ಸ್ಯಾಂಡಲ್‌ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ ಸೆಪ್ಟೆಂಬರ್ ತಿಂಗಳಿನಲ್ಲಿ ಕುಟುಂಬಕ್ಕೆ ಹೊಸ ಅತಿಥಿಯನ್ನು ಬರ ಮಾಡಿಕೊಳ್ಳುತ್ತಿದ್ದಾರೆ.
210
'ನಮ್ಮ ಜೀವನದ ಹೊಸ ಫೇಸ್ ಎಂಟರ್ ಆಗುತ್ತಿದ್ದೀವಿ. A Divine one. ಶೀಘ್ರದಲ್ಲಿ ಬರುತ್ತಿರುವ ಪುಟ್ಟ ಕಂದಮ್ಮನನ್ನು ಆಶೀರ್ವಾದಿಸಿ. ಜೈ ಹನುಮಾನ' ಎಂದು ಧ್ರುವ ಸರ್ಜಾ ಬರೆದುಕೊಂಡಿದ್ದಾರೆ.
310
ಎರಡು ಮೂರು ಕಾನ್ಸೆಪ್ಟ್‌ನಲ್ಲಿ ಧ್ರುವ ಸರ್ಜಾ ಫೋಟೋ ಶೂಟ್ ಮಾಡಿಸಿದ್ದಾರೆ. ಇದಕ್ಕೆ ಅಂಬಾರಿ ಸಿನಿಮಾದ 'ಪೆದ್ದು ಮುದ್ದು ಜೋಡಿ' ಹಾಡನ್ನು ಸೇರಿಸಿದ್ದಾರೆ.
410
ಮೊದಲು ಕಾಫಿ ಬಣ್ಣದ ಗೌನ್‌ನಲ್ಲಿ ಪ್ರೇರಣಾ ಮತ್ತು ಬ್ಲ್ಯಾಕ್ ಸೂಟ್‌ನಲ್ಲಿ ಧ್ರುವ ಸರ್ಜಾ ಮಿಂಚಿದ್ದಾರೆ. ಈ ಲುಕ್‌ನಲ್ಲಿ ಮಗುವಿನ ಸ್ಕ್ಯಾನ್ ಫೋಟೋವನ್ನು ತೋರಿಸಿದ್ದಾರೆ.
510
ಎರಡನೇ ಲುಕ್‌ನಲ್ಲಿ ಪ್ರೇರಣಾ ನೀಲಿ ಬಣ್ಣದ ಗೌನ್ ಧರಿಸಿದ್ದಾರೆ, ವೈಟ್ ಆಂಡ್ ವೈಟ್ ಲುಕ್‌ನಲ್ಲಿ ಧ್ರುವ ಕಾಣಿಸಿಕೊಂಡಿದ್ದಾರೆ. ಪತ್ನಿ ಕೋಪ ಮಾಡಿಕೊಂಡು ಅಳುತ್ತಿರುವಾಗ ಧ್ರುವ ಕೈಯಲ್ಲಿ ಸಾರಿ ಎಂದು ಬರೆದಿರುವು ಸ್ಲೇಟ್ ಹಿಡಿದಿದ್ದಾರೆ.
610
ಮೂರನೇ ಲುಕ್‌ನಲ್ಲಿ ಪ್ರೇರಣಾ ಪಿಂಕ್ ಬಣ್ಣದ ಗೌನ್ ಧರಿಸಿದ್ದರೆ ಧ್ರುವ ಮತ್ತೆ ವೈಟ್ ಬಣ್ಣದ ಡಿಫರೆಂಟ್ ಡ್ರೆಸ್ ಧರಿಸಿದ್ದಾರೆ. ಈ ಲುಕ್‌ನಲ್ಲಿ ಮಗುವನ್ನು ಸೆಪ್ಟೆಂಬರ್ ಬರ ಮಾಡಿಕೊಳ್ಳುತ್ತಿರುವುದು ಎಂದು ತಿಳಿಸಿದ್ದಾರೆ.
710
ಸಾಕೇತ್ ಇವರಿಬ್ಬರ ಫೋಟೋಶೂಟ್ ಮಾಡಿದ್ದಾರೆ, ಜೀವಿತಾ ಮತ್ತು ಆಧ್ಯಾ ರಾಜ್ ಮೇಕಪ್ ಮಾಡಿದ್ದಾರೆ. ಉಡುಪುಗಳನ್ನು ಚೇತನ್ ಡಿಸೈನ್ ಮಾಡಿದ್ದಾರೆ. ಈ ಡಿಫರೆಂಟ್ ವಿಡಿಯೋ ಮತ್ತು ಗ್ರಾಫಿಕ್ಸ್ ಮಾಡಿರುವುದು ಕಾಂತಿ ಸ್ಟುಡಿಯೋ ಮತ್ತು ಪ್ರವೀಣ್ ಗೌಡ.
810
2019ರಲ್ಲಿ ಧ್ರುವ ಸರ್ಜಾ ಮತ್ತು ಪ್ರೇರಣಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರೂ ಬಾಲ್ಯದಿಂದ ಸ್ನೇಹಿತರಾಗಿದ್ದು ಪ್ರೀತಿಯಲ್ಲಿ ಬಿದ್ದು ಫೋಷಕರ ಒಪ್ಪಿಗೆ ಪಡೆದುಕೊಂಡು ಮದುವೆಯಾದ್ದರು.
910
ಅಣ್ಣನ ಮಗ ರಾಯನ್ ರಾಜ್ ಸರ್ಜಾನ ಮುದ್ದಾಡುತ್ತಿದ್ದ ಈ ಜೋಡಿಗೆ ಜನರು ಪದೇ ಪದೇ ಕಳುತ್ತಿದ್ದರು ಗುಡ್ ನ್ಯೂಸ್ ಯಾವಾಗ ಎಂದು. ಸ್ಪೆಷಲ್ ವಿಡಿಯೋ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ.
1010
'ನೀವಿಬ್ಬರೂ ಕೊಟ್ಟಿರುವ ಬ್ಯೂಟಿಫುಲ್ ನ್ಯೂಸ್ ಇದು. ದೇವರು ಒಳ್ಳೆಯದು ಮಾಡಲಿ. ಪುಟ್ಟ ಕಂದಮ್ಮನಿಗೆ ನನ್ನಿಂದು ಫುಲ್ ಪ್ರೀತಿ' ಎಂದು ಮೇಘನಾ ರಾಜ್ ಕಾಮೆಂಟ್ ಮಾಡಿದ್ದಾರೆ.