ಸ್ವಿಮ್‌ಸೂಟ್‌ನಲ್ಲಿ ನಟಿ ಮೇಘನಾ ರಾಜ್ ಪೋಸ್; ಫ್ರೆಂಡ್ಸ್ ಗ್ಯಾಂಗ್ ಜೊತೆ ಚಿರು ಪತ್ನಿ ಮಸ್ತ್ ಎಂಜಾಯ್

Published : Nov 11, 2022, 05:46 PM ISTUpdated : Nov 11, 2022, 09:32 PM IST

ನಟಿ ಮೇಘನಾರಾಜ್ ಸದ್ಯ ಥೈಲ್ಯಾಂಡ್ ಪ್ರವಾಸದಲ್ಲಿದ್ದಾರೆ. ಅನೇಕ ಸಮಯದ ಬಳಿಕ ಸ್ನೇಹಿತೆರ ಗ್ಯಾಂಗ್ ಜೊತೆ ವಿದೇಶಕ್ಕೆ ತೆರಳಿರುವ ಮೇಘನಾ ಮಸ್ತ್ ಮಜಾ ಮಾಡುತ್ತಿದ್ದಾರೆ. 

PREV
16
ಸ್ವಿಮ್‌ಸೂಟ್‌ನಲ್ಲಿ ನಟಿ ಮೇಘನಾ ರಾಜ್ ಪೋಸ್; ಫ್ರೆಂಡ್ಸ್ ಗ್ಯಾಂಗ್ ಜೊತೆ ಚಿರು ಪತ್ನಿ ಮಸ್ತ್ ಎಂಜಾಯ್

ನಟಿ ಮೇಘನಾರಾಜ್ ಸದ್ಯ ಥೈಲ್ಯಾಂಡ್ ಪ್ರವಾಸದಲ್ಲಿದ್ದಾರೆ. ಅನೇಕ ಸಮಯದ ಬಳಿಕ ಸ್ನೇಹಿತೆರ ಗ್ಯಾಂಗ್ ಜೊತೆ ವಿದೇಶಕ್ಕೆ ತೆರಳಿರುವ ಮೇಘನಾ ಮಸ್ತ್ ಮಜಾ ಮಾಡುತ್ತಿದ್ದಾರೆ. ಮೇಘನಾ ರಾಜ್ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

26

ಚಿರು ಪತ್ನಿ ಇತ್ತೀಚಿಗಷ್ಟೆ ಥೈಲ್ಯಾಂಡ್ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸಕ್ಕೆ ಹೋಗುತ್ತಿರುವ ಫೋಟೋಗಳನ್ನು ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು. ಆದರೆ ಎಲ್ಲಿಗೆ ಹೋಗುತ್ತಿರುವುದು ಎಂದು ಬಹಿರಂಗ ಪಡಿಸಿರಲಿಲ್ಲ. ಇದೀಗ ಥೈಲ್ಯಾಂಡ್ ನಲ್ಲಿ ಮಸ್ತ್ ಮಜಾ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. 

36

ಮೇಘನಾ ಥೈಲ್ಯಾಂಡ್ ಬೀಚ್ ನಲ್ಲಿ ಎಂಜಾಯ್ ಮಾಡುತ್ತಿರುವ ಮೇಘನಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸ್ವಿಮ್ ಸೂಟ್‌ನಲ್ಲಿ ಮಿಂಚಿರುವ ಮೇಘನಾ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮೇಘನಾ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. 

46

ಮೇಘನಾ ರಾಜ್ ಮಗನಿಗೆ ಜನ್ಮ ನೀಡಿದ ಬಳಿಕ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದರು. ಮಗನಿಗೆ ಮೇಘನಾ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿದ್ದಾರೆ. ಮಗನ ಜೊತೆಯೇ ಸಮಯ ಕಳೆಯುತ್ತಿದ್ದ ಮೇಘನಾ ಇದೀಗ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. 
 

56

ಇನ್ನು ಮೇಘನಾ ಮಗನಿಗೆ ಜನ್ಮ ನೀಡಿದ ಬಳಿಕ ಸಿನಿಮಾರಂಗಕ್ಕೂ ಪಾವಾಸ್ ಆಗಿದ್ದಾರೆ. ಗ್ಯಾಪ್ ನ ಬಳಿಕ ಮೇಘನಾ ಮತ್ತೆ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಈಗಾಗಲೇ ಸಿನಿಮಾ ಸಹ ಅನೌನ್ಸ್ ಮಾಡಿರುವ ಮೇಘನಾ ಶೂಟಿಂಗ್‌ನಲ್ಲೂ ಬ್ಯುಸಿಯಾಗಿದ್ದಾರೆ. ಮಗನ ಆರೈಕೆ, ಶೂಟಿಂಗ್ ಅಂತ ಸದಾ ಬ್ಯುಸಿಯಾಗಿದ್ದ ಮೇಘನಾ ಸದ್ಯ ಬ್ರೇಕ್ ಪಡೆದು ಥೈಲ್ಯಾಂಡ್‌ಗೆ ಹಾರಿದ್ದಾರೆ.

66

ಮೇಘನಾ ರಾಜ್ ಕೊನೆಯದಾಗಿ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಅದಕ್ಕೂ ಮೊದಲು ಕುರುಕ್ಷೇತ್ರ ಸಿನಿಮಾದಲ್ಲಿ ಮೇಘನಾ ಮಿಂಚಿದ್ದರು. ಇದೀಗ ಪನ್ನಗಾಭರಣ ಅವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಈ ಸಿನಿಮಾ ಅನೌನ್ಸ್ ಮಾಡಿದ್ದು ಶೂಟಿಂಗ್ ಹಂತದಲ್ಲಿದೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories