ಗಲ್ಫ್‌ನಲ್ಲಿ 9 ಕೋಟಿ ಗಳಿಕೆ: ಅಂತಾರಾಷ್ಟ್ರೀಯ ಮಟ್ಟದಲ್ಲೂ ಹವಾ ಸೃಷ್ಟಿಸಿದ 'ಸು ಫ್ರಮ್‌ ಸೋ'

Published : Aug 27, 2025, 06:29 PM IST

ದುಬೈನಲ್ಲಿ ಆಯೋಜಿತವಾಗಿದ್ದ ‘ಮೀಟ್‌ ಆಂಡ್‌ ಗ್ರೀಟ್‌’ ಕಾರ್ಯಕ್ರಮದಲ್ಲಿ ನಿರ್ದೇಶಕ, ನಟ ಜೆಪಿ ತುಮಿನಾಡ್, ನಿರ್ಮಾಪಕ ರಾಜ್ ಬಿ ಶೆಟ್ಟಿ, ಶನೀಲ್ ಗೌತಮ್, ಪ್ರಕಾಶ್ ತುಮಿನಾಡ್ ಹಾಗೂ ತಂಡದವರು ಭಾಗವಹಿಸಿದ್ದರು.

PREV
15

ವರ್ಷಾನುಗಟ್ಟಲೆಯಿಂದ ಸಕ್ಸಸ್‌ಗಾಗಿ ಪರಿತಪಿಸುತ್ತಿದ್ದ ಸ್ಯಾಂಡಲ್‌ವುಡ್‌ಗೆ ಆಪದ್ಭಾಂದವನಂತೆ ಎಂಟ್ರಿಕೊಟ್ಟು ಜೀವಕಳೆ ತುಂಬಿದ ‘ಸು ಫ್ರಮ್‌ ಸೋ’ ಸಿನಿಮಾ ಹವಾ 32ನೇ ದಿನಕ್ಕೂ ಮುಂದುವರಿದಿದೆ.

25

ಗೌರಿ ಗಣೇಶ ಹಬ್ಬದ ರಜೆಯಲ್ಲಿ ಜನ ಈ ಕಾಮಿಡಿ ಸಿನಿಮಾವನ್ನು ಥೇಟರ್‌ನಲ್ಲಿ ಮತ್ತೆ ಮತ್ತೆ ನೋಡಿ ಖುಷಿ ಪಡುತ್ತಿದ್ದಾರೆ. ಪರಿಣಾಮ ಸಿನಿಮಾ ರಿಲೀಸ್‌ ಆಗಿ ತಿಂಗಳು ಕಳೆದ ಮೇಲೂ ದಿನವೊಂದರಲ್ಲಿ 1.86 ಕೋಟಿಯಷ್ಟು ಗಳಿಕೆ ದಾಖಲಿಸುತ್ತಿದೆ.

35

ನೂರು ಕೋಟಿ ಮೇಲೆ ಸುಮಾರು 16 ಕೋಟಿ ಗಳಿಕೆ ಮಾಡಿರುವ ಸಿನಿಮಾ ಗಲ್ಫ್‌ ದೇಶಗಳಲ್ಲೇ ಸುಮಾರು 9 ಕೋಟಿ ರು.ನಷ್ಟು ಗಳಿಕೆ ಮಾಡಿದೆ ಎನ್ನಲಾಗಿದೆ. ಈ ಖುಷಿಯನ್ನು ಚಿತ್ರತಂಡ ದುಬೈನಲ್ಲಿ ಇತ್ತೀಚೆಗೆ ಆಚರಿಸಿತು.

45

ದುಬೈನಲ್ಲಿ ಆಯೋಜಿತವಾಗಿದ್ದ ‘ಮೀಟ್‌ ಆಂಡ್‌ ಗ್ರೀಟ್‌’ ಕಾರ್ಯಕ್ರಮದಲ್ಲಿ ನಿರ್ದೇಶಕ, ನಟ ಜೆಪಿ ತುಮಿನಾಡ್, ನಿರ್ಮಾಪಕ ರಾಜ್ ಬಿ ಶೆಟ್ಟಿ, ಶನೀಲ್ ಗೌತಮ್, ಪ್ರಕಾಶ್ ತುಮಿನಾಡ್ ಹಾಗೂ ತಂಡದವರು ಭಾಗವಹಿಸಿದ್ದರು.

55

ಇನ್ನೊಂದೆಡೆ ಸು ಫ್ರಮ್‌ ಸೋ ಸಿನಿಮಾ ಸೆಪ್ಟೆಂಬರ್‌ ತಿಂಗಳಲ್ಲಿ ಹಾಟ್‌ಸ್ಟಾರ್‌ ಓಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುವ ಸಾಧ್ಯತೆ ಇದೆ. ಇನ್ನು ನಿರ್ಮಾಪಕರ ಪ್ರಕಾರ ಈ ಸಿನಿಮಾ ವಿದೇಶಗಳಲ್ಲಿ 26 ದಿನಗಳ ನಿರಂತರ ಪ್ರದರ್ಶನಗಳನ್ನು ಕಂಡಿದೆ.

Read more Photos on
click me!

Recommended Stories