Gowri Ganesha Chaturthi ಆಚರಿಸಿದ ಕನ್ನಡ ಕಿರುತೆರೆ, ಹಿರಿತೆರೆ ಸೆಲೆಬ್ರಿಟಿಗಳು; ಸುಂದರ ಫೋಟೋಗಳು ಇಲ್ಲಿವೆ

Published : Aug 27, 2025, 07:24 PM IST

ಕನ್ನಡ ಕಲಾವಿದರು ಗ್ರ್ಯಾಂಡ್‌ ಆಗಿ ಗೌರಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ಕೆಲವರು ಪರಿಸರ ಸ್ನೇಹಿ ಗಣೇಶನನ್ನು ತಂದು ಪೂಜಿಸಿದ್ದಾರೆ. ಹಾಗಾದರೆ ಯಾರ ಮನೆಯಲ್ಲಿ ಯಾವ ರೀತಿ ಗ್ರ್ಯಾಂಡ್‌ ಆಗಿ ಆಚರಣೆ ಮಾಡಲಾಯ್ತು? ಸುಂದರ ಫೋಟೋಗಳು ಇಲ್ಲಿವೆ. 

PREV
114
ಸಂಭ್ರಮದ ಚೌತಿ ಹಬ್ಬ

ಸ್ಯಾಂಡಲ್‌ವುಡ್‌ ತಾರೆಯರು ಕುಟುಂಬದ ಜೊತೆಗೆ ಹಬ್ಬವನ್ನು ಆಚರಿಸಿದ್ದಾರೆ. ಇನ್ನೂ ಕೆಲವರು ಸಿನಿಮಾ ಅಪ್‌ಡೇಟ್‌ ನೀಡಿದ್ದಾರೆ. ಅಂದಹಾಗೆ ʼಏಳುಮಲೆ’ ಸಿನಿಮಾ ತಂಡವು ಕೂಡ ಅದ್ದೂರಿಯಾಗಿ ತಂಡದ ಜೊತೆ ಹಬ್ಬ ಆಚರಿಸಿದ್ದಾರೆ. 

214
ಉಪೇಂದ್ರ

ನಟ ಉಪೇಂದ್ರ ಮನೆಯಲ್ಲಿ ಎಲ್ಲ ಹಬ್ಬಗಳನ್ನು ಗ್ರ್ಯಾಂಡ್‌ ಆಗಿ ಆಚರಿಸಲಾಗುತ್ತದೆ. ಈ ಬಾರಿ ಕೂಡ ಹೊಸ ಮನೆಯಲ್ಲಿ ಗಣೇಶ ಹವನದ ಜೊತೆಗೆ ಆಚರಿಸಲಾಯಿತು. 

314
ಹೊಸ ಮನೆ

ಉಪೇಂದ್ರ ಅವರು ಹೊಸ ಮನೆಯಲ್ಲಿ ಹಬ್ಬ ಆಚರಿಸಿದ್ದಾರೆ. ಅಲ್ಲಿ ವಿಶೇಷವಾಗಿ ದೊಡ್ಡ ಜಾಗ ಇದ್ದು, ಅಲ್ಲಿ ಗಣಪನನ್ನು ಕೂರಿಸಲಾಗಿತ್ತು. 

414
ದಿಯಾ ಪಳಕ್ಕಲ್

ಬ್ರಹ್ಮಗಂಟು ಧಾರಾವಾಹಿಯಲ್ಲಿ ದೀಪಾ ಪಾತ್ರದಲ್ಲಿ ನಟಿಸುತ್ತಿರುವ ದಿಯಾ ಪಳಕ್ಕಲ್‌ ಕೂಡ ಹಬ್ಬ ಆಚರಿಸಿದ್ದಾರೆ. ಎಲ್ಲರಿಗೂ ಶುಭಾಶಯ ತಿಳಿಸಿದ್ದಾರೆ. 

514
ರಾಧಿಕಾ ಪಂಡಿತ್‌

ನಟಿ ರಾಧಿಕಾ ಪಂಡಿತ್‌ ಅವರು ಮಕ್ಕಳಾದ ಆಯ್ರಾ, ಯಥರ್ವ ಜೊತೆಗೆ ಹಬ್ಬ ಆಚರಣೆ ಮಾಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಫೋಟೋ ಶೇರ್‌ ಮಾಡಿದ್ದಾರೆ. 

614
ಬ್ರೂಟಿಫುಲ್‌ ನಟಿ

ರಾಧಿಕಾ ಪಂಡಿತ್‌ಗೆ ಈಗ ವಯಸ್ಸು 40. ಹೀಗಿದ್ದರೂ ಕೂಡ ಅವರು ದಿನದಿಂದ ದಿನಕ್ಕೆ ಬ್ಯೂಟಿಫುಲ್‌ ಆಗಿ ಕಾಣಿಸುತ್ತಿದ್ದಾರೆ. 

714
ಪೂಜೆ ಮಾಡಿದ ಮಕ್ಕಳು

ಆಯ್ರಾ ಹಾಗೂ ಯಥರ್ವ ಅವರು ಗಣಪನಿಗೆ ಪೂಜೆ ಮಾಡಿದ್ದಾರೆ. ರಾಧಿಕಾ ಪಂಡಿತ್‌ ಅವರು ಪ್ರತಿ ಹಬ್ಬವನ್ನು ಗ್ರ್ಯಾಂಡ್‌ ಆಗಿ ಆಚರಿಸುತ್ತಾರೆ, ಮಕ್ಕಳಿಗೂ ಇದರ ಮಹತ್ವ ಹೇಳಿಕೊಡ್ತಾರೆ. 

814
ಇಡ್ಲಿ ಮಾಡೋದ್ರಲ್ಲಿ ಬ್ಯುಸಿ

ಯಥರ್ವ ಹಾಗೂ ಆಯ್ರಾ ಇಡ್ಲಿ ಮಾಡೋದರಲ್ಲಿ ಬ್ಯುಸಿ ಆಗಿದ್ದಾರೆ. ಈ ಹಿಂದೆಯೂ ಅವರು ಕೇಕ್‌ ಮಾಡಿದ್ದರು. 

914
ಅದಿತಿ ಪ್ರಭುದೇವ

ನಟಿ ಅದಿತಿ ಪ್ರಭುದೇವ ಅವರು ಪತಿ ಯಶಸ್‌ ಪಟ್ಲ ಹಾಗೂ ಮಗಳು ನೇಸರ ಜೊತೆಗೆ ಹಬ್ಬ ಆಚರಿಸಿದ್ದಾರೆ. ಮದುವೆ ಬಳಿಕ ಅವರು ಪ್ರತಿ ಹಬ್ಬವನ್ನು ಇನ್ನಷ್ಟು ಸುಂದರವಾಗಿ ಆಚರಿಸುತ್ತಿದ್ದಾರೆ. 

1014
ಕುಟುಂಬದ ಜೊತೆಗೆ

ಕನ್ನಡ ನಟಿ ಅದಿತಿ ಪ್ರಭುದೇವ ಅವರು ನೇಸರ, ತಾಯಿ, ಅಜ್ಜಿ ಜೊತೆಗಿನ ಸುಂದರ ಫೋಟೋವಿದು. 

1114
ಅಮೂಲ್ಯ

ನಟಿ ಅಮೂಲ್ಯ ಅವರು ಮಕ್ಕಳಾದ ಅಥರ್ವ, ಆಧವ್‌ ಜೊತೆಗೆ ಹಬ್ಬ ಆಚರಿಸಿದ್ದಾರೆ. ಈಗ ಮಕ್ಕಳು ಕೂಡ ಹಬ್ಬದಲ್ಲಿ ಭಾಗಿ ಆಗುತ್ತಾರೆ, ಶಾಲೆಗೆ ಹೋಗುತ್ತಿದ್ದಾರೆ.

1214
ಮಿಲನ-ಕೃಷ್ಣ

ಮಿಲನಾ ನಾಗರಾಜ್‌ ಹಾಗೂ ಡಾರ್ಲಿಂಗ್‌ ಕೃಷ್ಣ ಅವರೀಗ ಪಾಲಕರಾಗಿ ಬಡ್ತಿ ಪಡೆದಿದ್ದಾರೆ. ಈಗ ಮಗಳು ಪರಿ ಜೊತೆಗೆ ಹಬ್ಬ ಆಚರಿಸಿದ್ದಾರೆ. 

1314
ಕೃಷಿ-ಅನುಪಮಾ ಗೌಡ

ಸ್ನೇಹಿತೆಯರಾದ ಅನುಪಮಾ ಗೌಡ,ಲ ಕೃಷಿ ತಾಪಂಡ ಕೂಡ ಗ್ರ್ಯಾಂಡ್‌ ಆಗಿ ಹಬ್ಬ ಆಚರಿಸಿದ್ದಾರೆ. 

1414
ಮೇಘನಾ ಶಂಕರಪ್ಪ

ಸೀತಾರಾಮ ಧಾರಾವಾಹಿ ನಟಿ ಮೇಘನಾ ಶಂಕರಪ್ಪ ಅವರಿಗೆ ಮದುವೆ ಬಳಿಕ ಇದು ಮೊದಲ ಚೌತಿ ಹಬ್ಬ. 

Read more Photos on
click me!

Recommended Stories