ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್ ಅಮೂಲ್ಯ ಮತ್ತು ಪತಿ ಜಗದೀಶ್ ಬೆಂಗಳೂರಿನಲ್ಲಿ ನವೆಂಬರ್ 10ರಂದು ತಮ್ಮ ಅವಳಿ ಮಕ್ಕಳಿಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ.
29
ಬೆಂಗಳೂರಿನ ಶೆರಾಟನ್ ಗ್ರ್ಯಾಂಡ್‌ನಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದ್ದು. ಸಿನಿ ಸ್ನೇಹಿತರು ಮತ್ತು ರಾಜಕಾರಣಿ ಗಣ್ಯರು ಭಾಗಿಯಾಗಿದ್ದರು.
39
ಅವಳಿ ಗಂಡು ಮಕ್ಕಳಿಗೆ ಅಥರ್ವ್ - ಆಧವ್ ಎಂದು ಹೆಸರಿಟ್ಟಿದ್ದಾರೆ. ಹೆಸರು ತುಂಬಾನೇ ಡಿಫರೆಂಟ್ ಅಗಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
49
ಅಥರ್ವ್ ಎಂಬುದು ಸಂಸ್ಕೃತ ಮೂಲದ ಪದವಾಗಿದ್ದು, ಇದರರ್ಥ 'ಜ್ಞಾನ' ಎಂದು. ಮತ್ತೊಂದು ಅರ್ಥದಲ್ಲಿ ಬ್ರಹ್ಮನ ಹಿರಿಯ ಮಗನ ಹೆಸರು ಅಥರ್ವ.
59
ಆಧವ್ ಅಂದ್ರೆ ಆಡಳಿತಗಾರ - ಆಳುವ ಅಥವಾ ಆಳುವ ವ್ಯಕ್ತಿ. ಈ ಎರಡು ಹೆಸರುಗಳು ಸಂಸ್ಕೃತದ ಪದಗಳು. ಆರಂಭದಲ್ಲಿ ಕೊಂಚ ಕನ್ಫ್ಯೂಸ್ ಅದರೂ ಉಚ್ಛಾರಣೆ ಮಾಡಲು ಸುಲಭವಾಗಿದೆ.
69
ಮಾರ್ಚ್ 1, 2022ರಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಅಮೂಲ್ಯ ಬರೊಬ್ಬರಿ ನಾಲ್ಕು ತಿಂಗಳ ಬಳಿಕ ಮಕ್ಕಳ ಕ್ಯೂಟ್ ಕೈಗಳ ಪೋಟೋವನ್ನು ರಿವೀಲ್ ಮಾಡಿದ್ದರು.
79
ವಿಭಿನ್ನವಾದ ಹೆಸರು ಇಡಬೇಕು ಎಂದು ಯಾವುದೋ ಯಾವುದೋ ಹುಡುಕುತ್ತಾರೆ ಆದರೆ ನಮ್ಮ ಹಿಂದು ವೇದಗಳಿಗೆ ಸಂಬಂಧಿಸಿದ್ದು, ಸಂಸ್ಕೃತ ಹೆಸರನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.
89
ಅಮೂಲ್ಯ ಫ್ಯಾಮಿಲಿ ಲೈಲ್ಯಾಕ್ ಬಣ್ಣದ ಮ್ಯಾಚಿಂಗ್ ಔಟ್‌ಫಿಟ್‌ನಲ್ಲಿ ಮಿಂಚಿದ್ದಾರೆ. ರೇಶ್ಮೆ ಸೀರೆಯಲ್ಲಿ ಅಮೂಲ್ಯ, ಶೇರ್ವಾನಿಯಲ್ಲಿ ಜಗದೀಶ್ ಮತ್ತು ಅವಳಿ ಮಕ್ಕಳು ಮಿಂಚಿದ್ದಾರೆ.
99
ಗಣೇಶ ಹಬ್ಬದ ದಿನ ಮಕ್ಕಳ ಮುಖ ರಿವೀಲ್ ಮಾಡಿದ್ದರು. ಡೆನಿಮ್ ಡಂಗ್ರಿ ವೈಟ್ ಶರ್ಟ್ ಮತ್ತು ಬೋ ಟೈ ಕಾಂಬಿನೇಷನ್‌ನಲ್ಲಿ ಇಬ್ಬರೂ ಮಕ್ಕಳು ನಗುತ್ತಿರುವ ಫೋಟೋವನ್ನು ಅಮೂಲ್ಯ ಅಪ್ಲೋಡ್ ಮಾಡಿದ್ದಾರೆ