ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೆ ಪಾಠ ಮಾಡಿ ಬನ್ನಿ ಅಂತ, ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಬಿಂದಿಯಾ ಹೋಗಿದ್ದೆಲ್ಲಿಗೆ?

First Published | Apr 19, 2024, 4:45 PM IST

ಕನ್ನಡದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ ಹಳ್ಳಿ ಮೇಷ್ಟ್ರು  ಸಿನಿಮಾದಲ್ಲಿ ಪರಿಮಳ ಪಾತ್ರದ ಮೂಲಕ ಗಮನ ಸೆಳೆದ ನಟಿ ಬಿಂದಿಯಾ ಆಲಿಯಾಸ್ ಫರ್ಹೀನ್ ಈವಾಗ ಹೇಗಿದ್ದಾರೆ ಗೊತ್ತಾ? ಕನ್ನಡದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ ಹಳ್ಳಿ ಮೇಷ್ಟ್ರು  ಸಿನಿಮಾದಲ್ಲಿ ಪರಿಮಳ ಪಾತ್ರದ ಮೂಲಕ ಗಮನ ಸೆಳೆದ ನಟಿ ಬಿಂದಿಯಾ ಆಲಿಯಾಸ್ ಫರ್ಹೀನ್ ಈವಾಗ ಹೇಗಿದ್ದಾರೆ ಗೊತ್ತಾ? 

ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸಿರುವ ಹಳ್ಳಿ ಮೇಷ್ಟ್ರು ಸಿನಿಮಾ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿತ್ತು. ರವಿಚಂದ್ರನ್ (Ravichandran) ನಟನೆಯ ಜೊತೆ, ಅವರಿಗೆ ನಾಯಕಿಯಾಗಿದ್ದ ಪರಿಮಳ ನಟನೆಯಂತೂ ಜನರಿಗೆ ತುಂಬಾನೆ ಇಷ್ಟವಾಗಿತ್ತು. 
 

ಮೊದ ಮೊದಲು ತುಂಟ ಹುಡುಗಿಯಾಗಿ ಹಳ್ಳಿ ಮೇಷ್ಟ್ರನ್ನು ತನ್ನ ಪುಟಾಣಿ ಸ್ನೇಹಿತರ ಜೊತೆ ಸೇರಿಕೊಂಡು ಸತಾಯಿಸುವ, ಬಳಿಕ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವ ಎಲ್ಲವನ್ನೂ ಮಾಡುವ ಹುಡುಗಿ ಪರಿಮಳ ಪಾತ್ರದಲ್ಲಿ ಬಟ್ಟಲು ಕಂಗಳ ಚೆಲುವೆ ಬಿಂದಿಯಾ ಆಲಿಯಾಸ್ ಫರ್ಹೀನ್ (Bindiya alias Farheen) ನಟಿಸಿದ್ದರು. 

Tap to resize

ಬಿಂದಿಯಾ ನಂತರ ವಿಷ್ಣುವರ್ಧನ್ (Vishnuvardhan) ಅವರ ಜೊತೆ ರಾಯರು ಬಂದರು ಮಾವನ ಮನೆಗೆ ಚಿತ್ರದಲ್ಲಿ ವಿಷ್ಣುವರ್ಧನ್ ಪತ್ನಿಯಾಗಿ, ಬಾಯಿಬಾರದ ಡ್ಯಾನ್ಸ್ ಟೀಚರ್ ಶಿವರಂಜಿನಿಯಾಗಿ ನಟಿಸಿದ್ದರು. ಇವರಿಬ್ಬರ ಮುದ್ದಿನ ಹುಡುಗಿ ಚೆಂದ, ಮೌನದ ರೂಪವೇ ಅಂದ ಹಾಡು ಇಂದಿಗೂ ಜನಪ್ರಿಯತೆ ಪಡೆದಿದೆ. 
 

ಬಾಲಿವುಡ್ ನಟಿಯಾಗಿರುವ ಬಿಂದಿಯಾ ಕನ್ನಡದಲ್ಲಿ ನಟಿಸಿದ್ದು ಎರಡು ಚಿತ್ರಗಳಲ್ಲಿ ಮಾತ್ರವಾಗಿದ್ದರೂ, ಅವರ ಎರಡೂ ಚಿತ್ರಗಳೂ ಸಿನಿರಸಿಕರ ಮನಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈ ಸಿನಿಮಾಗಳಲ್ಲಿನ ಅವರ ನಟನೆ, ಡ್ಯಾನ್ಸ್, ಚೆಲುವು ಸಿನಿಪ್ರೇಮಿಗಳನ್ನು ಹುಚ್ಚೆಬ್ಬಿಸಿತ್ತು. 
 

1992 ರಲ್ಲಿ ಬಿಡುಗಡೆಯಾದ 'ಜಾನ್ ತೇರೆ ನಾಮ್' ಮೂಲಕ ಬಾಲಿವುಡ್‌ಗೆ ನಟಿ ಪದಾರ್ಪಣೆ ಮಾಡಿದ ಬಿಂದಿಯಾ. ಬಳಿಕ ಕನ್ನಡ , ತಮಿಳು ಚಿತ್ರಗಳಲ್ಲೂ ಸೇರಿ ಸುಮಾರು 20 ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ (Bollywood)ನ ಸ್ಟಾರ್ ನಟರೊಂದಿಗೆ ನಟಿಸಿದ್ದ ಬಿಂದಿಯಾ ಯಶಸ್ಸಿನ ಉತ್ತುಂಗದಲ್ಲಿರೋವಾಗ್ಲೇ ಸಿನಿಮಾ ತೊರೆದಿದ್ದರು. 
 

ಈ ಸುಂದರಿ ನಟಿ ಬಿಂದಿಯಾ ಈವಾಗ ಎಲ್ಲಿದ್ದಾರೆ? ಹೇಗಿದ್ದಾರೆ ಗೊತ್ತಾ? ನಟಿ ಬಿಂದಿಯಾ ಸದ್ಯ ದೆಹಲಿಯಲ್ಲಿ ತಮ್ಮ ಕುಟುಂಬದ ಜೊತೆ ನೆಲೆಸಿದ್ದಾರೆ. ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಕರ್(Manoj Prabhakar) ಅವರನ್ನ ವಿವಾಹವಾಗಿರುವ ಬಿಂದಿಯಾ ಅಲಿಯಾಸ್ ಫರ್ಹೀನ್ ಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. 
 

ತೆಳ್ಳಗೆ, ಬೆಳ್ಳಗೆ ಬಳುಕುವ ಬಳ್ಳಿಯಂತಿದ್ದ, ಮಾಧುರಿ ದೀಕ್ಷಿತ್ ರಂತೆ (Madhuri Dixith) ಕಾಣುತ್ತಿದ್ದ ಬಿಂದಿಯಾ ಈವಾಗ ತುಂಬಾನೆ ಬದಲಾಗಿದ್ದಾರೆ. ಇವರು, ಅವ್ರೇನಾ ಎಂದು ಹೇಳುವಷ್ಟು ನಟಿ ಬದಲಾಗಿದ್ದಾರೆ. ಆದರೆ 50 ವರ್ಷದಲ್ಲಿ ಸೌಂದರ್ಯ ಹಾಗೆ ಉಳಿಸಿಕೊಂಡಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಫರ್ಹೀನ್ ಪ್ರಭಾಕರ್ ಹೆಚ್ಚಾಗಿ ತಮ್ಮ ವಿಡಿಯೋ, ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಜೊತೆಗೆ ಹಳೆಯ ಸಿನಿಮಾದ ಫೋಟೋಗಳನ್ನು ಶೇರ್ ಮಾಡುವ ಮೂಲಕ ಹಳೆ ನೆನಪುಗಳನ್ನು ಮೆಲುಕು ಹಾಕುತ್ತಿರುತ್ತಾರೆ. 
 

Latest Videos

click me!