ಬಿಡುಗಡೆಗೆ ಸಜ್ಜಾಗಿದೆ ಸ್ಪೂಕಿ ಕಾಲೇಜ್ ಚಿತ್ರದ 'ಮೆಲ್ಲುಸಿರೆ ಸವಿಗಾನ' ಹಾಡು!

Published : Nov 12, 2022, 04:36 PM IST

ಮೆಲ್ಲುಸಿರೆ ಸವಿಗಾನ ಹಾಡಿಗೆ ಹೆಜ್ಜೆ ಹಾಕಿರುವ ರೀಷ್ಮಾ ನಾಣಯ್ಯ . ನವೆಂಬರ್ 14 ಹಾಡು ಬಿಡುಗಡೆ....

PREV
18
ಬಿಡುಗಡೆಗೆ ಸಜ್ಜಾಗಿದೆ ಸ್ಪೂಕಿ ಕಾಲೇಜ್ ಚಿತ್ರದ 'ಮೆಲ್ಲುಸಿರೆ ಸವಿಗಾನ' ಹಾಡು!

ಕ್ರಿಯಾಶೀಲ ನಿರ್ದೇಶಕ ಭರತ್ ಜಿ ನಿರ್ದೇಶಿಸಿರುವ "ಸ್ಪೂಕಿ ಕಾಲೇಜ್" ಚಿತ್ರದ ಮೆಲ್ಲುಸಿರೆ ಸವಿಗಾನ ಹಾಡು ನವೆಂಬರ್ 14ರಂದು ಬಿಡುಗಡೆಗೆ ಸಜ್ಜಾಗಿದೆ.

28

ಸ್ಪೂಕಿ ಕಾಲೇಜ್ ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಧಾರವಾಡದ ಶತಕಕ್ಕೂ ಮೀರಿದ ಇತಿಹಾಸವಿರುವ ಪುರಾತನ ಕಾಲೇಜಿನಲ್ಲಿ ಚಿತ್ರೀಕರಣ ಮಾಡಲಾಗಿದೆ. 

38

ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ದಾಂಡೇಲಿ ಅಭಯಾರಣ್ಯದಲ್ಲಿ ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ನಡೆದಿದೆ.  ಈಗಾಗಲೆ ಟೀಸರ್ ಸಿನಿ ರಸಿಗರ ಗಮನ ಸೆಳೆದಿದೆ. 

48

ಡಾ||ರಾಜಕುಮಾರ್ ಅಭಿನಯದ "ವೀರಕೇಸರಿ" ಚಿತ್ರದ ಜನಪ್ರಿಯ "ಮೆಲ್ಲುಸಿರೆ ಸವಿಗಾನ" ಹಾಡನ್ನು ಬಳಸಿಕೊಳ್ಳಲಾಗಿದೆ.‌ ಈ ಹಾಡಿಗೆ ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ.  

58

 ಭೂಷಣ್ ಅವರ ನೃತ್ಯ ನಿರ್ದೇಶನದಲ್ಲಿ, 250 ಕ್ಕೂ ಅಧಿಕ ತಂತ್ರಜ್ಞರ ಪಾಲ್ಗೊಳ್ಳುವಿಕೆಯಲ್ಲಿ, ಅದ್ಭುತವಾದ ಸೆಟ್ ನಲ್ಲಿ ಈ ಹಾಡು ಚಿತ್ರೀಕರಣವಾಗಿದೆ.'ರಂಗಿತರಂಗ' , 'ಅವನೇ ಶ್ರೀಮನ್ನಾರಾಯಣ' ಚಿತ್ರಗಳ ನಿರ್ಮಾಪಕ ಹೆಚ್.ಕೆ.ಪ್ರಕಾಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. 

68

ಕಥೆ, ಚಿತ್ರಕಥೆ ಹಾಗು ಸಂಭಾಷಣೆಯನ್ನು ನಿರ್ದೇಶಕ ಭರತ್ ಅವರೆ ಬರೆದಿದ್ದಾರೆ.  ಮನೋಹರ್ ಜೋಶಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಶ್ರೀಕಾಂತ್ (ಕೆ ಜಿ ಎಫ್) ಅವರ ಸಂಕಲನ ಈ ಚಿತ್ರಕ್ಕಿದೆ. 

78

'ಪ್ರೀಮಿಯರ್ ಪದ್ಮಿನಿ' ಖ್ಯಾತಿಯ ವಿವೇಕ್ ಸಿಂಹ 'ಸ್ಪೂಕಿ ಕಾಲೇಜ್' ನ ನಾಯಕ. 'ದಿಯಾ' ಮೂಲಕ ಹೆಸರಾಗಿರುವ ಖುಷಿ ರವಿ ನಾಯಕಿ.  

88

ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಎಸ್.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ 'ಕಾಮಿಡಿ ಕಿಲಾಡಿಗಳು' ಶೋನ‌ ಜನಪ್ರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ರೀಷ್ಮಾ ನಾಣಯ್ಯ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

Read more Photos on
click me!

Recommended Stories