ಸ್ಟೇಜ್ ಮೇಲೇನೇ ಸಿಟ್ಟಿಗೆದ್ದ ರಚಿತಾ ರಾಮ್ 'ಫ*..' ಅಂದೇಬಿಟ್ರು!.. ಅಂಥಾ ಸಿಟ್ಟು 'ಲೇಡಿ ಬಾಸ್‌'ಗೆ ಯಾಕ್ ಬಂತು?

Published : Jan 17, 2026, 08:28 PM IST

'ಯಾರಾದ್ರೂ ಒಬ್ರು ಇದರ ಬಗ್ಗೆ ಮಾತನ್ನಾಡಬೇಕು. ಇಲ್ಲ ಅಂದ್ರೆ ಪರಿಹಾರ ಕಷ್ಟ' ಎಂದಿದ್ದಾರೆ. ಮುಂದುವರೆದ ಪ್ರಶ್ನೆಗೆ, ಒಬ್ಬೊಬ್ಬರ ಬಾಡಿ ನೇಚರ್ ಒಂದೊಂದು ತರ ಇರುತ್ತೆ. ಕೆಲವರು ವರ್ಕ್‌ಔಟ್ ಮಾಡಿದ್ರೂ ಕೂಡ ಬಹುಬೇಗನೇ ದಪ್ಪ ಆಗ್ತಾರೆ. ಮುಂದೆ ಏನಂದ್ರು?

PREV
18

ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಈಗ 'ಲೇಡಿ ಬಾಸ್' ಆಗಿರೋದು ಗೊತ್ತೇ ಇದೆ. ಆಟೋ ಚಾಲಕರ ಸಂಘಕ್ಕೆ ರಾಯಭಾರಿಯೂ ಆಗಿರುವ ನಟಿ ರಚಿತಾ ರಾಮ್ ಅವರನ್ನು ಅವರ ಅಭಿಮಾನಿಗಳು 'ಲೇಡಿ ಬಾಸ್' ಎಂದೇ ಕರೆಯತೊಡಗಿದ್ದಾರೆ.

28

ಹೌದು, ನಟಿ ರಚಿತಾ ರಾಮ್ ಅವರು ದಶಕಕ್ಕೂ ಹೆಚ್ಚುಕಾಲದಿಂದ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ. ಈಗಲೂ ಸ್ಟಾರ್ ಸಿನಿಮಾಗಳಲ್ಲಿ ಚಾನ್ಸ್ ಗಿಟ್ಟಿಸುತ್ತಿರುವ ನಟಿ ರಚಿತಾ ರಾಮ್ ಅವರು ಇತ್ತೀಚೆಗೆ ವೇದಿಕೆಯೊಂದರಲ್ಲಿ 'ಬಾಡಿ ಶೇಮಿಂಗ್' ವಿಷಯಕ್ಕೆ ಸಂಬಂಧಪಟ್ಟ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ 'Fu*k' ಎಂಬ ಪದವನ್ನು ಸಂದರ್ಭಕ್ಕೆ ಅನೂಕಲುಕರವಾಗಿ ಬಳಸಿ, ಬಳಿಕ ನಾಲಿಗೆ ಕಚ್ಚಿಕೊಂಡಿದ್ದಾರೆ.

38

ಹೌದು, ಪ್ರೆಸ್‌ಮೀಟ್ ಒಂದರಲ್ಲಿ ಪರ್ತಕರ್ತೆಯೊಬ್ಬರು ನಟಿ ರಚಿತಾ ರಾಮ್ ಅವರಿಗೆ 'ಇತ್ತೀಚೆಗೆ ಬಾಡಿ ಶೇಮಿಂಗ್ ಅನ್ನೋದು ಮಿತಿಮೀರಿದೆ. ಸ್ಟಾರ್ ನಟಿಯರನ್ನು, ಸ್ಟಾರ್ ನಟರ ಮಕ್ಕಳನ್ನೂ ಕೂಡ ಬಿಡೋದಿಲ್ಲ. ಇದಕ್ಕೆ ಪರಿಹಾರ ಯಾವತ್ತು ಮತ್ತು ಹೇಗೆ?' ಎಂದು ಕೇಳಿದ್ದಾರೆ.

48

ಅದಕ್ಕೆ ಉತ್ತರಿಸಿದ ನಟಿ ರಚಿತಾ ರಾಮ್ ಅವರು 'ಯಾರಾದ್ರೂ ಒಬ್ರು ಇದರ ಬಗ್ಗೆ ಮಾತನ್ನಾಡಬೇಕು. ಇಲ್ಲ ಅಂದ್ರೆ ಪರಿಹಾರ ಕಷ್ಟ' ಎಂದಿದ್ದಾರೆ.

ಮುಂದುವರೆದ ಪ್ರಶ್ನೆಗೆ, ಒಬ್ಬೊಬ್ಬರ ಬಾಡಿ ನೇಚರ್ ಒಂದೊಂದು ತರ ಇರುತ್ತೆ. ಕೆಲವರು ವರ್ಕ್‌ಔಟ್ ಮಾಡಿದ್ರೂ ಕೂಡ ಬಹುಬೇಗನೇ ದಪ್ಪ ಆಗ್ತಾರೆ. ಕೆಲವರ ದೇಹ ಕೆಲವೊಂದು ಕಾರಣಗಳಿಗೆ ಫ್ಯಾಟ್ ಆಗುತ್ತೆ..

58

ಕೆಲವರು ಏನೇ ತಿಂದ್ರೂ ದಪ್ಪ ಆಗ್ತಾರೆ, ಎಷ್ಟು ಕಡಿಮೆ ತಿಂದ್ರೂ ದಪ್ಪ ಆಗ್ತಾರೆ. ಎಲ್ಲರ ಬಾಡಿ ಒಂದೇ ತರ ಇರಲ್ಲ.. ಕೆಲವರಿಗೆ ನಿದ್ದೆ ಕಡಿಮೆ ಅದ್ರೆ ದೇಹ ದಪ್ಪ ಆಗುತ್ತೆ, ಕೆಲವರಿಗೆ ನಿದ್ದೆ ಹೆಚ್ಚಾದ್ರೂ ಆಗ್ಬಹುದು. ಎಲ್ಲರೂ ಒಂದೇ ರೀತಿ ಸ್ಲಿಮ್ ಆಗಿ ಇರ್ಬೇಕು ಅಂತ ನಿರೀಕ್ಷೆ ಮಾಡೋಕೆ ಆಗಲ್ಲ.

68

ಅಷ್ಟಕ್ಕೂ ಅವರಿವರ ಮಾತುಗಳನ್ನು ಕೇಳ್ತಾ ಇರ್ಬಾರ್ದು.. ನಿಮ್ಮ ದೇಹ, ನಮ್ಮ ಇಷ್ಟ.. ನಾವು ಹೇಗಿದ್ರೆ ಯಾರಿಗೆ ಏನು ಸಮಸ್ಯೆ.. ನಮ್ಮ ದೇಹ ನಮಗೆ ಇಷ್ಟವಾದ್ರೆ ಸಾಕು.. ಹೇಳೋರು ಸಾವಿ ಮಾತು ಹೇಳ್ತಾರೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಂಡು ಕುಳಿತರೆ ನಮ್ಮ ನೆಮ್ಮದಿಗೆ ಭಂಗ ಬರುತ್ತೆ' ಎಂದಿದ್ದಾರೆ ರಚಿತಾ ರಾಮ್.

78

ಬಾಡಿ ಶೇಮಿಂಗ್ ಅನುಭವಿಸಿ ಆತ್ಮಹ*ತ್ಯೆ ಮಾಡಿಕೊಳ್ಳುವವರ ಬಗ್ಗೆ ಕೇಳಿದ ಪ್ರಶ್ನೆಗೆ 'ಮುಠ್ಠಾಳರು ಅವ್ರು.. ಅವ್ರ ಬಗ್ಗೆ ನಾನು ಮಾತೂ ಆಡಲ್ಲ.. ಯಾರದೋ ಮಾತಿಗೆ ಬೇಸರಪಟ್ಟುಕೊಂಡು ಅವರ್ಯಾಕೆ ಸೂಸೈ*ಡ್ ಮಾಡಿಕೊಳ್ಳಬೇಕು? ಇರೋದೊಂದು ದೇಹ, ಲೈಫ್.. ಜೀವನವನ್ನು ಚೆನ್ನಾಗಿ, ಒಳ್ಳೆಯ ರೀತಿಯಿಂದ ಅನುಭವಿಸಬೇಕು. ಅದು ಬಿಟ್ಟು ಅವರೇನೋ ಹೇಳಿದ್ದಾರೆ, ಇವರೇನೋ ಹೇಳಿದ್ದಾರೆ ಅಂತ ಬೇಸರಪಟ್ಟು ಆತ್ಮಹ*ತ್ಯೆಯಂತಹ ನಿರ್ಧಾರ ತೆಗೆದುಕೊಂಡರೆ, ಮನೆಯವರಿಗೆ ಹಾಗೂ ಹೆತ್ತು-ಹೊತ್ತು ಬೆಳೆಸಿದ ಅಪ್ಪ-ಅಮ್ಮನ ಗತಿಯೇನು?

88

ಹೀಗೆ ಹೇಳಿದ ನಟಿ ರಚಿತಾ ರಾಮ್ ಅವರು ಕೊನೆಯಲ್ಲಿ ಬಾಡಿ ಶೇಮಿಂಗ್ ವಿರುದ್ಧ ಕೋಪಗೊಂಡು 'ನೀವು ನನ್ನನ್ನು ರಚಿತಾ ಅಂತ ಕರೆದರೆ ನಾನು ಮಾತನ್ನಾಡ್ತೀನಿ.. ಅದು ಬಿಟ್ಟು ನೀವು ನನಗೆ 'ಫ*' ಅಂದ್ರೆ ನಾನು ಗೆಟ್ ಲಾಸ್ಟ್ ಅಂತೀನಿ ಅಂದಿದ್ದಾರೆ ನಟಿ ರಚಿತಾ ರಾಮ್. ನಟಿ ರಚಿತಾ ರಾಮ್ ಆ ಪದಪ್ರಯೋಗ ಸಂದರ್ಭಕ್ಕೆ ಸೂಕ್ತ ಎಂಬಂತೆ ಪಕ್ಕದಲ್ಲಿದ್ದ ಹಿರಿಯ ನಟ ರಂಗಾಯಣ ರಘು ಅವರು ರಚಿತಾ ಬೆನ್ನಿನ ಮೇಲೆ ಕೈ ಆಡಿಸಿ ಸಪೋರ್ಟ್ ಮಾಡಿದ್ದಾರೆ.

https://www.facebook.com/watch/?v=887969420266557

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories