Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?

Published : Dec 07, 2025, 06:29 PM IST

Karna Kannada Serial Episode Update: ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಹಾಗೂ ಕರ್ಣನ ಸುಳ್ಳಿನ ಮದುವೆ ಯಾರಿಗೂ ಗೊತ್ತಿಲ್ಲ. ಅದರಂತೆ ನಿತ್ಯಾ ಹೊಟ್ಟೆಯಲ್ಲಿರುವ ಮಗುವಿನ ಬಗ್ಗೆ ಕೂಡ ಕರ್ಣ ಗಮನ ಕೊಡಬೇಕಿದೆ. ಹೀಗಿರುವಾಗ ಇವರಿಬ್ಬರಿಗೂ ದೊಡ್ಡ ಸಮಸ್ಯೆ ಎದುರಾಗಿದೆ. ಹಾಗಾದರೆ ಮುಂದೆ ಏನಾಗುವುದು?

PREV
15
ನಿತ್ಯಾ, ಕರ್ಣ ಮದುವೆ ಆಗಲಿಲ್ಲ

ನಿತ್ಯಾ ಪ್ರಗ್ನೆಂಟ್‌, ನಿತ್ಯಾ ಮದುವೆ ಆಗಿಲ್ಲ ಅಂದರೆ ಅಜ್ಜಿಯಂದಿರು ಬೇಸರ ಮಾಡಿಕೊಳ್ತಾರೆ ಎಂದು ಕರ್ಣ ಅವಳಿಗೆ ಗಂಡ ಎಂದು ಹಣೆಪಟ್ಟಿ ಕಟ್ಟಿಕೊಂಡ. ಆದರೆ ನಿತ್ಯಾಳನ್ನು ಅವನು ಮದುವೆ ಆಗಲಿಲ್ಲ. ನಿತ್ಯಾ ತನಗೆ ತಾನೇ ತಾಳಿ ಕಟ್ಟಿಕೊಂಡಳು, ಲೋಕದ ಕಣ್ಣಿಗೆ ಕರ್ಣನ ಹೆಂಡ್ತಿಯಾದಳು. 

25
ತೇಜಸ್‌ ಕಣ್ಮರೆ ಹಿಂದಿನ ಗುಟ್ಟೇನು?

ನಿತ್ಯಾಳನ್ನು ಮದುವೆ ಆಗಬೇಕಿದ್ದ ತೇಜಸ್‌ ಓಡಿ ಹೋದನು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ರಮೇಶ್‌ ಪ್ಲ್ಯಾನ್‌ ಮಾಡಿ ತೇಜಸ್‌ನನ್ನು ಕಿಡ್ನ್ಯಾಪ್ ಮಾಡಿಸಿದ್ದನು. ಇದು ರಮೇಶ್‌ ಪತ್ನಿಗೆ ಮಾತ್ರ ಗೊತ್ತಿದೆ. ಈ ಸತ್ಯ ಯಾವಾಗ ರಿವೀಲ್‌ ಆಗುವುದೋ ಏನೋ

35
ಲವ್‌ಸ್ಟೋರಿ ಜಟಿಲವಾಗಿದೆ

ನಿಧಿ, ಕರ್ಣ ಪ್ರೀತಿಸಿದರೂ ಕೂಡ ಮದುವೆಯಾಗಲು ಆಗಲಿಲ್ಲ. ತನ್ನ ಹುಡುಗ, ತನ್ನ ಅಕ್ಕನನ್ನೇ ಮದುವೆ ಆಗಿರೋದಿಕ್ಕೆ ಅವಳು ಸುಮ್ಮನಿದ್ದಾಳೆ. ನಿತ್ಯಾಳ ಹೊಟ್ಟೆಯಲ್ಲಿ ಮಗು ಇದೆ ಎಂದು ಕರ್ಣ ಕೂಡ ಸುಮ್ಮನಿದ್ದಾನೆ. ಹೀಗಾಗಿ ಇವರ ಲವ್‌ಸ್ಟೋರಿ ಜಟಿಲವಾಗಿದೆ. ಆ ರೌಡಿಗಳು ಕೂಡ ತೇಜಸ್‌ ಬಳಿ ಪದೇ ಪದೇ ನಮ್ಮ ಬಾಸ್‌ ಕರ್ಣ ಎಂದು ಹೇಳುತ್ತಿದ್ದಾರೆ.

45
ನಿತ್ಯಾ ಮಾಂಗಲ್ಯಸರ ಕಟ್‌ ಆಯ್ತು

ಈಗ ಸಂಜಯ್‌, ನಿತ್ಯಾಳ ಕೊರಳಲ್ಲಿರೋ ಮಾಂಗಲ್ಯವನ್ನು ಕಟ್‌ ಮಾಡಿದ್ದಾನೆ. ಇದು ಅವಳಿಗೆ ಗೊತ್ತೇ ಆಗಿಲ್ಲ. ಮನೆಗೆ ಮುತ್ತೈದೆಯರು ಬಂದಿದ್ದರು. ಆಗ ನಿತ್ಯಾ ಕೊರಳಲ್ಲಿ ಮಾಂಗಲ್ಯ ಸರ ಇಲ್ಲ ಎನ್ನೋದು ಗೊತ್ತಾಗಿದೆ. ಅವರು ಇದನ್ನೇ ಪ್ರಶ್ನೆ ಮಾಡಿದ್ದಾರೆ.

55
ಮುಂದೆ ಏನಾಗುವುದು?

ಇನ್ನೊಂದು ಕಡೆ ಎಲ್ಲರೂ ಸೇರಿಕೊಂಡು ನಿತ್ಯಾ ಹಾಗೂ ಕರ್ಣ ಮತ್ತೊಮ್ಮೆ ನಮ್ಮ ಮುಂದೆ ಮದುವೆ ಆಗಬೇಕು ಅಥವಾ ತಾಳಿ ಕಟ್ಟಬೇಕು ಎಂದು ಹೇಳಿದರೆ ಮಾತ್ರ ಏನಾಗಲಿದೆಯೋ ಏನೋ. ಆಗ ಇವರಿಬ್ಬರು ಏನು ಮಾಡ್ತಾರೆ ಎಂದು ಕಾದು ನೋಡಬೇಕಿದೆ.

Read more Photos on
click me!

Recommended Stories