ಸ್ಯಾಂಡಲ್‌ವುಡ್ ನಟಿ ಶುಭಾ ಪೂಂಜಾ ಮತ್ತು ಪತಿ ಸುಮಂತ್ ಮಹಾಬಲ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸಮಯ ಬಂದಾಗ ತಾನೇ ಹೇಳುವುದಾಗಿ ಶುಭಾ ಪೂಂಜಾ ಮನವಿ ಮಾಡಿದ್ದು, ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಅಂತಲೇ ಗುರುತಿಸಿಕೊಂಡಿದ್ದ ನಟಿ ಶುಭಾ ಪೂಂಜಾ ಮತ್ತು ಸುಮಂತ್ ಮಹಾಬಲ ಜೋಡಿಯ ಡಿವೋರ್ಸ್ಗೆ ಅರ್ಜಿ ಸಲ್ಲಿಸಿರುವ ಸುದ್ದಿ ಇದಾಗಲೇ ಸ್ಯಾಂಡಲ್‌ವುಡ್ ಸೇರಿದಂತೆ ಅಭಿಮಾನಿಗಳಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
26
ಲವ್ ಮ್ಯಾರೇಜ್
ನಟಿ ಶುಭಾ ಮತ್ತು ಉದ್ಯಮಿ ಸುಮಂತ್ ಮಹಾಬಲ ಅವರದ್ದು ಲವ್ ಮ್ಯಾರೇಜ್. ಇದಾಗಲೇ ಒಟ್ಟಿಗೇ ಹಲವು ಬಾರಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹಲವು ಪ್ರದೇಶಗಳಿಗೆ ಸುತ್ತಾಡಿ ಬಂದಿದ್ದಾರೆ. ಆದರೆ ಈಗ ಏಕಾಏಕಿ ಏನಾಯ್ತು ಎನ್ನುವುದು ಅಭಿಮಾನಿಗಳಿಗೆ ತಿಳಿಯುತ್ತಿಲ್ಲ. ಆದರೆ ಡಿವೋರ್ಸ್ಗೆ ಜೋಡಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
36
ಸೋಷಿಯಲ್ ಮೀಡಿಯಾದಲ್ಲಿ ಮನವಿ
ಇದರ ಸುದ್ದಿ ವೈರಲ್ ಆಗುತ್ತಲೇ ಶುಭಾ ಪೂಂಜಾ, ನನ್ನ ಜೀವನದಲ್ಲಿ ಏನಾಗ್ತಿದೆ ಎಂಬುದನ್ನು ನಾನೇ ಖುದ್ದಾಗಿ ಹೇಳ್ತೇನೆ ಎಂದಿದ್ದಾರೆ. ನನ್ನೆಲ್ಲಾ ಆತ್ಮೀಯ ಮಾಧ್ಯಮ ಮಿತ್ರರಿಗೆ ನಮಸ್ಕಾರಗಳು. ನಾನು ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದ ಇಂದಿನವರೆಗೂ ನನ್ನನ್ನು ಬೆಂಬಲಿಸುತ್ತಾ, ಪ್ರೋತ್ಸಾಹಿಸುತ್ತಾ ಬಂದಿದ್ದೀರಿ. ಇದೀಗ ನಾನು ಕೇಳಿಕೊಳ್ಳುವುದು ಇಷ್ಟೇ ಸಮಯ ಬಂದಾಗ ನನ್ನ ವೈಯಕ್ತಿಕ ಜೀವನದಲ್ಲಿ ನಡೆಯುತ್ತಿರುವ ವಿಷಯದ ಬಗ್ಗೆ ನಾನೇ ನಿಮಗೆ ಖುದ್ದಾಗಿ ತಿಳಿಸುತ್ತೇನೆ. ಅಲ್ಲಿಯವರೆಗೂ ನನಗೂ ಹಾಗೂ ಸುಮಂತ್ ಅವರಿಗೂ ಸ್ವಲ್ಪ ಸಮಯಾವಕಾಶ ಕೊಡಿ ಅಂತ ಮನವಿ ಮಾಡುತ್ತೇನೆ ಎಂದಿದ್ದರು.
ಈಗ ಇದರ ಬೆನ್ನಲ್ಲೇ ನಟಿ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಬಾಲಿವುಡ್ನ ಜೋಶ್ ಚಿತ್ರದ ಮೇರಿ ಖಲಾಯೋಂಕಿ ಮಲ್ಲಿಕಾ ಹಾಡಿನ ಹಿನ್ನೆಲೆಯಲ್ಲಿ ನೇಲ್ ಪಾಲಿಷ್ ಹಾಕಿಕೊಳ್ತಿರೋ ಹಾಡನ್ನು ಶೇರ್ ಮಾಡಿದ್ದಾರೆ. ನಾನು ತುಂಬಾ ಚೆನ್ನಾಗಿದ್ದೇನೆ ಎಂದು ಇದರಲ್ಲಿ ಅವರು ತೋರಿಸಿದ್ದಾರೆ.
56
ಕಮೆಂಟ್ ಸೆಕ್ಷನ್ ಆಫ್
ಆದರೆ ಕುತೂಹಲದ ವಿಷ್ಯ ಎಂದರೆ ಕಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ ನಟಿ. ಇದ್ಯಾಕೆ ಎನ್ನುವುದು ಇದಾಗಲೇ ಅವರ ಅಭಿಮಾನಿಗಳಿಗೆ ತಿಳಿದಂತಿದೆ. ಕೆಟ್ಟ ಕಮೆಂಟ್ಸ್ಗೆ ಆಸ್ಪದ ಕೊಡಬಾರದು ಎನ್ನುವ ಕಾರಣದಿಂದ ಸೆಕ್ಷನ್ ಆಫ್ ಮಾಡಿರಬಹುದು ಎಂದು ಊಹಿಸಲಾಗಿದೆ.
66
ಮೊಗ್ಗಿನ ಮನಸ್ಸು ಚಿತ್ರದ ಬಳಿಕ...
ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ನಟಿ, ತಮ್ಮ ತೂಕ ಇಳಿಸಿಕೊಂಡಿದ್ದರ ಬಗ್ಗೆ ಮಾತನಾಡಿದ್ದರು. ಮೊಗ್ಗಿನ ಮನಸ್ಸು ಚಿತ್ರದಲ್ಲಿ ಸ್ಲಿಮ್ ಆಗಿದ್ದ ನಟಿ ಆ ಬಳಿಕ ಏಕಾಏಕಿ ತೂಕ ಏರಿಸಿಕೊಂಡರು. ನಂತರ ತ್ರಿದೇವ್ ಸಿನಿಮಾ ಮಾಡುವ ಸಮಯದಲ್ಲಿ ಸಿಕ್ಕಾಪಟ್ಟೆ ಸ್ಲಿಮ್ ಆಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಈ ಬಗ್ಗೆ ಮಾತನಾಡಿದ್ದ ನಟಿ, ತ್ರಿದೇವ್ ಸಿನಿಮಾ ಮಹಿಳಾ ಪ್ರಧಾನವಾದದ್ದು. ಮೊಗ್ಗಿನ ಮನಸ್ಸು ಚಿತ್ರದ ಬಳಿಕ ಮಹಿಳಾ ಪ್ರಧಾನವಾಗಿರುವ ಮೀನಾಕ್ಷಿ ಸಿನಿಮಾದಲ್ಲಿ ನಟಿಸಿದ್ದರೂ, ಇನ್ನೂ ಹೆಚ್ಚು ಮಹಿಳಾ ಪ್ರಧಾನ ಚಿತ್ರದಲ್ಲಿ ಕಾಣಿಸಿಕೊಳ್ಳುವ ಆಸೆ ಇತ್ತು. ನನಗೆ ನಾನು ನಾನಾಗಿರಬೇಕು ಎನ್ನುವ ಹಂಬಲ ಸದಾ ಇರುತ್ತದೆ. ಅದಕ್ಕಾಗಿಯೇ ಮಹಿಳೆಯರು ಮುಂದೆ ಬಂದು, ನಾಯಕಿ ಪ್ರಧಾನ ಸಿನಿಮಾ ಮಾಡಲು ಆಸೆಯಿಂದ ತೂಕ ಇಳಿಸಿಕೊಂಡೆ ಎಂದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.