ಸಿಡ್ನಿಯಲ್ಲಿ ಮುದ್ದು ಜೋಡಿ ಸೋನಲ್-ತರುಣ್… ಇದೇ ಮಾಡ್ಬೇಡಿ ಮಕ್ಳು ಮಾಡ್ಕೊಳಿ ಎಂದ ಫ್ಯಾನ್ಸ್

Published : May 30, 2026, 01:46 PM IST

ಚಂದನವನದ ಮುದ್ದಿನ ಜೋಡಿ ಸೋನಲ್ ಮೊಂತೆರೊ ಮತ್ತು ತರುಣ್ ಸುಧೀರ್ ಸಮ್ಮರ್ ವೆಕೇಶನ್ ಎಂಜಾಯ್ ಮಾಡಲು ಸಿಡ್ನಿಗೆ ತೆರಳಿದ್ದು, ಅಲ್ಲಿನ ಸುಂದರ ತಾಣಗಳಲ್ಲಿ ಟ್ರಾವೆಲ್ ಮಾಡಿರುವ ಜೋಡಿಯನ್ನು ನೋಡಿ ಫ್ಯಾನ್ಸ್ ಬೇಗನೆ ಮಕ್ಕಳು ಮಾಡ್ಕೊಳಿ ಎಂದು ಹೇಳುತ್ತಿದ್ದಾರೆ. 

PREV
17
ಸಿಡ್ನಿಯಲ್ಲಿ ಸೋನಲ್-ತರುಣ್

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಸೋನಲ್ ಮೊಂಥೆರೋ ಹಾಗೂ ನಿರ್ದೇಶಕ ತರುಣ್ ಸುಧೀರ್ ಜೊತೆಯಾಗಿ ಸಮ್ಮರ್ ವೆಕೇಶನ್ ಎಂಜಾಯ್ ಮಾಡಲು ಸಿಡ್ನಿಗೆ ತೆರಳಿದ್ದು, ಅಲ್ಲಿನ ಸುಂದರ ಹಾಗೂ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಸುತ್ತಾಡಿ ಎಂಜಾಯ್ ಮಾಡಿದ್ದಾರೆ.

27
ಒಪೇರಾ ಹೌಸ್ ಮುಂದೆ ಜೋಡಿ

ತರುಣ್ ಮತ್ತು ಸೋನಲ್ ಸಿಡ್ನಿಯ ಜನಪ್ರಿಯ ಒಪೆರಾ ಹೌಸ್ ಮುಂದೆ ನಿಂತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಫೋಟೊಗಳ ಜೊತೆಗೆ ನಟಿ My favorite part is us ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಫೋಟೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿವೆ.

37
ಸೋನಲ್ ಹಣೆಗೆ ಮುತ್ತಿಟ್ಟ ತರುಣ್

ಸಿಡ್ನಿಯಲ್ಲಿ ಏಕಾಂತದ ಸಮಯವನ್ನು ಎಂಜಾಯ್ ಮಾಡುತ್ತಿರುವ ಜೋಡಿಗಳು ರೊಮ್ಯಾಂಟಿಕ್ ಆಗಿ ಫೋಟೊಗಳಿಗೆ ಪೋಸ್ ಕೊಟ್ಟಿದ್ದಾರೆ. ಒಂದು ಫೋಟೋದಲ್ಲಿ ಸೋನಲ್ ಹಣೆಗೆ ತರುಣ್ ರೊಮ್ಯಾಂಟಿಕ್ ಆಗಿ ಮುತ್ತಿಡುತ್ತಿದ್ದಾರೆ.

47
ಇದೇ ಮಾಡ್ಬೇಡಿ ಮಕ್ಕಳು ಮಾಡ್ಕೊಳಿ

ಅಭಿಮಾನಿಗಳು ಜೋಡಿಗಳ ಫೋಟೊ ನೋಡಿ ಮೇಡ್ ಫಾರ್ ಈಚ್ ಅದರ, ಬೆಸ್ಟ್ ಕಪಲ್ಸ್ ಎಂದು ಕಾಮೆಂಟ್ ಮಾಡುತ್ತಿದ್ದರೆ, ಒಬ್ಬರಂತೂ ಇದನ್ನೇ ಮಾಡ್ಬೇಡಿ, ಆದಷ್ಟು ಬೇಗ ಮಕ್ಕಳು ಮಾಡ್ಕೊಳಿ ಎಂದು ಜೋಡಿಗೆ ಸಲಹೆ ಕೂಡ ಕೊಟ್ಟಿದ್ದಾರೆ.

57
ಪ್ರೀತಿಸಿ ಮದುವೆಯಾದ ಜೋಡಿ

ಒಂದೇ ಸಿನಿಮಾದಲ್ಲಿ ನಿರ್ದೇಶಕ ಹಾಗೂ ನಟಿಯಾಗಿ ಕೆಲಸ ಮಾಡಿದ್ದ ತರುಣ್ ಮತ್ತು ಸೋನಲ್ ಮಧ್ಯೆ ಸ್ನೇಹ ಬೆಳೆದು, ಬಳಿಕ ಪ್ರೀತಿಸಿ, ನಂತರ ಆಗಸ್ಟ್ 11, 2024 ರಂದು ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಈ ಜೋಡಿ ಕಾಲಿಟ್ಟಿದ್ದರು.

67
ತಾಳಿ ಧರಿಸಲು ಮರೆಯದ ಸೋನಲ್

ಸೋನಲ್ ಮೊಂಥೆರೋ ಯಾವುದೇ ಔಟ್ ಫಿಟ್ ಜೊತೆಗೂ, ಎಲ್ಲಿಗೂ ಹೋದರೂ ಕರಿಮಣಿ ಧರಿಸಲು ಮರಿಯೋದಿಲ್ಲ. ಇವರ ಈ ಒಂದು ಸ್ಟೈಲನ್ನು ಜನ ಸಿಕ್ಕಾಪಟ್ಟೆ ಇಷ್ಟಪಡುತ್ತಾರೆ.

77
ಸಿನಿಮಾಗಳಲ್ಲಿ ಸೋನಲ್ ಬ್ಯುಸಿ

ಸೋನಲ್ ಮೊಂಥೆರೋ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬುದ್ದಿವಂತ 2, ಮಾರ್ಗರೇಟ್ ಲವರ್ ಆಫ್ ರಾಮಾಚಾರಿ, ಕಾದಲ್ ಕೋಟೆ ಸಿನಿಮಾಗಳಲ್ಲಿ ಸೋನಲ್ ನಟಿಸುತ್ತಿದ್ದಾರೆ. ತರುಣ್ ಸುಧೀರ್ ಕಾಟೇರ ಸಿನಿಮಾ ಬಳಿಕ ಯಾವುದೇ ಸಿನಿಮಾ ಮಾಡಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories