ಕಿಚ್ಚನ ಮನೆಗೆ ಶಿವಣ್ಣ-ಗೀತಕ್ಕ ಸರ್ ಪ್ರೈಸ್ ವಿಸಿಟ್
First Published | Sep 2, 2022, 10:09 PM ISTವಿಶ್ವಾದ್ಯಂತ ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 49ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಕಿಚ್ಚನ ಮನೆಗೆ ಸಪ್ರೈಸ್ ವಿಸಿಟ್ ಕೊಟ್ಟಿದ್ದಾರೆ. ಸುದೀಪ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭೇಟಿ ನೀಡಿ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ. ಈ ವೇಳೆ ಸುದೀಪ್ ಅವರ ಪತ್ನಿ ಪ್ರೀಯಾ ಸುದೀಪ್ , ಮಗಳು ಸಾನ್ವಿ ಜೊತೆಗೆ ಇಡೀ ಕುಟುಂಬ ಜೊತೆಯಲ್ಲಿದ್ದರು.