ಖ್ಯಾತ ಗಾಯಕ ಸೋನು ನಿಗಮ್‌ ಹಾಡಿಗೆ ನಿರ್ಬಂಧ ಇಲ್ಲ: ಕೆಎಫ್‌ಸಿಸಿ ಅಧ್ಯಕ್ಷ ಎಂ.ನರಸಿಂಹಲು

Published : Aug 27, 2025, 08:06 PM IST

ಸೋನು ನಿಗಮ್‌ ಅವರು ಈಗಾಗಲೇ ಸಾರ್ವಜನಿಕವಾಗಿ ಬೇಷರತ್ತಾಗಿ ಕ್ಷಮೆ ಯಾಚಿಸಿದ್ದಾರೆ. ಹೀಗಾಗಿ ಅವರ ಹಾಡನ್ನು ಬಳಸಿಕೊಳ್ಳಲು ಯಾವುದೇ ನಿರ್ಬಂಧವಿಲ್ಲ ಎಂದಿದ್ದಾರೆ.

PREV
14

ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕಾಗಿ ಖ್ಯಾತ ಗಾಯಕ ಸೋನು ನಿಗಮ್‌ ಅವರ ಮೇಲೆ ಹಾಕಲಾಗಿದ್ದ ‘ಅಸಹಕಾರ’ವನ್ನು ಸಡಿಲಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ ನರಸಿಂಹಲು, ಸೋನು ನಿಗಮ್‌ ಅವರು ಈಗಾಗಲೇ ಸಾರ್ವಜನಿಕವಾಗಿ ಬೇಷರತ್ತಾಗಿ ಕ್ಷಮೆ ಯಾಚಿಸಿದ್ದಾರೆ.

24

ಹೀಗಾಗಿ ಅವರ ಹಾಡನ್ನು ಬಳಸಿಕೊಳ್ಳಲು ಯಾವುದೇ ನಿರ್ಬಂಧವಿಲ್ಲ ಎಂದಿದ್ದಾರೆ. ‘ನಿದ್ರಾದೇವಿ ನೆಕ್ಸ್ಟ್‌ ಡೋರ್‌’ ಸಿನಿಮಾದಲ್ಲಿ ‘ನೀ ನನ್ನ ಹೊಸತನ’ ಎಂಬ ಹಾಡನ್ನು ಸೋನು ನಿಗಮ್‌ ಹಾಡಿದ್ದರು.

34

ಆದರೆ ಮುಂದಿನ ತಿಂಗಳು ರಿಲೀಸ್‌ ಆಗುತ್ತಿರುವ ಸಿನಿಮಾದಲ್ಲಿ ಈ ಹಾಡು ಬಳಸಿಕೊಳ್ಳಬಹುದೇ ಎಂಬ ಗೊಂದಲವೆದ್ದಿತ್ತು. ಇದನ್ನು ಈ ಚಿತ್ರದ ನಿರ್ಮಾಪಕ ಜಯರಾಮ್ ದೇವಸಮುದ್ರ ಅವರು ಫಿಲಂ ಚೇಂಬರ್‌ ಮುಂದೆ ಇಟ್ಟಿದ್ದರು.

44

ಇದಕ್ಕೆ ಸ್ಪಷ್ಟನೆ ನೀಡಿದ ಫಿಲಂ ಚೇಂಬರ್‌ ಅಧ್ಯಕ್ಷ ನರಸಿಂಹಲು, ‘ಸೋನು ನಿಗಮ್‌ ಅವರಿಂದ ಸಿನಿಮಾದಲ್ಲಿ ಹಾಡಿಸಲು, ಈಗಾಗಲೇ ಹಾಡಿರುವ ಹಾಡನ್ನು ಸಿನಿಮಾದಲ್ಲಿ ಬಳಸಿಕೊಳ್ಳಲು ಯಾವುದೇ ನಿರ್ಬಂಧವಿಲ್ಲ. ಅವರು ಕ್ಷಮೆ ಕೇಳಿದ ತಕ್ಷಣ ಅವರ ಮೇಲಿದ್ದ ಅಸಹಕಾರ ನೀತಿಯನ್ನು ಹಿಂಪಡೆಯಲಾಗಿದೆ’ ಎಂದಿದ್ದಾರೆ.

Read more Photos on
click me!

Recommended Stories