ನಟ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಚಿತ್ರೀಕರಣದ ಅನುಭವವನ್ನು ನಟಿ ಕಿಯಾರಾ ಅಡ್ವಾಣಿ ಹಂಚಿಕೊಂಡಿದ್ದಾರೆ. ಸೆಟ್‌ನಲ್ಲಿ ಪಾತ್ರದಲ್ಲಿಯೇ ಇರಲು ನಿರ್ದೇಶಕಿ ಗೀತು ಮೋಹನ್‌ದಾಸ್ 'ಹಾಯ್, ಹಲೋ' ಎನ್ನದಂತೆ ಸೂಚನೆ ನೀಡಿದ್ದರು ಎಂದು ಬಹಿರಂಗಪಡಿಸಿದ್ದಾರೆ.
ನಟ ಯಶ್ ಅವರ ಟಾಕ್ಸಿಕ್ ("ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್" ) ಚಿತ್ರದ ಬಗ್ಗೆ ಇದಾಗಲೇ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಅದಕ್ಕೆ ಬಿಡುಗಡೆಯ ಭಾಗ್ಯ ಇನ್ನೂ ಬಂದಿಲ್ಲ. ಇದಾಗಲೇ ಬಿಡುಗಡೆಯಾಗಬೇಕಿದ್ದ ಚಿತ್ರ ಮುಂದೂಡಲಾಗಿದೆ. ಇದೀಗ ಈ ಸಿನಿಮಾದ ಕುರಿತು ನಾಯಕಿ ಕಿಯಾರಾ ಅಡ್ವಾಣಿ ಶೀಘ್ರದಲ್ಲೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
25
ಅನುಭವ ಶೇರ್
ಬಾಂಬೆ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಕಿಯಾರಾ ತಮ್ಮ ಅನುಭವ ಶೇರ್ ಮಾಡಿಕೊಂಡಿದ್ದಾರೆ..ಟಾಕ್ಸಿಕ್ ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಸೆಟ್‌ನಲ್ಲಿ ನಿರ್ದಿಷ್ಟ ಸೂಚನೆಯನ್ನು ನೀಡಿದ್ದರು ಎಂದು ಕಿಯಾರಾ ಹೇಳಿದ್ದಾರೆ.
35
ಫಾರ್ಮ್ಯಾಲಿಟೀಸ್ ಬೇಡ
ಕಿಯಾರಾ ಹೇಳಿದ್ದೇನೆಂದರೆ, ಸಾಮಾನ್ಯವಾಗಿ ಸೆಟ್‌ಗೆ ಬಂದ ತಕ್ಷಣ ಎಲ್ಲರಿಗೂ "ಹಾಯ್," "ಹಲೋ," ಮತ್ತು "ಗುಡ್ ಮಾರ್ನಿಂಗ್" ಎಂದು ಹೇಳುವುದು ನನ್ನ ವಾಡಿಕೆ. ಆದರೆ ಇದನ್ನು ಸ್ಟ್ರಿಕ್ಟ್ ಆಗಿ ಸ್ಟಾಪ್ ಮಾಡುವಂತೆ ನಿರ್ದೇಶಕಿ ಹೇಳಿದ್ರು. 'ನಾಳೆ ನೀವು ಸೆಟ್‌ಗೆ ಬಂದಾಗ, ನೀವು ಪಾತ್ರದಲ್ಲಿಯೇ ಇರಬೇಕು, ಹಾಯ್, ಹಲ್ಲೋ ಎಲ್ಲಾ ಬೇಡ. ನನಗೆ ಯಾವುದೇ ಔಪಚಾರಿಕತೆಗಳು ಬೇಡ. ನೀವು ನೇರವಾಗಿ ನಿಮ್ಮ ಪಾತ್ರದ ವಲಯಕ್ಕೆ ಹೋಗಬೇಕೆಂದು ನಾನು ಬಯಸುತ್ತೇನೆ' ಎಂದು ಹೇಳಿದ್ದರು ಎಂಬುದಾಗಿ ನೆನಪಿಸಿಕೊಂಡಿದ್ದಾರೆ ನಟಿ ಕಿಯಾರಾ.
ಚಿತ್ರದಲ್ಲಿ ಕೆಲಸ ಮಾಡುವುದು ಸಾಕಷ್ಟು ಸವಾಲಿನದ್ದಾಗಿತ್ತು ಎಂದು ಕಿಯಾರಾ ಹೇಳಿದ್ದಾರೆ. ಕನ್ನಡದಲ್ಲಿ ಚಿತ್ರೀಕರಣ ಮಾಡಬೇಕಾಗಿರುವುದರಿಂದ ಈ ಚಿತ್ರದಲ್ಲಿ ಕೆಲಸ ಮಾಡುವುದು ತುಂಬಾ ಸವಾಲಿನದ್ದಾಗಿತ್ತು. ಕನ್ನಡದಲ್ಲಿ ಕೆಲಸ ಮಾಡುವುದು ನನಗೆ ಹೊಸ ಅನುಭವ. ಅದಕ್ಕೆ ಕಷ್ಟವಾಯಿತು ಎಂದರು.
55
ಇಂಗ್ಲಿಷ್-ಕನ್ನಡ ಒಂದೇ ಬಾರಿ
'ಟಾಕ್ಸಿಕ್' ನನಗೆ ಕೂಡ ಕಷ್ಟಕರವಾಗಿತ್ತು, ಏಕೆಂದರೆ ಮೊದಲ ಬಾರಿಗೆ ನಾವು ಒಂದೇ ದೃಶ್ಯವನ್ನು ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಚಿತ್ರೀಕರಿಸಿದ್ದೇವೆ. ಪರಿಪೂರ್ಣ ಟೇಕ್ ಸಿಗುವವರೆಗೆ ನಾವು ಮೊದಲು ದೃಶ್ಯವನ್ನು ಇಂಗ್ಲಿಷ್‌ನಲ್ಲಿ ಪೂರ್ವಾಭ್ಯಾಸ ಮಾಡುತ್ತೇವೆ. ನಂತರ ಅದೇ ದೃಶ್ಯವನ್ನು ಕನ್ನಡದಲ್ಲಿ ಮರುಚಿತ್ರೀಕರಿಸಿದ್ದೇವೆ ಎಂದಿದ್ದಾರೆ ನಟಿ. ಕನ್ನಡ ನನ್ನ ಭಾಷೆಯಲ್ಲ, ಆದ್ದರಿಂದ ನಾನು ಹಿಂದಿನ ರಾತ್ರಿ ನನ್ನ ಸಂಭಾಷಣೆಗಳನ್ನು ಕಂಠಪಾಠ ಮಾಡಬೇಕಾಯಿತು" ಎಂದು ಕಿಯಾರಾ ವಿವರಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.