ಬೆಳ್ಳಿ ಕಾಲುಂಗುರ ಮುಹೂರ್ತ: ಸಾರಾ ಗೋವಿಂದು ನಿರ್ಮಾಣ, ಧನ್ಯಾ ರಾಮ್‌ಕುಮಾರ್‌ ನಟನೆಯ ಚಿತ್ರ

First Published | Aug 13, 2022, 11:17 AM IST

ಧನ್ಯಾ ರಾಮ್‌ಕುಮಾರ್ ಹೊಸ ಚಿತ್ರಕ್ಕೆ ಸಾಥ್ ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ, ಅಶ್ವಿನಿ ಪುನೀತ್ ಮತ್ತು ರಾಘವೇಂದ್ರ ರಾಜ್‌ಕುಮಾರ್....

ಧನ್ಯಾ ರಾಮ್‌ಕುಮಾರ್‌ (Dhanya Ramkumar) ನಟನೆಯ ‘ಬೆಳ್ಳಿ ಕಾಲುಂಗುರ’ ಚಿತ್ರದ ಮುಹೂರ್ತ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯಿತು. 

ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಹೆಚ್‌ ವಾಸು 30 ವರ್ಷದ ಹಿಂದೆ ಬಂದ ಟೈಟಲ್‌ನಲ್ಲಿ ಮತ್ತೆ ಸಿನಿಮಾ ಮಾಡಲು ಹೊರಟ ಕತೆ ಹೇಳಿದರು. 

Tap to resize


ಹಳೆಯ ‘ಬೆಳ್ಳಿ ಕಾಲುಂಗುರ’ ಚಿತ್ರಕ್ಕೆ ಇವರು ಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿ ದುಡಿದವರು. ‘ಈ ಸಿನಿಮಾ ಮಾಡುವಾಗ ದೊಡ್ಡ ಚಾಲೆಂಜ್‌ಗಳಿವೆ. 30 ವರ್ಷ ಹಿಂದೆ ಬಂದ ಬೆಳ್ಳಿ ಕಾಲುಂಗುರ ಚಿತ್ರದ ನಿರ್ದೇಶಕ ಕೆ ವಿ ರಾಜು ನನ್ನ ಸಿನಿಮಾ ಗುರುಗಳು.

ನಾನು ಮಾಡುವ ಈ ಸಿನಿಮಾ ಅವರ ಸಿನಿಮಾಕ್ಕೆ ಚ್ಯುತಿ ತರಬಾರದು, ನನ್ನ ನಂಬಿ ನಿರ್ಮಾಪಕರು ಹಾಕಿದ ಬಂಡವಾಳಕ್ಕೆ ಮೋಸವಾಗಬಾರದು. 

ಇಂದಿನ ಟ್ರೆಂಡಿಗೆ ಈ ಕಾಲದವರಿಗೆ ಸಬ್ಜೆಕ್ಟ್ ಕನೆಕ್ಟ್ ಆಗಬೇಕು. ಇವೆಲ್ಲದರ ಮೇಲೆ ವರ್ಕ್ ಮಾಡುತ್ತಿರುವೆ’ ಎಂದರು ವಾಸು(Vasu).

ನಾಯಕಿ ಧನ್ಯಾ ರಾಮ್‌ಕುಮಾರ್‌ ಅವರ ತಂದೆಗೆ ಈ ಟೈಟಲ್‌, ಕತೆ ಬಹಳ ಇಷ್ಟವಾಯಿತಂತೆ. ‘ಲಂಡನ್‌ನಲ್ಲಿ ಓದಿರುವ, ಆದರೆ ನಮ್ಮ ನೆಲದ ಸಂಪ್ರದಾಯವನ್ನು ಅನುಸರಿಸುವ ಹುಡುಗಿಯ ಪಾತ್ರ ನನ್ನದು’ ಎಂದರು ಧನ್ಯಾ.

ನಾಯಕ ಸಮಥ್‌ರ್‍ ಮುಂಬೈನವರು. ಅನುಪಮ್‌ ಖೇರ್‌ ಇನ್ಸ್‌ಟಿಟ್ಯೂಟ್‌ನಲ್ಲಿ ನಟನೆಯ ಪಾಠ ಹೇಳಿಸಿಕೊಂಡಿದ್ದಾರೆ. ನಿರ್ಮಾಪಕ ಸಾ ರಾ ಗೋವಿಂದು 30 ವರ್ಷಗಳ ಕೆಳಗೆ ಅಂದಿನ ಕಮರ್ಷಿಯಲ್‌ ಹೀರೋಯಿನ್‌ ಆಗಿದ್ದ ಮಾಲಾಶ್ರೀಗೆ ಸೆಂಟಿಮೆಂಟ್‌ ಸಿನಿಮಾ ಮಾಡಿ ಗೆದ್ದ ಕತೆ ಹೇಳಿದರು.

 ಸಂಭಾಷಣೆ ಬರೆದ ಎಂ ಎಸ್‌ ರಮೇಶ್‌ ಸಂಪ್ರದಾಯ ಮತ್ತು ಆಧುನಿಕತೆಯ ನಡುವಿನ ಘರ್ಷಣೆ, ಪ್ರೀತಿ ಬಗ್ಗೆ ಮಾತನಾಡಿದರು. ಛಾಯಾಗ್ರಾಹಕ ಕೃಷ್ಣಕುಮಾರ್‌ ಉಪಸ್ಥಿತರಿದ್ದರು.

Latest Videos

click me!