ಜೈಲಿನಲ್ಲಿದ್ದರೂ ದರ್ಶನ್ ಹಾಡಿನ ಸದ್ದು: ‘ದಿ ಡೆವಿಲ್’ ಗ್ಲೋಬಲ್‌ ಲೆವೆಲ್‌ನಲ್ಲಿ ನಂ.5 ಟ್ರೆಂಡಿಂಗ್

Published : Aug 27, 2025, 06:54 PM IST

ದರ್ಶನ್‌ ನಟನೆಯ ‘ದಿ ಡೆವಿಲ್‌’ ಸಿನಿಮಾದ ‘ಇದ್ರೆ ನೆಮ್ದಿಯಾಗ್ ಇರ್ಬೇಕ್’ ಹಾಡು ಗ್ಲೋಬಲ್‌ ಲೆವೆಲ್‌ನಲ್ಲಿ ನಂ.5 ಟ್ರೆಂಡಿಂಗ್‌ನಲ್ಲಿದೆ.

PREV
15

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್‌ ಜೈಲಲ್ಲಿದ್ದರೂ, ಅವರ ಅನುಪಸ್ಥಿತಿಯಲ್ಲಿ ಬಿಡುಗಡೆಯಾದ ‘ದಿ ಡೆವಿಲ್‌’ ಸಿನಿಮಾದ ‘ಇದ್ರೆ ನೆಮ್ದಿಯಾಗ್ ಇರ್ಬೇಕ್’ ಹಾಡು ಗ್ಲೋಬಲ್‌ ಲೆವೆಲ್‌ನಲ್ಲಿ ನಂ.5 ಟ್ರೆಂಡಿಂಗ್‌ನಲ್ಲಿದೆ.

25

1 ಕೋಟಿ 14 ಲಕ್ಷಕ್ಕೂ ಅಧಿಕ ವೀಕ್ಷಣೆ ಸರೆಗಮಪ ಯೂಟ್ಯೂಬ್‌ನಲ್ಲೇ ಆಗಿದೆ. ಈ ಹಾಡು ಆಗಸ್ಟ್‌ 15ರಂದೇ ಬಿಡುಗಡೆಯಾಗಬೇಕಿತ್ತು. ಆದರೆ ಇದಕ್ಕೂ ಹಿಂದಿನ ದಿನ ದರ್ಶನ್‌ಗೆ ಬೇಲ್‌ ರದ್ದಾದ ಹಿನ್ನೆಲೆಯಲ್ಲಿ ಹಾಡಿನ ಬಿಡುಗಡೆ ಮುಂದೂಡಲ್ಪಟ್ಟಿತ್ತು.

35

ಇದನ್ನು ನೋಡಿದ ಬಹಳ ಮಂದಿ ಪ್ರೇಕ್ಷಕರು ‘ದಿ ಡೆವಿಲ್‌’ ಸಿನಿಮಾ ಈ ವರ್ಷ ಬಿಡುಗಡೆಯಾಗುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಜೈಲಿನಲ್ಲಿರುವ ದರ್ಶನ್‌, ಪತ್ನಿ ವಿಜಯಲಕ್ಷ್ಮೀ ಹೆಗಲಿಗೆ ಸಿನಿಮಾ ಪ್ರಚಾರದ ಜವಾಬ್ದಾರಿ ಹೊರಿಸಿ, ಪ್ರಸ್ತುತ ವಿದ್ಯಮಾನ ಹೇಗೇ ಇದ್ದರೂ, ನನ್ನನ್ನು ನಂಬಿ ದುಡ್ಡು ಹಾಕಿರುವ ನಿರ್ಮಾಪಕರಿಗೆ ತೊಂದರೆ ಆಗಬಾರದು.

45

ಸಿನಿಮಾ ಕೆಲಸ ಅಡೆತಡೆಯಿಲ್ಲದೆ ಸಾಗಬೇಕು ಎಂದು ಅಭಿಮಾನಿಗಳಿಗೆ ಕರೆ ನೀಡಿದರು. ಅದರಂತೆ ವಿಜಯಲಕ್ಷ್ಮೀ ಸಾರಥ್ಯದಲ್ಲಿ ಹಾಡಿಗೆ ಭರ್ಜರಿ ಪ್ರಚಾರ ನಡೆದಿದ್ದು ವಿಶ್ವಮಟ್ಟದಲ್ಲಿ ಈ ಕನ್ನಡ ಹಾಡು ಸದ್ದು ಮಾಡಿದೆ.

55

ಪ್ರಕಾಶ್‌ ವೀರ್‌ ನಿರ್ದೇಶನ, ನಿರ್ಮಾಣದ ಈ ಸಿನಿಮಾ ಡಿಸೆಂಬರ್‌ 12ರಂದು ಬಿಡುಗಡೆಯಾಗಲಿದೆ. ಇನ್ನು ಆರು ತಿಂಗಳಿಗೆ ದರ್ಶನ್‌ಗೆ ಬೇಲ್‌ ಸಿಗುವ ಸಾಧ್ಯತೆ ಇಲ್ಲದ ಕಾರಣ ಈ ಸಿನಿಮಾ ಅವರ ಅನುಪಸ್ಥಿತಿಯಲ್ಲೇ ಬಿಡುಗಡೆಯಾಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories