ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?

Published : Dec 07, 2025, 06:52 PM IST

ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಡಿಸೆಂಬರ್ 25 ರಂದು ಚಿತ್ರ ತೆರೆಗೆ ಬರಲಿದೆ. ಪತ್ರಿಕಾಗೋಷ್ಠಿಯಲ್ಲಿ,   'ಸ್ತ್ರೀದೋಷ' ಇದೆಯೇ ಎಂಬ ಪ್ರಶ್ನೆಗೆ ಸುದೀಪ್ ತಮ್ಮ ಪತ್ನಿ ಪ್ರಿಯಾ ಸಮ್ಮುಖದಲ್ಲಿಯೇ ಉತ್ತರಿಸಿದ್ದಾರೆ. ಅವರು ಹೇಳಿದ್ದೇನು?  

PREV
17
ಮಾರ್ಕ್​ ಸಿನಿಮಾ ಟ್ರೈಲರ್​

ಬಿಗ್​ಬಾಸ್​ ನಡೆಸಿಕೊಡುತ್ತಿರುವ ನಡುವೆಯೇ, ಕಿಚ್ಚ ಸುದೀಪ್​ ಅಭಿಮಾನಿಗಳ ದೊಡ್ಡ ಖುಷಿಯ ಸುದ್ದಿಯನ್ನೂ ನೀಡಿದ್ದಾರೆ. ಇಂದು ಅಂದರೆ ಡಿ.7 ಅವರ ನಟನೆಯ ‘ಮಾರ್ಕ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಇದೇ 25ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

27
ಸಿನಿಮಾ ಡಿಟೇಲ್ಸ್​

ಈ ಬಗ್ಗೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಸಿನಿಮಾದ ಕುರಿತು ಡಿಟೇಲ್ಸ್​ ಹೇಳಿದ ಕಿಚ್ಚ 107 ದಿನಗಳ ಶೂಟಿಂಗ್​ ಆಗಿದ್ದು, 166 ಕಾಲ್​​ಶೀಟ್​​ಗಳನ್ನು ಮಾಡಿದ್ದೀವಿ ಎಂದಿದ್ದಾರೆ. ಚಿತ್ರಕ್ಕಾಗಿ ಸುಮಾರು 90 ಲೊಕೇಶನ್​​ಗಳಲ್ಲಿ ಶೂಟಿಂಗ್​ ನಡೆದಿರುವ ವಿಷಯವನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಸುಮಾರು 20 ಸೆಟ್​​ಗಳ ನಿರ್ಮಾಣವಾಗಿರುವ ಮಾಹಿತಿಯನ್ನೂ ಕೊಟ್ಟಿದ್ದಾರೆ.

37
ಬಿಡುವಿಲ್ಲದೆ ಚಿತ್ರೀಕರಣ

ಈ ಚಿತ್ರಕ್ಕಾಗಿ ನಿದ್ದೆಗೆಟ್ಟ ದಿನಗಳ ಬಗ್ಗೆಯೂ ಮಾತನಾಡಿರುವ ಸುದೀಪ್​, ವಿಶ್ರಾಂತಿ ಪಡೆದ ಸಮಯ ತುಂಬಾ ಕಡಿಮೆ ಎಂದಿದ್ದಾರೆ. ಶಾಲೆಯೊಂದರಲ್ಲಿ ರಾತ್ರಿ ಮೂರು ಗಂಟೆ ವರೆಗೂ ಚಿತ್ರೀಕರಣ ಮಾಡಿದ್ದು ಇದೆ. ನಾನು ಮೂರು ಗಂಟೆಗೆ ಚಿತ್ರೀಕರಣ ಮುಗಿಸಿಕೊಂಡು ಹೊರಗೆ ಬರುತ್ತಿದ್ದೆ ಆಗ ಇನ್ನೊಂದು ಬ್ಯಾಚ್​ ಒಳಗೆ ಹೋಗುತ್ತಿತ್ತು. ಹೀಗೆ ಬಿಡುವಿಲ್ಲದೆ ಚಿತ್ರೀಕರಣವನ್ನು ನಾವು ಮಾಡಿರುವುದಾಗಿ ತಿಳಿಸಿದ್ದಾರೆ.

47
ಇಬ್ಬರು ಹೀರೋಗಳು

ಜೊತೆಗೆ ಈ ಸಿನಿಮಾದಲ್ಲಿ ನಿರ್ದೇಶಕರು ಮತ್ತು ಕ್ಯಾಮೆರಾಮೆನ್​ ಪಟ್ಟಿರುವ ಶ್ರಮದ ಬಗ್ಗೆಯೂ ಮಾತನಾಡಿರುವ ಸುದೀಪ್​, ಇವರಿಬ್ಬರೇ ಈ ಚಿತ್ರದ ಹೀರೋಗಳು. ನಿರ್ದೇಶಕರ ಜೇಬು ತುಂಬಿದರೆ ನನಗೆ ಅದೇ ಖುಷಿ. ಇವರಿಬ್ಬರೂ ಸಿಕ್ಕಾಪಟ್ಟೆ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ್ದಾರೆ ಎಂಬ ವಿಷಯವನ್ನೂ ತಿಳಿಸಿದ್ದಾರೆ.

57
ಪತ್ನಿ ಎದುರೇ ಪ್ರಶ್ನೆ

ಪತ್ರಿಕಾಗೋಷ್ಠಿಯಲ್ಲಿ ಸುದೀಪ್​ ಅವರಿಗೆ ಒಂದು ಪ್ರಶ್ನೆ ಎದುರಾಯಿತು. ಅದೇನೆಂದರೆ, ಅವರಿಗೆ ಸ್ತ್ರೀದೋಷ ಇದೆಯಾ ಎನ್ನುವ ಪ್ರಶ್ನೆ. ಅದಕ್ಕೆ ಒಂದು ಕಾರಣವೂ ಇದೆ. ಅದೇನೆಂದರೆ, ಸುದೀಪ್​ ಅವರ ಈ ಹಿಂದಿನ ಮ್ಯಾಕ್ಸ್​ ಚಿತ್ರ ಹಾಗೂ ಈ ಸಿನಿಮಾ ಎರಡರಲ್ಲಿಯೂ ನಾಯಕಿ ಇಲ್ಲ ಎನ್ನುವುದು. ಅದಕ್ಕಾಗಿಯೇ ಪತ್ರಿಕಾಗೋಷ್ಠಿಯಲ್ಲಿ ಹಾಜರು ಇದ್ದ ಪತ್ನಿ ಪ್ರಿಯಾ ಎದುರೇ ಈ ಪ್ರಶ್ನೆ ಕೇಳಲಾಯಿತು.

67
ಈ ಜನ್ಮದಲ್ಲಿ ಸ್ತ್ರೀದೋಷ...

ಅದಕ್ಕೆ ಸುದೀಪ್​ ಅವರು ತಮಾಷೆಯಾಗಿ ತಮ್ಮದೇ ರೀತಿ ಉತ್ತರಿಸಿದರು. ಪಕ್ಕದಲ್ಲಿಯೇ ಪತ್ನಿ ಇರುವಾಗ ನೀವು ಹೀಗೆ ಕೇಳುವುದು ಸರಿಯೇ ಎಂದು ತಮಾಷೆ ಮಾಡಿದರು. ಕೊನೆಗೆ, ನನಗೆ ಈ ಜನ್ಮದಲ್ಲಂತೂ ಸ್ತ್ರೀದೋಷ ಇಲ್ಲವೇ ಇಲ್ಲ ಎಂದರು.

77
ಯಾರು ಬರ್ತಾರೆ ಹತ್ತಿರ?

ಸ್ತ್ರೀಯರಿಗೆ ಸುಂದರವಾದ ನಾಯಕ ಬೇಕು. ಆದರೆ ಈ ಎರಡೂ ಚಿತ್ರಗಳಲ್ಲಿ ನನ್ನ ಗೆಟಪ್​ ನೋಡಿದ್ರೆ ಯಾವ ಹುಡುಗಿ ತಾನೆ ಹತ್ತಿರ ಬರ್ತಾಳೆ? ಅದಕ್ಕಾಗಿಯೇ ಸಿನಿಮಾದಲ್ಲಿ ನಾಯಕಿ ಅಥ್ವಾ ರೊಮಾನ್ಸ್ ಇಲ್ಲ ಎಂದು ಹೇಳಿದರು.

Read more Photos on
click me!

Recommended Stories