ಐಷಾರಾಮಿ ಹೋಟೆಲ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಅದಿತಿ ಪ್ರಭುದೇವ; ಫ್ಯಾಮಿಲಿ ಫೋಟೋ ವೈರಲ್

First Published | Jan 15, 2025, 11:27 AM IST

ಫ್ಯಾಮಿಲಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಅದಿತಿ ಪ್ರಭುದೇವ.... ಮಗಳ ಫೋಟೋ ನೋಡಿ ಬೇಬಿ ಶಾಮಿಲಿ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು... 

ಚಂದನವನದ ಸುಂದರಿ ಅದಿತಿ ಪ್ರಭುದೇವ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಸಖತ್ ಅದ್ಧೂರಿಯಾಗಿ ತಮ್ಮ ಫ್ಯಾಮಿಲಿ ಜೊತೆ ಆಚರಿಸಿಕೊಂಡಿದ್ದಾರೆ. 

'ನಿನ್ನೆ ಹುಟ್ಟುಹಬ್ಬದ ಆಚರಣೆ ಹೀಗಿತ್ತು...ನೇಸರ ಮಗಳೇ ನಿನ್ನ ನನ್ನ ಬಾಳ ಭಾಗ್ಯ ಸೌಭಾಗ್ಯ. ನನಗೆ ತಾಯಿ ಪಟ್ಟ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ನನ್ನಮ್ಮ. ನಿನ್ನ ಮೊದಲ ವಿಶ್‌ಗೆ ಥ್ಯಾಂಕ್ಸ್‌. ಐ ಲವ್ ಯು ಎಂದು ಅದಿತಿ ಪ್ರಭುದೇವ ಬರೆದುಕೊಂಡಿದ್ದಾರೆ. 

Tap to resize

'ಯಶಸ್‌ ಥ್ಯಾಂಕ್ಸ್‌ ಕಂದ. ಇದು ಬೆಸ್ಟ್‌ ಬರ್ತಡೇ ಸೆಲೆಬ್ರೇಶನ್. ನನ್ನ ನಾನು ಇನ್ನು ಹೆಚ್ಚು ಪ್ರೀತಿಸುವಂತೆ ಮಾಡಿದ್ದಕ್ಕೆ. ನನ್ನನ್ನ ನಾನು ಅದೃಷ್ಟವಂತೆ ಅನ್ನಿಸುವಂತೆ ನಡೆದುಕೊಳ್ಳುವುದಕ್ಕೆ. ನನ್ನ ಬೆಸ್ಟ್‌ ಫ್ರೆಂಡ್, ಬಾಯ್‌ಫ್ರೆಂಡ್ ಹಾಗೂ ಪತಿ ಐ ಲವ್ ಯು' 

'ಸುಚಿತ್ರಾ ಚಂದ್ರಕಾಂತ್ ಮತ್ತು ಚಂದ್ರಕಾಂತ್..ಥ್ಯಾಂಕ್ಸ್‌ ಅತ್ತೆ-ಮಾವ ನನ್ನ ಅಪ್ಪ-ಾಮ್ಮ ಆಗಿದ್ದಕ್ಕೆ. ನೀವಿಟ್ಟಿರುವ ನಂಬಿಕೆ. ಪ್ರೀತಿಗೆ' ಎಂದು ಅತ್ತೆ-ಮಾವರನ್ನು ಹೊಗಳಿದ್ದಾರೆ.

'ಸುರೇಖಾ ಪ್ರಭುದೇವ ಥ್ಯಾಂಕ್ಸ್ ಅಮ್ಮ. ನನಗೆ ಇಂತಹ ಸುಂದರ ಜನ್ಮ ನೀಡಿದ್ದಕ್ಕೆ. ಸದಾ ನನ್ನ ಹರಸುವುದಕ್ಕೆ. ಹಾಗೆಯೇ ಶುಭಾಶಯಗಳನ್ನು ತಿಳಿಸಿದ ನಿಮ್ಮೆಲ್ಲರಿಗೂ ಕೂಡ ಥ್ಯಾಂಕ್ಸ್‌. ನಿಮ್ಮ ಪ್ರೀತಿ, ಹಾರೈಕೆಯೇ ನನ್ನ ಶಕ್ತಿ' ಎಂದು ಅದಿತಿ ಹೇಳಿದ್ದಾರೆ. 

ಹಸಿರು ಬಣ್ಣದ ಸೆಲ್ವಾರ್‌ನಲ್ಲಿ ಅದಿತಿ ಕಾಣಿಸಿಕೊಂಡರೆ. ಮಗಳು ವೈಟ್ ಫ್ರಾಕ್‌ನಲ್ಲಿ ಮಿಂಚಿದ್ದಾಳೆ. ಅದಿತಿ ಫ್ಯಾಮಿಲಿ ಫೋಟೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 

ಇತ್ತೀಚಿಗೆ ಅದಿತಿ ಪ್ರಭುದೇವ ನಟನೆಯ ಛೂ ಮಂತರ್ ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮಮ್ಮಿ ಅದಿತಿ ಕೈಯಲ್ಲಿ ಈಗ ಸೂಪರ್ ಡ್ಯೂಪರ್ ಆಫರ್‌ಗಳು ಬರುತ್ತಿದೆ. 

Latest Videos

click me!