ಬಸುರಿ ಬಯಕೆ ಕಾಡಿಲ್ಲ, ವರ್ಕೌಟ್ ಮಾಡೋದು ಬಿಟ್ಟಿಲ್ಲ…. ಪ್ರೆಗ್ನೆನ್ಸಿ ಜರ್ನಿ ಕುರಿತು ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟ ಮಿಲನಾ

First Published | Aug 13, 2024, 1:39 PM IST

ಇತ್ತೀಚೆಗಷ್ಟೇ ಸೀಮಂತ ಮಾಡಿಕೊಂಡಿರುವ ಸ್ಯಾಂಡಲ್ ವುಡ್ ನಟಿ ಮಿಲನಾ ನಾಗರಾಜ್ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ ಸಮಯದಲ್ಲಿ ನಟಿ ತಮ್ಮ ಪ್ರೆಗ್ನೆನ್ಸಿ ಜರ್ನಿ ಹೇಗಿತ್ತು ಅನ್ನೋದನ್ನ ಹೇಳಿದ್ದಾರೆ. 
 

ಸ್ಯಾಂಡಲ್’ವುಡ್ ಸೆಲೆಬ್ರಿಟಿ ಜೋಡಿಗಳಾದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ (Darling Krishna) ಪೋಷಕರಾಗೋ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಅವರ ಮನೆಯಲ್ಲಿ ಸೀಮಂತ ಕಾರ್ಯಕ್ರಮಗಳು ಬಲು ಸಂಭ್ರಮ, ಸಡಗರದಿಂದ ನಡೆದಿದ್ದವು. 
 

ಸೀಮಂತದ ಸಂಭ್ರಮದಲ್ಲಿ ಮಿಲನಾ (Milana Nagaraj) ನೇರಳೆ ಬಣ್ಣದ ಸೀರೆಯುಟ್ಟು, ಮಿನಿಲಮ್ ಮೇಕಪ್ ನಲ್ಲಿ ಗಮನ ಸೆಳೆದರೆ, ಕೃಷ್ಣ ಗೋಲ್ಡನ್ ಬಣ್ಣದ ಶರ್ಟ್ ಮತ್ತು ಪಂಚೆ ಧರಿಸಿ ಮಿಂಚುತ್ತಿದ್ದರು. ಮಿಲನಾ ಮುಖದಲ್ಲಿ ಗರ್ಭಿಣಿ ಕಳೆ ಎದ್ದು ಕಾಣುತ್ತಿತ್ತು. ಇಬ್ಬರ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 
 

Tap to resize

ಸೆಪ್ಟೆಂಬರ್ ಮೊದಲ ವಾರದಲ್ಲಿ ಮಗುವಿನ ನಿರೀಕ್ಷೆಯಲ್ಲಿರುವ ಮಿಲನಾ ತಮ್ಮ ಪ್ರೆಗ್ನೆನ್ಸಿ ಜರ್ನಿ (pregnancy) ಬಗ್ಗೆ ಕುತೂಹಲಕಾರಿ ಮಾಹಿತಿಯನ್ನ  ಹಂಚಿಕೊಂಡು ಸಂಭ್ರಮಿಸಿದ್ದು, ಒಂಭತ್ತನೇ ತಿಂಗಳಲ್ಲಿರುವ ತಮಗೆ ಡೆಲಿವರಿ ದಿನಗಳ  ಬಗ್ಗೆ ಭಯ ಮಿಶ್ರಿತ ಕುತೂಹಲ ಇರೋದಾಗಿ ಹೇಳಿದ್ದಾರೆ. 
 

ತಾಯಿ ಆಗೋದು ಅಂದ್ರೆ ಸಣ್ಣ ವಿಷ್ಯ ಅಲ್ಲ, ಈ ಸಮಯದಲ್ಲಿ ದೇಹ ಮತ್ತು ಮನಸ್ಸು ಎರಡೂ ಕೂಡ ತುಂಬಾನೆ ಬದಲಾಗುತ್ತೆ. ಈ ಸಮಯದಲ್ಲಿ ದೇಹದಲ್ಲಿ ಕೆಲವೊಮ್ಮೆ ಒಳ್ಳೆಯ ಬದಲಾವಣೆಗಳು ಕಾಣಿಸಿಕೊಂಡರೆ, ಕೆಲವೊಮ್ಮೆ ಸಮಸ್ಯೆಗಳನ್ನ ಎದುರಿಸಬೇಕಾಗಿ ಬರುತ್ತೆ. ಈ ಬಗ್ಗೆ ಮಾತನಾಡಿದ ನಟಿ ಮಿಲನಾ ನನಗೂ ಒಮ್ಮೊಮ್ಮೆ ಏನಾಗುತ್ತದೆಯೋ ಎನ್ನುವ ಭಯ ಕಾಡುತ್ತೆ, ಅದ್ರ ಜೊತೆಗೆ ವೈದ್ಯರು ಜೊತೆಗಿದ್ದಾರೆ ಎನ್ನುವ ಭರವಸೆ ಇದೆ ಎಂದಿದ್ದಾರೆ. 
 

ಇನ್ನು ತಮಗೆ ಬಸುರಿ ಬಯಕೆ ಕಾಡದಿರುವ ಬಗ್ಗೆ ಅಚ್ಚರಿಕೆಯ ಹೇಳಿಕೆ ನೀಡಿರುವ ಮಿಲನಾಗೆ ಬಸುರಿಗೆ ಉಂಟಾಗುವ ಸಾಮಾನ್ಯ ಬಯಕೆಗಳು ಕಾಡಿಯೇ ಇಲ್ವಂತೆ. ಎಲ್ಲರೂ ನಿನ್ನ ಬಯಕೆಗಳು ಏನು ಅಂತ ಕೇಳ್ತಾರೆ ಆದರೆ ನನಗೆ ಆ ರೀತಿಯ ಯಾವ ಬಯಕೆಗಳು ಆಗಿಯೇ ಇಲ್ಲ ಎಂದಿದ್ದಾರೆ ಮಿಲನಾ. 
 

ಅಷ್ಟೇ ಅಲ್ಲ ಒಬ್ಬೊಬ್ಬರ ದೇಹ ಒಂದೊಂದು ರೀತಿ ಇರುತ್ತೆ ಎಂದ ಮಿಲನಾಗೆ ಗರ್ಭಿಣಿಯಾದ ಮೊದಲ ಮೂರು ತಿಂಗಳು ಏನು ತಿನ್ನೋದಕ್ಕೂ ಸಾಧ್ಯ ಆಗಿರಲಿಲ್ಲವಂತೆ, ಆದರೆ ಈಗ ಆರೋಗ್ಯಯುತ ಎಲ್ಲಾ ಆಹಾರಗಳನ್ನು ಸೇವಿಸುತ್ತಾರಂತೆ ಮಾಕ್ಟೇಲ್ ಬೆಡಗಿ. 
 

ಇನ್ನು ಫಿಟ್ನೆಸ್ ಬಗ್ಗೆ ತುಂಬಾನೇ ಕಾಳಜಿ ವಹಿಸುವ ಮಿಲನಾ, ಪ್ರೆಗ್ನೆನ್ಸಿಯಲ್ಲೂ ಫಿಟ್ ಆಗಿರೋದಕ್ಕೆ ಏನೆಲ್ಲಾ ಮಾಡಬೇಕೋ ಅದನ್ನ ಮಾಡ್ತಾರಂತೆ. ಒಂಭತ್ತನೇ ತಿಂಗಳಲ್ಲಿ ಎಷ್ಟು ಮಾಡಬೇಕೋ ಅಷ್ಟು ವರ್ಕೌಟ್ ಮಾಡ್ತಾರಂತೆ, ಆದ್ರೆ ವಾಕಿಂಗ್ ಮಾಡೋದನ್ನ ಮಾತ್ರ ಮಿಸ್ ಮಾಡೋದೆ ಇಲ್ವಂತೆ. 
 

ಇನ್ನೆನೂ ಅಪ್ಪ ಆಗುತ್ತಿರುವ ಸಂಭ್ರಮದಲ್ಲಿರೋ ಡಾರ್ಲಿಂಗ್ ಕೃಷ್ಣ ಪತ್ನಿಯ ಎಲ್ಲಾ ಆಸೆಗಳನ್ನು ಈಡೇರಿಸುತ್ತಾ ಬಂದಿದ್ದಾರಂತೆ ಹಾಗಾಗಿ ತಮ್ಮ ಪ್ರೆಗ್ನೆನ್ಸಿಯನ್ನು ತುಂಬಾನೆ ಎಂಜಾಯ್ ಮಾಡಿದ್ದಾರಂತೆ ಮಿಲನಾ. 
 

Latest Videos

click me!