನರ ಆಶಯವೂ ಆಗಿದೆ.