ಬರೋಬ್ಬರಿ ಐದೂವರೆ ತಿಂಗಳ ಬಳಿಕ ನಟಿ ಅಮೂಲ್ಯ ತಮ್ಮ ಅವಳಿ ಮಕ್ಕಳ ಫೋಟೋ ಬಹಿರಂಗ ಪಡಿಸಿದ್ದಾರೆ. ಶ್ರೀ ಕೃಷ್ಣಜನ್ಮಾಷ್ಟಮಿಯಿಂದು ಮಕ್ಕಳನ್ನು ಪರಿಚಯಿಸುತ್ತಿದ್ದೇನೆ. ನಿಮ್ಮ ಆಶೀರ್ವಾದ ಇರಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಮೂಲ್ಯ ಮನವಿ ಮಾಡಿದ್ದಾರೆ. ಆದರೆ ಅವಳಿ ಮಕ್ಕಳ ಹೆಸರು ಬಹಿರಂಗ ಪಡಿಸಿಲ್ಲ.
ಚಂದನವನದ ಗೋಲ್ಡನ್ ಕ್ವೀನ್ ಎಂದೇ ಗುರುತಿಸಿಕೊಂಡಿರುವ ಅಮೂಲ್ಯ ಮಾರ್ಚ್ 1, 2022ರಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ರು. ಇದಾದ ನಾಲ್ಕು ತಿಂಗಳ ಬಳಿಕ ಮಕ್ಕಳ ಕ್ಯೂಟ್ ಕೈಗಳ ಪೋಟೋವನ್ನು ರಿವೀಲ್ ಮಾಡಿದ್ದರು.
ಅಮೂಲ್ಯ ತಾಯಿಯಾದ ಬಳಿಕ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದರು. ಇದೀಗ ಮತ್ತೆ ತಮ್ಮ ಅವಳಿ ಮಕ್ಕಳನ್ನು ಪರಿಚಯಿಸುವ ಮೂಲಕ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಫೋಟೋ ಹಾಗೂ ವಿಡಿಯೋಗಳ ಮೂಲಕ ಮಕ್ಕಳ ಪರಿಚಯ ಮಾಡಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ನಮ್ಮ ಮುದ್ದಿನ ಮಕ್ಕಳನ್ನು ಸಂತೋಷದಿಂದ ನಿಮಗೆ ಪರಿಚಯಿಸುತ್ತಿದ್ದೇವೆ. ಸಹೃದಯಿಗಳಾದ ನಿಮ್ಮ ಶುಭಾಶೀರ್ವಾದವಿರಲಿ ಎಂದು ನಟಿ ಅಮೂಲ್ಯ ಟ್ವಿಟರ್, ಇನ್ಸ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಪತಿ ಜಗದೀಶ್ ಆರ್ ಚಂದ್ರ ಹಾಗೂ ಮಕ್ಕಳ ಜೊತೆ ಮುದ್ದಾಗಿರುವ ಫೋಟೋ ಶೂಟ್ ಮಾಡಿಸಿಕೊಂಡಿರುವ ಅಮೂಲ್ಯ ಎಲ್ಲಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿವಿಧ ಥೀಮ್‌ಗಳಲ್ಲಿ ಫೋಟೋ ಶೂಟ್ ಮಾಡಿಸಲಾಗಿದೆ.
ತಾಯಿಯಾದ ಬಳಿಕ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳದ ಅಮೂಲ್ಯ ಜುಲೈ ತಿಂಗಳಲ್ಲಿ ಮತ್ತೆ ಸ್ಲಿಮ್ ಆಗಿರುವ ಫೋಟೋ ಹಂಚಿಕೊಂಡಿದ್ದರು. ಅಮೂಲ್ಯ ಪೋಟೋ ನೋಡಿದ ಅಭಿಮಾನಿಗಳು ಮೊದಲಿ ರೀತಿ ಆಗಿದ್ದೀರಿ ಎಂದು ಕಮೆಂಟ್ ಮಾಡಿದ್ದರು. ಇದೀಗ ಅವಳಿ ಮಕ್ಕಳೊಂದಿಗೆ ಅಮೂಲ್ಯ ಮತ್ತಷ್ಟು ಮುದ್ದಾಗಿ ಕಾಣುತ್ತಿದ್ದೀರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ 5 ತಿಂಗಳಿನಿಂದಲೂ ಅಭಿಮಾನಿಗಳು ಮಕ್ಕಳ ಫೋಟೋ ರಿವೀಲ್ ಮಾಡಲು ಹಲವು ಬಾರಿ ಮನವಿ ಮಾಡಿದ್ದರು. ಇದೀಗ ಅಭಿಮಾನಿಗಳ ಬೇಡಿಕೆಗೆ ಸ್ಪಂದಿಸಿರುವ ಅಮೂಲ್ಯ ಮಕ್ಕಳ ಫೋಟೋವನ್ನು ರಿವೀಲ್ ಮಾಡಿದ್ದಾರೆ. ಇತ್ತ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಅವಳಿ ಮಕ್ಕಳ ಆಗಮನವಾಗಿ ಮೂರು ತಿಂಗಳಲ್ಲಿ ಗಾಂಧಿನಗರದ ಮೆಜೆಸ್ಟಿಕ್‌ನಲ್ಲಿರುವ ನಗರ ದೇವತೆ ಹಾಗೂ ಬೆಂಗಳೂರು ತಾಯಿ ಶ್ರೀ ಅಣ್ಣಮ್ಮ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಪತಿ ಜಗದೀಶ್ ಜೊತೆ ಕುಟುಂಬ ಸಮೇತವಾಗಿ ಅಮೂಲ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.