5ನೇ ವಯಸ್ಸಿಗೆ ಸಿನಿಮಾಗೆ ಎಂಟ್ರಿ, 13ನೇ ವಯಸ್ಸಲ್ಲೇ ಹೀರೋಯಿನ್…ಚಂದನವನದ ಎವರ್ ಗ್ರೀನ್ ನಟಿ ಸುಧಾರಾಣಿಗಿಂದು ಬರ್ತ್ ಡೇ ಸಂಭ್ರಮ

First Published | Aug 14, 2024, 12:11 PM IST

ಬಾಲನಟಿಯಾಗಿ ಸಿನಿಮಾಗೆ ಎಂಟ್ರಿ ಕೊಟ್ಟು, 13ನೇ ವಯಸಲ್ಲಿ ನಾಯಕಿಯಾಗಿ ಮಿಂಚಿ ಕನ್ನಡ ಚಿತ್ರರಂಗಕ್ಕೆ ಹಿಟ್ ಚಿತ್ರಗಳನ್ನ ನೀಡಿದ ಎವರ್ ಗ್ರೀನ್ ನಟಿ ಸುಧಾರಾಣಿಯವರಿಗಿಂದು ಹುಟ್ಟುಹಬ್ಬದ ಸಂಭ್ರಮ. 
 

1973 ರ ಆಗಸ್ಟ್ 14ರಂದು ಆ ಕುಟುಂಬಕ್ಕೆ ವಿಶೇಷ ದಿನ, ಯಾಕಂದ್ರೆ ಬ್ರಾಹ್ಮಣ ಕುಟುಂಬದ ಗೋಪಾಲಕೃಷ್ಣ ಮತ್ತು ನಾಗಲಕ್ಷ್ಮೀ ದಂಪತಿಗಳಿಗೆ ಅಂದು ಪೋಷಕರಾದ ಸಂಭ್ರಮ. ಮುದ್ದಾದ ಹೆಣ್ಣುಮಗಳಿಗೆ ಜಯಶ್ರೀ ಎಂದು ನಾಮಕರಣ ಮಾಡಿದ್ದರು ಆ ಕುಟುಂಬ. ಆ ಪುಟ್ಟ ಬಾಲಕಿ ಜಯಶ್ರಿ ಬೇರಾರೂ ಅಲ್ಲ ಕನ್ನಡ ಚಿತ್ರರಂಗದಲ್ಲಿ 45 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಟಿ ಸುಧಾರಾಣಿ (Sudharani). 

ಹೌದು ಬೇಬಿ ಜಯಶ್ರೀಯಾಗಿ (Baby Jayashree) ತಮ್ಮ ಐದನೇ ವಯಸ್ಸಿನಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಕಿಲಾಟಿ ಕಿಟ್ಟು, ಕಳ್ಳಾ ಕುಳ್ಳಿ,  ಅನುಪಮ, ಭಾಗ್ಯವಂತ, ರಂಗನಾಯಕಿ ಸಿನಿಮಾದಲ್ಲಿ ನಟಿಸಿದ್ದರು. ತಮ್ಮ 13ನೇ ವಯಸ್ಸಿನಲ್ಲಿ ಶಿವರಾಜ್ ಕುಮಾರ್ ಅಭಿನಯದ ಆನಂದ್ ಸಿನಿಮಾಗೆ ನಾಯಕಿಯಾಗಿ ನಟಿಸಿದ್ದರು. ಅಲ್ಲಿಂದ ಬೇಬಿ ಜಯಶ್ರೀ ಸುಧಾರಾಣಿಯಾಗಿ ಕನ್ನಡ ಚಿತ್ರರಂಗದಲ್ಲಿ ಮೆರೆದರು. 

Tap to resize

ಸುಧಾರಾಣಿ ವರ್ಸಟೈಲ್ ನಟಿ, ಅವರು ಪ್ರತಿಯೊಂದು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಮಿಂಚುವ ಮೂಲಕ ತಮ್ಮ ಅಭಿನಯ ಸಾಮಾರ್ಥ್ಯವನ್ನು ತೋರಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ವಿವಿಧ ಪ್ರಕಾರಗಳಲ್ಲಿ ಅಂದರೆ ಸಾಂಪ್ರದಾಯಿಕ ಪಾತ್ರಗಳಿಂದ ಹಿಡಿದು, ಮಾಡರ್ನ್ ಹುಡುಗಿಯಾಗಿ, ಸ್ಟ್ರಾಂಗ್ ಮಹಿಳೆಯ ಪಾತ್ರದಲ್ಲೂ ಸುಧಾರಾಣಿ ನಟಿಸಿದ್ದಾರೆ. 
 

ಕನ್ನಡ ತಮಿಳು, ತೆಲುಗು, ಮಲಯಾಳಂ, ತುಳು ಸೇರಿ ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವವ ಸುಧಾರಾಣಿ ಅವರಿಗೆ ಸಿನಿಮಾ ರಂಗದ ದಿಗ್ಗಜರೊಂದಿಗೆ ನಟನೆ ಮಾಡುವ ಅವಕಾಶವೂ ದೊರೆತಿದೆ. ಸುಧಾರಾಣಿ ಡಾ. ರಾಜುಕುಮಾರ್ (Dr Rajkumar), ವಿಷ್ಣುವರ್ಧನ್, ಅಂಬರೀಷ್, ರಮೇಶ್, ಶಿವರಾಜ್ ಕುಮಾರ್, ರವಿಚಂದ್ರನ್ ರಂತಹ ಗಣ್ಯರ ಜೊತೆ ತೆರೆ ಹಂಚಿಕೊಂಡಿದ್ದಾರೆ. 

ಅತ್ಯುತ್ತಮ ನಟನೆಗಾಗಿ ಸುಧಾರಾಣಿಯವರಿಗೆ ಬಿಆರ್ ಪಂಥುಲು ಅವಾರ್ಡ್, ಕರ್ನಾಟಕ ರಾಜ್ಯ ಪ್ರಶಸ್ತಿ (Karnataka State Award), ಫಿಲಂ ಫೇರ್ ಅವಾರ್ಡ್, ಚಂದನವನ ಫಿಲಂ ಕ್ರಿಟಿಕ್ ಅಕಾಡೆಮಿ ಅವಾರ್ಡ್ ಗಳು ಸೇರಿ ಹಲವು ಪ್ರಶಸ್ತಿಗಳು ಸಂದಿವೆ. 
 

ಸುಧಾರಾಣಿ ಅತ್ಯುತ್ತಮ ಡ್ಯಾನ್ಸರ್ ಕೂಡ ಹೌದು, ಐದನೇ ವಯಸ್ಸಿನಲ್ಲಿ ಭರತನಾಟ್ಯ ಕಲಿತಿರುವ ಸುಧಾರಾಣಿ ನುರಿತ ಕೂಚುಪುಡಿ ಡ್ಯಾನ್ಸರ್ ಕೂಡ ಹೌದು. ಅಷ್ಟೇ ಅಲ್ಲ ಇವರು ಡಬ್ಬಿಂಗ್ ಆರ್ಟಿಸ್ಟ್ ಆಗಿ ಸಹ ಕೆಲಸ ಮಾಡಿದ್ದು, ರೋಜಾ, ದೇವಯಾನಿ, ಸದಾ, ರಮ್ಯ ಕೃಷ್ಣನ್, ಅಷ್ಟೇ ಯಾಕೆ ಕೆಜಿಎಫ್ ಸಿನಿಮಾದಲ್ಲಿ ರವೀನಾ ಟಂಡನ್ ಗೂ ನಟಿ ವಾಯ್ಸ್ ನೀಡಿದ್ದರು. 

ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲ, ಸೀರಿಯಲ್ ಗಳಲ್ಲೂ ನಟಿಸಿ ಸುಧಾರಾಣಿ ಸೈ ಎನಿಸಿಕೊಂಡಿದ್ದರು. ಇವರು ನಟಿಸಿದ್ದ ತುಳಸಿ ಸೀರಿಯಲ್ ಯಶಸ್ಸು ಕಂಡಿತ್ತು. ಇದೀಗ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ (kannada serial) ನಟಿಸುತ್ತಿದ್ದಾರೆ. ಹೀಗೆ ಕಳೆದ 45 ವರ್ಷಗಳಿಂದ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನಟಿ ಸುಧಾರಾಣಿಯವರಿಗೆ ತಮ್ಮ ಕೊನೆಯುಸಿರು ಇರೋವರೆಗೂ ಕನ್ನಡ ಇಂಡಷ್ಟ್ರಿಗಾಗಿ ಕೆಲಸ ಮಾಡುವ ಆಸೆಯಂತೆ. 

Latest Videos

click me!