Sapta Sagaradaache Elloಗೆ ಎರಡು ವರ್ಷ: ಕುತೂಲಹದ ಪೋಸ್ಟ್​ ಶೇರ್​ ಮಾಡಿದ ರಕ್ಷಿತ್​ ಶೆಟ್ಟಿ!

Published : Sep 02, 2025, 06:12 PM IST

ರಕ್ಷಿತ್​ ಶೆಟ್ಟಿ ಮತ್ತು ರುಕ್ಮಿಣಿ ವಸಂತ್​ ಅಭಿನಯದ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಬಿಡುಗಡೆಯಾಗಿ ಎರಡು ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ನಟ ಈ ಬಗ್ಗೆ ಪೋಸ್ಟ್​ ಹಾಕಿದ್ದಾರೆ. ಅವರು ಬರೆದಿರುವುದು ಏನು? 

PREV
18
ಸಪ್ರಸಾಗರದಾಚೆಗೆ 2ರ ಸಂಭ್ರಮ

2023ರ ಆಗಸ್ಟ್​ 31ರಂದು ಬಿಡುಗಡೆಯಾಗಿದ್ದ ಸಪ್ತ ಸಾಗರದಾಚೆ ಎಲ್ಲೋ (Sapta Sagaradaache Ello) ಚಿತ್ರಕ್ಕೆ ಎರಡು ವರ್ಷಗಳು ಮುಗಿದಿವೆ. ಎ ಸೈಡ್​ ಬಿ ಸೈಡ್​ ಎಂದು ಎರಡು ಭಾಗಗಳಲ್ಲಿ ಬಂದ ಈ ಸಿನಿಮಾ ಸೂಪರ್​ ಡೂಪರ್​ ಆಗಿತ್ತು. ರಕ್ಷಿತ್​ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ನಟನೆಯ ಈ ಚಿತ್ರಕ್ಕೆ ಮನಸೋಲದವರೇ ಇಲ್ಲ. ಇದೀಗ ಚಿತ್ರಕ್ಕೆ ಎರಡು ವರ್ಷಗಳಾಗಿವೆ.

28
ಸಿನಿಮಾ ಬಿಡುಗಡೆಯಾಗಿ 2 ವರ್ಷ

ಕುತೂಹಲದ ಕಥೆಯಿರುವ ಚಿತ್ರ ಬಿಡುಗಡೆಗೊಂಡು ಎರಡು ವರ್ಷಗಳಾಗಿರುವ ಹಿನ್ನೆಲೆಯಲ್ಲಿ ರಕ್ಷಿತ್​ ಶೆಟ್ಟಿ ಅವರು ಪೋಸ್ಟ್​ ಒಂದನ್ನು ಶೇರ್​ ಮಾಡಿದ್ದಾರೆ. ಹಾಗೆ ನೋಡಿದರೆ ರಕ್ಷಿತ್​ ಶೆಟ್ಟಿ ಅವರು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುವುದು ಬಲು ಅಪರೂಪ. ಆದರೆ ಇದೀಗ ಈ ಬಗ್ಗೆ ಪೋಸ್ಟ್​ ಶೇರ್​ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

38
ರಕ್ಷಿತ್​ ಶೆಟ್ಟಿ ಪೋಸ್ಟ್​

ಇದರಲ್ಲಿ ಅವರು, 'ಕಥೆಯಾಗಿ ಆರಂಭವಾದದ್ದು ನಿಮ್ಮಿಂದಾಗಿ ಭಾವನೆಗಳ ಸಮುದ್ರವಾಯಿತು. ಮನು ಮತ್ತು ಪ್ರಿಯಾ 2 ವರ್ಷಗಳ ನಂತರವೂ ನಿಮ್ಮ ಹೃದಯದಲ್ಲಿ ವಾಸಿಸುತ್ತಿರುವುದಕ್ಕೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.

48
ತನ್ನದಲ್ಲದ ತಪ್ಪಿಗೆ ಜೈಲು ಸೇರಿದ ಮನು

ಇನ್ನು ಸಿನಿಮಾದ ಎ ಸೈಡ್​ ಸ್ಟೋರಿ ಹೇಳುವುದಾದರೆ, ಬದುಕಿನಲ್ಲಿ ಬಹುಬೇಗನೇ ಸೆಟ್ಲ್ ಆಗಬೇಕು, ತನ್ನ ಹುಡುಗಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಉದ್ದೇಶದಿಂದ ತನ್ನದಲ್ಲದ ತಪ್ಪಿಗೆ ತಲೆ ಕೊಟ್ಟು ಮನು ಅರ್ಥಾತ್​ ರಕ್ಷಿತ್ ಶೆಟ್ಟಿ ಜೈಲಿಗೆ ಹೋಗಲು ಒಪ್ಪಿಕೊಳ್ಳುತ್ತಾನೆ. ಆದರೆ ತಾನು ಮಾಡಿದ್ದು ಭಯಾನಕ ತಪ್ಪು ಎಂದು ಯೋಚಿಸುವಷ್ಟರಲ್ಲಿಯೇ ಬದುಕುಅಲ್ಲೋಲ ಕಲ್ಲೋಲ ಆಗಿಬಿಡುತ್ತದೆ.

58
ಮನುಗೆ 10 ವರ್ಷ ಶಿಕ್ಷೆ

ಮನುಗೆ 10 ವರ್ಷ ಜೈಲು ಶಿಕ್ಷೆ ಖಚಿತವಾದರೆ, ಇತ್ತ ಯಾರಿಗಾಗಿ ಆತ ಜೈಲಿಗೆ ಹೋಗಿದ್ದನೋ ಆ ಪ್ರೇಯಸಿ ಪ್ರಿಯಾ (ರುಕ್ಮಿಣಿ ವಸಂತ್​) ಬೇರೊಬ್ಬನ ಜೊತೆ ಮದುವೆಯಾಗುವ ಪರಿಸ್ಥಿತಿ ಬರುತ್ತದೆ. ಇಲ್ಲಿಗೆ 'ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ' ಕಥೆ ಮುಗಿಯುತ್ತದೆ.

68
ಬದಲಾದ ಮನು

ನಂತರ ಬರುವುದೇ ಬಿ ಸೈಡ್​. ಇಲ್ಲಿ ಮೊದಲ ಭಾಗದಲ್ಲಿ ಕಂಡ ಮನು ಬದಲಾಗಿದ್ದಾನೆ. ದೇಹತೂಕ ಹೆಚ್ಚಿದ ಜೊತೆ ಮಾನಸಿಕವಾಗಿಯೂ ಜರ್ಜಿತವಾಗಿದ್ದಾನೆ.

78
ಪ್ರಿಯಾ ಬದುಕು ನರಕ

ಅತ್ತ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪತಿಯೊಡನೆ ಸಂಸಾರ ಸಾಗಿಸುತ್ತ ಪ್ರಿಯಾ, ತನ್ನದೇ ತಾಪತ್ರಯಗಳೊಂದಿಗೆ ಜೀವನ ನಡೆಸುತ್ತಿದ್ದಾಳೆ. 

88
ಕಥೆ ಏನಾಗುತ್ತೆ?

ಇವರಿಬ್ಬರ ಕಥೆ ಮುಂದೇನಾಗುತ್ತೆ? ತನಗೆ ಮೋಸ ಮಾಡಿದವರಿಗೆ ಮನು ಸೇಡು ತೀರಿಸಿಕೊಳ್ಳುತ್ತಾನಾ? ಪ್ರಿಯಾ ಬದುಕಿಗೆ ಮತ್ತೆ ಎಂಟ್ರಿ ನೀಡುತ್ತಾನಾ ಇತ್ಯಾದಿ ಕಥೆ ಹೇಳುತ್ತದೆ ಬಿ ಸೈಡ್​

Read more Photos on
click me!

Recommended Stories