ಹಬ್ಬದ ದಿನ ಸೀರೆ ಹಾಕೊಂಡ್ರೂ ಸೊಂಟ ತೋರಿಸಬೇಕಾ?; ಸಂಯುಕ್ತಾ ಹೆಗ್ಡೆ ಕಾಲೆಳೆದ ನೆಟ್ಟಿಗರು

First Published | Jan 15, 2025, 3:20 PM IST

ಸೀರೆ ಧರಿಸಿ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಸಂಯುಕ್ತಾ. ಆದರೂ ಕೊಂಕು ಹುಡುಕುತ್ತಿರುವ ನೆಟ್ಟಿಗರ ಮೇಲೆ ಬೇಸರ.... 
 

ಕಿರಿಕಿ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಹೈಪರ್ ಆಕ್ಟಿವ್ ಸುಂದರಿ ಸಂಯುಕ್ತಾ ಹೆಗ್ಡೆ ಇದೀಗ ಸೀರೆಯಲ್ಲಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದೆ. 

ಈ ವರ್ಷ ಸಂಕ್ರಾಂತಿ ಹಬ್ಬವನ್ನು ಕುಟುಂಬದ ಜೊತೆ ಆಚರಿಸಿದ ಸಂಯುಕ್ತಾ ಹಸಿರು ಬಣ್ಣ ಸೀರೆಯನ್ನು ಧರಿಸಿದ್ದಾರೆ. ಇದಕ್ಕೆ ಸೂಟ್ ಆಗುವ ಆಭರಣಗಳನ್ನು ಕೂಡ ಧರಿಸಿದ್ದಾರೆ. 

Tap to resize

ಸಂಯುಕ್ತಾ ಸೀರೆಯಲ್ಲಿ ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ಆದರೆ ರೇಶ್ಮೆ ಸೀರೆಗೆ ಸ್ಲೀವ್‌ಲೆಸ್‌ ಬ್ಲೌಸ್‌ ಧರಿಸಿ ಸೊಂಟ ತೋರಿಸುತ್ತಿರುವುದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. 

ಅಪರೂಪಕ್ಕೆ ಸೀರೆ ಹಾಕಿಕೊಳ್ಳುವುದು ಅದರಲ್ಲೂ ಹಬ್ಬದ ದಿನ ಹಾಕಿಕೊಂಡಿದ್ಯಾ ಯಾಕೆ ಸೊಂಟ ತೋರಿಸುವುದು ಕೈ ಎತ್ತಿ ಶೋ ಆಫ್‌ ಮಾಡುವುದು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

ಸಂಯುಕ್ತಾ ಹೆಗ್ಡೆ ಸಿಕ್ಕಾಪಟ್ಟೆ ಬೋಲ್ಡ್‌ ಹುಡುಗಿ. ಜನರ ಕಾಮೆಂಟ್‌ಗೆ ಕೇರ್ ಮಾಡದೆ ಸೋಷಿಯಲ್ ಮೀಡಿಯಾದಲ್ಲಿ ಬಿಕಿನಿ ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ. 

ಕಿರಿಕ್ ಪಾರ್ಟಿ, ಕಾಲೇಜ್ ಕುಮಾರ, ಒಮ್ಮೆ ನಿಶ್ಭದ ಒಮ್ಮೆ ಯುದ್ಧ, ಪಪ್ಪಿ, ರಾನಾ, ತುರ್ತು ನಿರ್ಗಮನ, ಕ್ರೀಮ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಂಯುಕ್ತಾ ಅಭಿನಯಿಸಿದ್ದಾರೆ.

Latest Videos

click me!