Ticket Price ಸೆ.16 ರಾಜ್ಯಾದ್ಯಂತ ಸಿನಿಮಾ ಟಿಕೆಟ್‌ಗೆ 75 ರು. ಮಾತ್ರ; ಏನಿದು ವಿಶೇಷತೆ?

Published : Sep 04, 2022, 10:07 AM IST

ಯಾವುದೇ ಥಿಯೇಟರ್‌ನಲ್ಲಿ ಸಿನಿಮಾ ನೋಡಿದರೂ ಅಗ್ಗದ ದರ. ‘ರಾಷ್ಟ್ರೀಯ ಸಿನಿಮಾ ದಿನ’ ಕಾರಣ ವಿಶೇಷ ದರದಲ್ಲಿ ಟಿಕೆಟ್‌ ವಿತರಣೆ .

PREV
17
Ticket Price ಸೆ.16 ರಾಜ್ಯಾದ್ಯಂತ ಸಿನಿಮಾ ಟಿಕೆಟ್‌ಗೆ 75 ರು. ಮಾತ್ರ; ಏನಿದು ವಿಶೇಷತೆ?

ದೇಶಾದ್ಯಂತ 4000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಈ ಅವಕಾಶ ಲಭ್ಯ.ಸಿನಿಮಾ ಪ್ರಿಯರಿಗೆ ಕೃತಜ್ಞತೆ ಸಲ್ಲಿಸಲು ವಿದೇಶಗಳ ಮಾದರಿ ಯೋಜನೆ

27

ನವದೆಹಲಿ: ವರ್ಷ ಪೂರ್ತಿ ಸಿನೆಮಾ ರಂಗವನ್ನು, ಸಿನಿಮಾ ಥಿಯೇಟರ್‌ಗಳನ್ನು ಸಕ್ರಿಯವಾಗಿಡುವ ಸಿನೆಮಾ ಪ್ರಿಯರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಸೆ.16ರಂದು ದೇಶಾದ್ಯಂತ ಎಲ್ಲಾ ಥಿಯೇಟರ್‌ಗಳಲ್ಲಿ, ಯಾವುದೇ ಸಿನೆಮಾದ ಟಿಕೆಟ್‌ ಅನ್ನು ಕೇವಲ 75 ರು.ಗೆ ನೀಡಲು ನಿರ್ಧರಿಸಲಾಗಿದೆ.

37

ಸೆ.16ರಂದು ರಾಷ್ಟ್ರೀಯ ಸಿನಿಮಾ ದಿನವಾಗಿರುವ ಹಿನ್ನೆಲೆಯಲ್ಲಿ ಅಂದು ಈ ವಿಶೇಷ ದರಕ್ಕೆ ಸಿನೆಮಾ ಅಭಿಮಾನಗಳಿಗೆ ಅಗ್ಗದ ದರದಲ್ಲಿ ಟಿಕೆಟ್‌ ವಿತರಣೆ ಮಾಡಲಾಗುವುದು ಎಂದು ಮಲ್ಟಿಪ್ಲೆಕ್ಸ್‌ ಅಸೋಸಿಯೇಶನ್‌ ಹೇಳಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.

47

ಇದು ಪಿವಿಆರ್‌. ಐನಾಕ್ಸ್‌, ಸಿನಿಪೊಲೀಸ್‌ ಸೇರಿದಂತೆ ಎಲ್ಲಾ ಮಲ್ಟಿಪ್ಲೆಕ್ಸ್‌ಗಳಲ್ಲೂ ಲಭ್ಯವಿರಲಿದೆ. ಅಮೆರಿಕ, ಬ್ರಿಟನ್‌ ಸೇರಿದಂತೆ ಹಲವು ದೇಶಗಳಲ್ಲಿ ಇಂಥದ್ದೊಂದು ಕಾರ್ಯಕ್ರಮ ಈಗಾಗಲೇ ಜಾರಿಯಾಗಿದ್ದು, ಅದನ್ನು ಇದೀಗ ಭಾರತೀಯ ಸಿನೆಮಾ ಉದ್ಯಮ ಕೂಡಾ ಅಳವಡಿಸಿಕೊಂಡಿದೆ. 

57

 ಈ ಕಾರ್ಯಕ್ರಮದ ಭಾಗವಾಗಿ ಯಾವುದೇ ಥಿಯೇಟರ್‌ನಲ್ಲಿ, ಯಾವುದೇ ಭಾಷೆಯ, ಯಾವುದೇ ಶೋ, ಯಾವುದೇ ಚಲನಚಿತ್ರದ ಟಿಕೆಟ್‌ಗೆ ಗರಿಷ್ಠ 75 ರು.ಗೆ ಮಾತ್ರವೇ ಟಿಕೆಟ್‌ ದರ ಇರಲಿದೆ.

67

ಆದರೆ ಇಂಥ ಟಿಕೆಟ್‌ಗಳನ್ನು ಥರ್ಡ್‌ಪಾರ್ಟಿ ಆ್ಯಪ್‌ ಮೂಲಕ ಆನ್‌ಲೈನ್‌ನಲ್ಲಿ ಖರೀದಿಸಿದರೆ, ಇಂಟರ್‌ನೆಟ್‌ ಶುಲ್ಕ, ಜಿಎಸ್‌ಟಿ ಹೆಚ್ಚುವರಿಯಾಗಿ ಜಾರಿಯಾಗಲಿದೆ. 

77

ಅಂದರೆ 75 ರು.ಗಿಂತ ಹೆಚ್ಚಿನ ದರ ತೆರಬೇಕಾಗಿ ಬರಲಿದೆ. ಸಿನೆಮಾ ಮಂದಿರಗಳಿಗೆ ಹೋಗಿ ಖರೀದಿಸಿದರೆ 75 ರು.ಗೆ ಟಿಕೆಟ್‌ ಲಭ್ಯವಾಗಲಿದೆ ಎಂದು ವರದಿ ಹೇಳಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories